Sunday, September 8, 2024

ಬಿ.ಬಿ.ಹೆಗ್ಡೆ ಕಾಲೇಜು: ಅಗ್ನಿವೀರ ಆಯ್ಕೆಯಾದ ವಿದ್ಯಾರ್ಥಿ ಪ್ರಜ್ವಲ್ ಶೆಟ್ಟಿಗೆ ಅಭಿನಂದನೆ

ಕುಂದಾಪುರ: ಕರ್ನಾಟಕದಿಂದ ಸೇನೆಗೆ ಸೇರುವವರ ಸಂಖ್ಯೆ ಕಡಿಮೆ. ಕರಾವಳಿ ಜಿಲ್ಲೆಗಳಲ್ಲಿ ಸ್ಥಳೀಯವಾಗಿ ನಡೆಯುವ ಸೇನಾ ನೇಮಕಾತಿ ರ್‍ಯಾಲಿಯಲ್ಲಿ ಭಾಗವಹಿಸುವವರೂ ಕಡಿಮೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಸೈನ್ಯ ಸೇವೆಯ ಕುರಿತು ಅರಿವು-ಹೆಮ್ಮೆ ಮೂಡಿಸುವ ಸಲುವಾಗಿ ಕುಂದಾಪುರದ ಡಾ. ಬಿ.ಬಿ. ಹೆಗ್ಡೆ ಕಾಲೇಜು ಅಗ್ನಿವೀರನಾಗಿ ಆಯ್ಕೆಯಾದ ತನ್ನ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿಯನ್ನು ಅಭಿನಂದಿಸುವ ವಿನೂತನ ಕಾರ್ಯಕ್ರಮವೊಂದನ್ನು ಇತ್ತೀಚೆಗೆ ಹಮ್ಮಿಕೊಂಡಿತ್ತು.

ಅಗ್ನಿವೀರನಾಗಿ ಆಯ್ಕೆಯಾಗಿ ಸೈನ್ಯ ತರಬೇತಿಗಾಗಿ ಆರ್ಟಿಲರಿ ರೆಜಿಮೆಂಟ್ ಹೈದರಾಬಾದ್‌ಗೆ ತೆರಳಲಿರುವ ಪ್ರಜ್ವಲ್ ಶೆಟ್ಟಿ ಮತ್ತು ಆತನ ಪೋಷಕರನ್ನು ಕಾಲೇಜಿನ ಎನ್‌ಸಿಸಿ ವಿದ್ಯಾರ್ಥಿಗಳು ಆಕರ್ಷಕ ಕವಾಯತಿನೊಂದಿಗೆ ಬರಮಾಡಿಕೊಂಡರು. ಕಾಲೇಜಿನ ಪ್ರವೇಶದ್ವಾರದಿಂದ ಎಡ ಬಲಗಳಲ್ಲಿ ಶಿಸ್ತಿನಿಂದ ಮಾರ್ಚ್ ಫಾಸ್ಟ್ ಮಾಡುತ್ತಾ ಬಂದ ಎನ್‌ಸಿಸಿಯ ವಿದ್ಯಾರ್ಥಿಯ ಮದ್ಯೆ ಹೆಜ್ಜೆಹಾಕಿದ ಪ್ರಜ್ವಲ್ ಶೆಟ್ಟಿಯ ಮೇಲೆ ವಿದ್ಯಾರ್ಥಿಗಳು ಹೂ ಮಳೆಗರೆದರು. ಕಾಲೇಜಿನ ಪ್ರಾಂಶುಪಾಲರು ಮತ್ತು ಪ್ರಾಚಾರ್ಯರು, ಮುಖ್ಯ ಅತಿಥಿಯ ಉಪಸ್ಥಿತಿ ವಿದ್ಯಾರ್ಥಿಗಳ ಉತ್ಸಾಹ ಹೆಚ್ಚಿಸಿತು.

ನಂತರ ನಡೆದ ಸಮಾರಂಭದಲ್ಲಿ ಕಾಲೇಜಿನ ೧೫೦೦ ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಜಿ ಸೈನಿಕ ಮತ್ತು ಸಾಹಿತಿ ಬೈಂದೂರು ಚಂದ್ರಶೇಖರ ನಾವಡರು ಪ್ರಜ್ವಲ್ ಶೆಟ್ಟಿಗೆ ಶಾಲು ಹೊದೆಸಿ, ಹಾರ ತೊಡಿಸಿ ಅಭಿನಂದಿಸಿ ಸೈನ್ಯ ಸೇವೆಯ ವೈವಿಧ್ಯತೆ-ಅವಕಾಶಗಳ ಕುರಿತು ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ| ಕೆ ಉಮೇಶ ಶೆಟ್ಟಿ ಫಲ ಪುಷ್ಪ, ಸ್ಮರಣಿಕೆ ನೀಡಿ ಸಮ್ಮಾನಿಸಿ ಪೊತ್ಸಾಹದ ನುಡಿಗಳನ್ನಾಡಿದರು. ವಿದ್ಯಾರ್ಥಿನಿಯರು ಆರತಿ ಬೆಳಗಿ ಸಹಪಾಠಿಗೆ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಚೆಸ್ ಆಟಗಾರ್ತಿ ತೃತೀಯ ಬಿಸಿ‌ಎ ವಿದ್ಯಾರ್ಥಿನಿ ದಿವ್ಯಾ ಹಾಗೂ ರಾಷ್ಟ್ರಮಟ್ಟದ ಗಾಯಕಿ ಪ್ರಥಮ ಬಿ‌ಎ ವಿದ್ಯಾರ್ಥಿನಿ ಶ್ರೇಯಾ ಖಾರ್ವಿಯನ್ನು ಸನ್ಮಾನಿಸಲಾಯಿತು. ಉಪ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಾದ್ಯಾಪಕರಾದ ರಕ್ಷಿತ ರಾವ್ ಗುಜ್ಜಾಡಿ ಸ್ವಾಗತಿಸಿದರು ಮತ್ತು ರೇಷ್ಮಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!