Sunday, September 8, 2024

ಸಾಮಾಜಿಕ ಜಾಲತಾಣದಲ್ಲಿ ಹೊಸ ಸಂಚಲನ ಮೂಡಿಸಿದ ಕನ್ನಡ ಶಾಲೆಯ ‘ನಾನು ಹರ್ಷಿಣಿ’

ಕೋಟ: ಸಾಮಾಜಿಕ ಜಾಲತಾಣ ಇತ್ತೀಚಿನ ದಿನಗಳಲ್ಲಿ ಕೆಲವೊಂದು ವಿಷಯಗಳ ಬಗ್ಗೆ ಸಮಾಜದ ಮುಂದೆ ಒಳಿತು ಕೆಡುಕುಗಳ ಬಗ್ಗೆ ಧ್ವನಿ ಎತ್ತುತ್ತಿರುವುದು ನಾವೆಲ್ಲರೂ ಕಾಣತ್ತಿರಬಹುದು. ಈಗ ತುಂಬಾ ಪ್ರಚಲಿತದಲ್ಲಿರುವ “ನಾನು ನಂದಿನಿ ಬೆಂಗಳೂರು ಬಂದಿನಿ” ಎನ್ನುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೊಸ ಕ್ರಾಂತಿ ಮೂಡಿಸಿ ಜಾಲತಾಣಗಳಾದ ಯೂಟ್ಯೂಬ್, ಇನ್‌ಸ್ಟ್ರಾಂಗಾಮ್ ಫೇಸ್‌ಬುಕ್ ಪ್ರೀಯರ ನಿದ್ದೆಗೆಡಿಸಿ ಹಲವರ ರೀಲ್ಸ್ ನಲ್ಲಿ ವೀಡಿಯೋ ಮೂಲಕ ಮನೆಮಾತಾಗಿವೆ.ಇದರ ಮುಂದಿನ ಭಾಗವಾಗಿ ಕನ್ನಡ ಶಾಲೆಯ ಮಹತ್ವ ಸಾರುವ ಭಾಗವಾಗಿ ಎಲ್ಲರ ಸ್ಟೇಟಸ್ ನಲ್ಲಿ “ನಾನು ಹರ್ಷಿಣಿ” ನಲಿದಾಡುತ್ತಿದ್ದಾಳೆ.

ಕನ್ನಡ ಶಾಲೆಯ ಉಳಿವು ಅಳಿವು ಬಗ್ಗೆ ನೂರಾರು ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಹೊಸ ಸಂಚಲನ ಈ ವಿಡಿಯೋ ಹರಿದಾಡಿ ಎಲ್ಲರ ಮನಸ್ಸು ಗೆಲ್ಲುತ್ತಿದೆ. 1.29 ಸೆಕೆಂಡ್ ಇರುವ ಈ ವಿಡಿಯೋ ಸರಕಾರಿ ಶಾಲೆಯ ಮಹತ್ವದ ಬಗ್ಗೆ ಎಲ್ಲರ ಕಣ್ಣುಗಳನ್ನು ತೆರೆಸುತ್ತಿದೆ. ಈ ವಿಡಿಯೋ ಫೇಸ್ ಬುಕ್ ನಲ್ಲಿ ಈಗಾಗಲೇ 1.9 ಮಿಲಿಯನ್ ಜನ ವೀಕ್ಷಿಸಿದ್ದು, ತೊಂಭತ್ತೊಂದು ಸಾವಿರ ಜನ ಲೈಕ್ ಮಾಡಿ ಹನ್ನೊಂದು ಸಾವಿರ ಶೇರ್ ಆಗಿದ್ದು, ಸಾವಿರದ ಏಳುನೂರು ಕಮೆಂಟ್ಸ್ ಬಂದು ಈ ಪ್ರಯತ್ನದ ಬಗ್ಗೆ ಪ್ರಶಂಸೆಯ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿದ್ದು, ಸರಕಾರಿ ಶಾಲೆಯ ಉಳಿಸುವ ಹೋರಾಟಗಾರರ ಮನಸ್ಸನ್ನು ಹುರುಪುಗೊಳಿಸಿದೆ. ಸ.ಹಿ.ಪ್ರಾ.ಶಾಲೆ ಸಾಬ್ರಕಟ್ಟೆಯ ಶಿಕ್ಷಕ ಸುರೇಂದ್ರ ಕೋಟ ಅವರ ಪರಿಕಲ್ಪನೆಯೊಂದಿಗೆ ನಿರ್ದೇಶಿಸಿ ಸಾಹಿತ್ಯ ನೀಡಿದ್ದು ಅದೇ ಶಾಲೆಯ ವಿದ್ಯಾರ್ಥಿಗಳಾದ ಕುಮಾರಿ ಪ್ರಣಿತಾ , ಪುನೀತಾ, ಅಧ್ವಿಕ್ ಎಸ್ ಅವರ ಅಭಿನಯ ಎಲ್ಲರ ಮೆಚ್ಚುಗೆ ಗಳಿಸಿದೆ. ಶಾಲೆಯ ವಿದ್ಯಾರ್ಥಿ ರೀತ್ವಿನ್ ಹಾಗೂ ಬ್ರಹ್ಮಾವರ ವಲಯದ ಬಿ.ಆರ್.ಪಿ ಯಾಗಿರುವ ಉದಯ್ ಕೋಟ ಅವರು ಹಾಡಿದ್ದಾರೆ. ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಹರ್ಷಿಣಿಯ ಅಬ್ಬರ ಜೋರಾಗಿದ್ದು ಸರಕಾರ ಕನ್ನಡ ಶಾಲೆಯ ಉಳಿವಿನ ಬಗ್ಗೆ ಜಾಗೃತಿಯ ಹೆಜ್ಜೆಯನ್ನಿಡುವ ಅಭಿಲಾಷೆ ಹೋರಾಟಗಾರರ ಮನದಲ್ಲಿ ಮೂಡಿದೆ.

ಕನ್ನಡ ಭಾಷೆ ಮಹತ್ವ ಸಾರುವುದರಲ್ಲಿ ಕನ್ನಡ ಶಾಲೆಗಳು ಮುಂಚೂಣಿಯಲ್ಲಿರುತ್ತವೆ. ಕನ್ನಡ ಶಾಲೆಯ ಅಭಿವೃದ್ಧಿಯ ಬಗ್ಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕಾದ ಅನಿವಾರ್ಯತೆ ಇದೆ. ಮುಂದಿನ ದಿನಗಳಲ್ಲಿ ಸರಕಾರದ ಗಮನಸೆಳೆದು ಕನ್ನಡ ಶಾಲೆಯ ಇನ್ನಷ್ಟೂ ಅಭಿವೃದ್ಧಿಯ ಬಗ್ಗೆ ವಿಶೇಷ ಯೋಜನೆ ರೂಪಿಸುವಂತೆ ಮನವಿ ನೀಡಲಾಗುವುದು. ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿ ಪಡೆದಿರುವ ವಿಡಿಯೋ ಎಲ್ಲರ ಮನ ಮುಟ್ಟುವಂತಿದೆ.
-ಆನಂದ್ ಸಿ ಕುಂದರ್
ಪ್ರವರ್ತಕರು, ಗೀತಾನಂದ ಫೌಂಡೇಶನ್ ಮಣೂರು-ಪಡುಕೆರೆ.

ಸರ್ಕಾರಿ ಶಾಲೆಯ ಮಹತ್ವವನ್ನು ಎತ್ತಿಹಿಡಿಯಲು ಪ್ರತಿ ಮನೆ,ಮನಸ್ಸುಗಳನ್ನು ಮುಟ್ಟಬೇಕೆನ್ನುವ ಸಲುವಾಗಿ ಸದ್ಯದ ಟ್ರೆಂಡ್ ಆದ “ನಾನು ನಂದಿನಿ” ಹಾಡನ್ನು ಬಳಸಿಕೊಂಡು ಈ ಗೀತೆಯನ್ನು ತಯಾರಿಸಿದ್ದೇವೆ. ಸರಕಾರಿ ಶಾಲಾ ಮಕ್ಕಳನ್ನೇ ಬಳಸಿಕೊಂಡು ತಯಾರಿಸಿದ ಗೀತೆ ಇಷ್ಟೊಂದು ಮಟ್ಟಕ್ಕೆ ಎಲ್ಲರನ್ನು ಮುಟ್ಟಿದ್ದು ಬಹಳ ಖುಷಿ ಕೊಟ್ಟಿದೆ. ಸರ್ಕಾರಿ ಶಾಲೆಗಳಲ್ಲಿ ಸರ್ಕಾರ,ಇಲಾಖೆ, ಶಿಕ್ಷಕರ ಹಾಗೂ ವಿದ್ಯಾಭಿಮಾನಿಗಳ ಪ್ರಯತ್ನಗಳಿಂದ ಸಾಕಷ್ಟುಸರ್ಕಾರಿ ಶಾಲಾ ಶಿಕ್ಷಣ ಇನ್ನಷ್ಟು ಎತ್ತರಕ್ಕೆ ಏರಿ ಉಚಿತ ಶಿಕ್ಷಣವನ್ನು ಸರ್ವರೂ ಪಡೆಯುವಂತಾಗ ಬೇಕೆನ್ನುವುದೇ ನಮ್ಮ ಆಶಯ.
-ಸುರೇಂದ್ರ ಕೋಟ
ಶಿಕ್ಷಕರು, ಸ.ಹಿ.ಪ್ರಾ.ಶಾಲೆ ಸಾಬ್ರಕಟ್ಟೆ


ಕನ್ನಡ ಶಾಲೆಯ ಮಹತ್ವ ಹಾಗೂ ಭಾಷೆಯ ಸೊಬಗನ್ನು ವಿಡಿಯೋ ಮೂಲಕ ಎಲ್ಲರ ಗಮನ ಸೆಳೆದಿರುವುದು ಅಭಿನಂದನೀಯ, ಕನ್ನಡ ಶಾಲೆ ಅಭಿವೃದ್ಧಿ ಪಥದಲ್ಲಿ ಸಾಗಲು ಎಲ್ಲರೂ ಕೈಜೋಡಿಸಬೇಕಾದ ಅನಿವಾರ್ಯತೆಯಿದೆ. ಕನ್ನಡ ಶಾಲೆಯ ಉಪಯೋಗದ ಅರಿವು ಮೂಡಿಸುವ ಬಗ್ಗೆ ಹೊಸ ರೀತಿಯ ಪ್ರಯತ್ನ ಮಾಡಿದ ತಂಡದ ಶ್ರಮ ಶ್ಲಾಘನೀಯ.

  • ನೀಲಾವರ ಸುರೇಂದ್ರ ಅಡಿಗ
    ಜಿಲ್ಲಾಧ್ಯಕ್ಷರು, ಕ.ಸಾ.ಪ ಉಡುಪಿ ಜಿಲ್ಲೆ

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!