spot_img
Thursday, April 30, 2026
spot_img

ಕೋಟ ಪಂಚವರ್ಣ ವತಿಯಿಂದ ಪುನಿತ್‌ರಾಜ್ ಕುಮಾರ್ ಎರಡನೇ ವರ್ಷದ ಪುಣ್ಯತಿಥಿ

ಕೋಟ: ಪುನಿತ್ ರಾಜ್ ಕುಮಾರ್ ಒರ್ವ ನಟನಲ್ಲ ಬದಲಾಗಿ ಅವರೊಬ್ಬ ಅಸಮಾನ್ಯ ಸಾಧಕ ಶಕ್ತಿ ಎಂದು ಸಾಮಾಜಿಕ ಮುಖಂಡ ರಾಘವೇಂದ್ರ ಕುಂದರ್ ಅಭಿಪ್ರಾಯಪಟ್ಟರು.

ಭಾನುವಾರ ಪಂಚವರ್ಣ ಕಛೇರಿಯಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತ್ರತ್ವದಲ್ಲಿ ಪುನಿತ್‌ರಾಜ್ ಕುಮಾರ್‌ರವರ ಎರಡನೆ ವರ್ಷದ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಯ ಸಾಧನೆಯ ಹಿಂದೆ ಅವನ ಪರಿಶ್ರಮ ಅಡಗಿರುತ್ತದೆ ಅದನ್ನು ಸದ್ವಿನಿಯೋಗ ಮಾಡಿಕೊಂಡು ಸಾಮಾಜಿಕ ಕ್ಷೇತ್ರದಲ್ಲಿ ತೋಡಗಿಸಿಕೊಳ್ಳುವುದೇ ನಿಜವಾದ ಜೀವನವಾಗಿದೆ ಅಂತಹ ಶಕ್ತಿಗಳಲ್ಲಿ ಪುನಿತ್‌ರಾಜ್ ಕುಮಾರ್ ಒಬ್ಬರು ತನ್ನ ಜೀವಿತ ಅವಧಿಯಲ್ಲಿ ಅವರ ಸಮಾಜಿಕ ಕಳಕಳಿ ತೆರೆಯ ಮರೆಯಲ್ಲಿ ಅವರ ಜನಮನ ತುಡಿತ ನಿಜಕ್ಕೂ ಅರ್ಥಪೂರ್ಣ ಎಂದು ತಮ್ಮ ಅಭಿಮತ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್ಯ ನುಡಿನಮನ ಗೈದರು.

ಪಂಚವರ್ಣ ಯುವಕಮಂಡಲದ ಸಂಘಟನಾಕಾರ್ಯದರ್ಶಿ ಗಿರೀಶ್ ಆಚಾರ್,ಪಂಚವರ್ಣ ಮಹಿಳಾ ಮಂಡಲದ ಕಾರ್ಯದರ್ಶಿ ಲಲಿತಾ ಪೂಜಾರಿ,ಸದಸ್ಯರಾದ ಶಕೀಲ ಎನ್ ಪೂಜಾರಿ, ಅಕ್ಷತಾ ಗಣೇಶ್ ,ಪಂಚವರ್ಣದ ಜೊತೆಕಾರ್ಯದರ್ಶಿ ಸಂದೇಶ್ ಆಚಾರ್, ಕೋಶಾಧಿಕಾರಿ ನಾಗರಾಜ್ ಪೂಜಾರಿ, ಸದಸ್ಯ ಕೃಷ್ಣ ಕಾಂಚನ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!