spot_img
Monday, June 15, 2026
spot_img

ಕುಂದಾಪುರ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಸ್ತು ಪ್ರದರ್ಶನ

ಕುಂದಾಪುರ: ಸ್ಥಳೀಯ ಹೋಲಿ ರೋಜರಿ ಇಂಗ್ಲಿಷ್ ಮಾಧ್ಯಮಾ ಶಾಲೆಯ ವಿದ್ಯಾರ್ಥಿಗಳಿಂದ ರೋಸಾರಿಯನ್ ಕಲೆ ಕರಕುಶಲ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.

ಅ.೨೭ ರಂದು ಇದರ ಉದ್ಘಾಟನೆಯನ್ನು ಶಾಲೆಯ ಜಂಟಿ ಕಾರ್ಯದರ್ಶಿ ಧರ್ಮಗುರು ಸ್ಟ್ಯಾನಿ ತಾವ್ರೊ ಕರಕುಶಲತೆಯಿಂದ ತಯಾರಿಸಲ್ಪಟ್ಟ ಚಿಟ್ಟೆಯ, ರೆಕ್ಕೆಗಳನ್ನು ತೆರೆದು ವಿಭಿನ್ನ ರೀತಿಯಲ್ಲಿ ಉದ್ಘಾಟಿಸಿದರು. ಮುಖ್ಯ ಅತಿಥಿ ಶಾಲೆಯ ಹಳೆ ವಿದ್ಯಾರ್ಥಿ ಡಾ.ಸಿಂಡ್ರೆಲ್ಲಾ ಗೊನ್ಸಾಲ್ವಿಸ್ ಜತೆ ನೀಡಿದರು.

ಮುಖ್ಯ ಅತಿಥಿ ಶ್ರೀದೇವಿ ಇನ್ಸುಟ್ಯುಟ್ ಆಫ್ ಟೆಕ್ನೋಜಿ ಮಂಗಳೂರು ಇದರ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ|ಸಿಂಡ್ರೆಲ್ಲಾ ಗೊನ್ಸಾಲ್ವಿ ಭಾಗವಹಿಸಿ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಕುಂದಾಪುರ ಕಾನ್ವೆಂಟಿನ ಮುಖ್ಯಸ್ಥೆ ಭಗಿನಿ ಸುಪ್ರಿಯಾ, ಭಗಿನಿ ಇವ್ಲಾ ವಿದ್ಯಾರ್ಥಿಗಳ ಪೋಷಕರು ಹಾಜರಿದ್ದರು.

ವೇದಿಕೆಯಲ್ಲಿ ಹೋಲಿ ರೋಜರಿ ಇಂಗ್ಲಿಷ್ ಮಾಧ್ಯಮಾ ಶಾಲೆಯ ಮುಖ್ಯೋಪಾಧ್ಯಾಯಿನಿ ಭಗಿನಿ ತೆರೆಜಾ ಶಾಂತಿ ಉಪಸ್ಥಿತರಿದ್ದು, ವಸ್ತುಪ್ರದರ್ಶನಕ್ಕೆ ಮಾರ್ಗದರ್ಶನ ನೀಡಿದ ಶಿಕ್ಷಕರಾದ, ಮಹಿಮಾ, ಪ್ರಶಾಂತ್ ರೇಬೆರೊ, ರತ್ನಾಕರ ಶೆಟ್ಟಿ ಇವರನ್ನು ಗೌರವಿಸಲಾಯಿತು. ಶಿಕ್ಷಕಿ ನೀತಾ ಡಿಸೋಜಾ ಸ್ವಾಗತಿಸಿದರು. ಶಿಕ್ಷಕಿ ಪ್ರೀತಿ ಬ್ರಗಾಂಜಾ ನಿರೂಪಿಸಿದರು, ಶಿಕ್ಷಕಿ ಸೆಲಿನ್ ಡಿಸೋಜಾ ವಂದಿಸಿದರು. 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!