spot_img
Thursday, April 30, 2026
spot_img

ಆವರ್ಸೆ: “ವಂಡಾರು ಮಾವಿನಕಟ್ಟೆ” ಸಾರ್ವಜನಿಕ ಬಸ್ಸು ತಂಗುದಾಣ ಉದ್ಘಾಟನೆ

ಕುಂದಾಪುರ: ವಂಡಾರು ಮಾವಿನಕಟ್ಟೆಯಲ್ಲಿ ಚಾರ್ಮಾಕ್ಕಿ ನಾರಾಯಣ ಶೆಟ್ಟಿಯವರ ಶಂಕರನಾರಾಯಣ ಕನ್ಸ್ಟ್ರಕ್ಷನ್ ಪ್ರೈ.ಲಿ. (ಎಸ್‌ಎನ್‌ಸಿ) ಸಂಸ್ಥೆ ವತಿಯಿಂದ ರೂ.10ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಆವರ್ಸೆ “ವಂಡಾರು ಮಾವಿನಕಟ್ಟೆ” ಸಾರ್ವಜನಿಕ ಬಸ್ಸು ತಂಗುದಾಣ ಮಂಗಳವಾರ ಉದ್ಘಾಟನೆ ನಡೆಯಿತು.

ಜ್ಯೋತಿಷಿ, ವೇ.ಮೂ.ರಮೇಶ ಬಾಯರಿ ವಂಡಾರು ಬಸ್ಸು ತಂಗುದಾಣ ಉದ್ಘಾಟಿಸಿದರು. ಬೆಂಗಳೂರು ಶ್ರೀಭುವನೇಶ್ವರಿ ಪ್ರೋಜೇಕ್ಟ್ಸ್ ಪ್ರೈ ಲಿ, ಮ್ಯಾನೇಜಿಂಗ್ ಡೈರೆಕ್ಟರ್, ವಂಡಾರು ಪ್ರಶಾಂತ ಶೆಟ್ಟಿ ಅವರು ವಂಡಾರು ‘ಸ್ನೇಹಜೀವಿ ಬಳಗ’ದ ನೂತನ ಕಾರ್ಯಾಲಯವನ್ನು ಉದ್ಘಾಟಿಸಿದರು.

ಆವರ್ಸೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮಣ ಪೂಜಾರಿ ನೂತನ ಅಂಗಡಿಕೋಣೆ ಉದ್ಘಾಟಿಸಿದರು.
ವಂಡಾರು ಮಾವಿನಕಟ್ಟೆಯಲ್ಲಿ ಚಾರ್ಮಾಕ್ಕಿ ನಾರಾಯಣ ಶೆಟ್ಟಿಯವರ ಶಂಕರನಾರಾಯಣ ಕನ್ಸ್ಟ್ರಕ್ಷನ್ ಪ್ರೈ.ಲಿ (ಎಸ್‌ಎನ್‌ಸಿ) ಸಂಸ್ಥೆ ವತಿಯಿಂದ ನೂತನವಾಗಿ ನಿರ್ಮಾಣಗೊಂಡ ಆವರ್ಸೆ “ವಂಡಾರು ಮಾವಿನಕಟ್ಟೆ” ಸಾರ್ವಜನಿಕ ಬಸ್ಸು ತಂಗುದಾಣವನ್ನು ಬೆಂಗಳೂರು ಶ್ರೀಭುವನೇಶ್ವರಿ ಪ್ರೋಜೇಕ್ಟ್ಸ್ ಪ್ರೈ ಲಿ, ಮ್ಯಾನೇಜಿಂಗ್ ಡೈರೆಕ್ಟರ್ ವಂಡಾರು ಪ್ರಶಾಂತ ಶೆಟ್ಟಿ ಅವರು ಆವರ್ಸೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮಣ ಪೂಜಾರಿ ಅವರಿಗೆ ಹಸ್ತಾಂತರಿಸಿದರು.

ಪ್ರಶಾಂತ ಶೆಟ್ಟಿ ವಂಡಾರು, ಪ್ರವೀಣ ಶೆಟ್ಟಿ ವಂಡಾರು, ಮಹೇಶ ಶೆಟ್ಟಿ,ಶ್ರೀನಿವಾಸ ಶೆಟ್ಟಿ ಆವರ್ಸೆ,ರಾಜೀವ ಶೆಟ್ಟಿ ಚೋರಾಡಿ,ನಿವೃತ್ತ ಮುಖ್ಯ ಶಿಕ್ಷಕ ಸೀತಾರಾಮ ಶೆಟ್ಟಿ, ನ್ಯಾಯವಾದಿ ಕೃಷ್ಣರಾಜ ಶೆಟ್ಟಿ ಚೋರಾಡಿ, ವಕೀಲ ಲಕ್ಷ್ಮಣ ಶೆಟ್ಟಿ, ಪ್ರವೀಣ ಹೆಗ್ಡೆ ವಂಡಾರು, ಸವೋತ್ತಮ ಹೆಗ್ಡೆ ವಂಡಾರು, ಆನಂದ ಶೆಟ್ಟಿ ಹಿಲಿಯಾಣ, ಪ್ರದೀಪ್ ಶೆಟ್ಟಿ ಗೋಳಿಯಂಗಡಿ,
ಗಣೇಶ ಶೆಟ್ಟಿ,ಅರುಣ ಶೆಟ್ಟಿ ನಾರ್ಕಳಿ,ಚತುರ್ ಶೆಟ್ಟಿ ಸಲ್ವಾಡಿ, ವಿಜಯಕುಮಾರ್ ಶೆಟ್ಟಿ,ಶಂಕರ ಪೂಜಾರಿ, ಆವರ್ಸೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮಣ ಪೂಜಾರಿ, ಉಪಾಧ್ಯಕ್ಷೆ ಆರತಿ ಹಾಗೂ ಸದಸ್ಯರು, ಮಾಜಿ ಅಧ್ಯಕ್ಷ ಚಿತ್ತರಂಜನದಾಸ್ ಶೆಟ್ಟಿ ಹಿಲಿಯಾಣ,ಪ್ರಮೋದ್ ಹೆಗ್ಡೆ ಹಿಲಿಯಾಣ, ಜನಾರ್ಧನ ಆಚಾರ್ಯ, ದಿವಾಕರ ಗಾಣಿಗ,ವಿಜಯಲಕ್ಷ್ಮೀ ಶೆಟ್ಟಿ,ಸ್ನೇಹಜೀವಿ ಬಳಗದವರು, ರಿಕ್ಷಾ ಮಾಲಕ-ಚಾಲಕ ಸಂಘದವರು ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು.

ಎಸ್.ಕೃಷ್ಣ ಶೆಟ್ಟಿ ಹಂದಿಗದ್ದೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!