spot_img
Thursday, April 30, 2026
spot_img

ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ಅಕ್ಷರಭ್ಯಾಸ

ಕೊಲ್ಲೂರು: ಪ್ರಸಿದ್ಧ ಶಕ್ತಿ ಕ್ಷೇತ್ರವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಅಕ್ಷರಭ್ಯಾಸ ವಿಜಯದಶಮಿ ದಿನದಂದು ನಡೆಯಿತು. ನವರಾತ್ರಿ ಸಂಭ್ರಮದ ಪ್ರಯುಕ್ತ ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರ ಸೇರಿದಂತೆ ವಿವಿದೆಡೆಯಿಂದ ಆಗಮಿಸುವ ಭಕ್ತರು ಮಕ್ಕಳಿಗೆ ವಿದ್ಯಾರಂಭ ಮಾಡಿಸಿ ಭಕ್ತಿಯನ್ನು ಸಮರ್ಪಿಸಿ, ನಂಬಿಕೆಯನ್ನು ಪುನರುಜ್ಜೀವನಗೊಳಿಸಿದರು. ವಿಜಯದಶಮಿಯ ದಿನದಂದು ನೂರಾರು ಮಂದಿ ಕೇರಳ ಮತ್ತು ಕರ್ನಾಟಕದ ಭಕ್ತರು ಮೂಕಾಂಬಿಕಾ ದೇವಸ್ಥಾನದಲ್ಲಿ ತಮ್ಮ ಮಕ್ಕಳಿಗೆ ಅಕ್ಷರಭ್ಯಾಸ ನಡೆಸುವುದು ಹಿಂದಿನಿಂದಲೂ ಬಂದ ಸಂಪ್ರದಾಯವಾಗಿದೆ. ಶಾರದಾ ದೇವಿಯ ಮೂರ್ತಿಯ ಎದುರಿನಲ್ಲಿ ಮಕ್ಕಳಿಗೆ ಮೊಟ್ಟಮೊದಲ ಅಕ್ಷರಭ್ಯಾಸ ಮಾಡಲಾಗುತ್ತದೆ. ಮಕ್ಕಳ ನಾಲಿಗೆಯ ಮೇಲೆ ಅರಿಶಿನಕೊಂಬಿನಲ್ಲಿ ಓಂಕಾರ ಬರೆಯಲಾಗುತ್ತೆ. ನಂತರ ಹೆತ್ತವರು ಮಕ್ಕಳ ಕೈ ಹಿಡಿದು ಅಕ್ಕಿಕಾಳಿನಲ್ಲಿ ಓಂಕಾರ ಹಾಗೂ ಗಣೇಶನಾಮ ಹಾಗೂ ತಮ್ಮ ಮಾತ್ರ ಭಾಷೆ, ಎ.ಬಿ,ಸಿ, ಸಂಖ್ಯೆಗಳು, ಅ,ಆ,ಇ ಮುಂತಾದವುಗಳನ್ನು ಬರೆಸುವುದರ ಬರೆಯುವ ಮೂಲಕ ಅಕ್ಷರಭ್ಯಾಸ ಮಾಡಿಸುತ್ತಾರೆ. ಬಳಿಕ ಮಕ್ಕಳ ನಾಲಗೆಯ ಮೇಲೆ ಬಂಗಾರದ ಉಂಗುರದ ಸ್ಪರ್ಶ ಮಾಡಲಾಗುತ್ತದೆ. ಪುರಾಣ ನಂಬಿಕೆಯ ಪ್ರಕಾರ ಹೀಗೆ ಮಾಡುವುದರಿಂದ ಮಕ್ಕಳ ನಾಲಗೆಯ ಮೇಲೆ ಸರ್‍ವತಿ ದೇವಿ ನೆಲೆಸಿ ಮಕ್ಕಳ ಶೈಕ್ಷಣಿಕ ಬದುಕು ಉತ್ತಮವಾಗಿರುತ್ತದೆಂಬ ನಂಬಿಕೆ ಇದೆ.

ಕೊಲ್ಲೂರು ಮುಕಾಂಬಿಕಾ ಕ್ಷೇತ್ರಕ್ಕೆ ಅಧಿಕ ಸಂಖ್ಯೆಯಲ್ಲಿ ಬಂದು ಅಕ್ಷರಭ್ಯಾಸ ನಡೆಸುವವರು ಕೇರಳದ ಭಕ್ತರು. ಕೊಲ್ಲೂರು ಶ್ರೀ ಮೂಕಾಂಬಿಕೆಯ ಸನ್ನಿಧಿಯಲ್ಲಿ ಮಕ್ಕಳಿಗೆ ವಿದ್ಯಾರಂಭ ಮಾಡಿಸುವುದರಿಂದ ಮಕ್ಕಳಿಗೆ ಉಜ್ವಲ ಭವಿಷ್ಯ ಇದೆ ಅನ್ನೋದು ಕೇರಳಿಗರ ಭಕ್ತಿ ಮತ್ತು ನಂಬಿಕೆ. ಕೇರಳ ವಿದ್ಯೆಯ ವಿಷಯದಲ್ಲಿ ಉನ್ನತ ಸ್ಥಾನದಲ್ಲಿರೋದಕ್ಕೆ ಮೂಕಾಂಬಿಕೆಯ ಆಶೀರ್ವಾದವೇ ಕಾರಣ ಅನ್ನುವ ಮಾತೂ ಇದೆ. ವಿಜಯದಶಮಿ ಎಲ್ಲ ಆರಂಭಗಳಿಗೂ ಸೂಕ್ತವಾದ ದಿನ. ಹೀಗಾಗಿ ವಿಜಯದಶಮಿಯ ವಿದ್ಯಾರಂಭಕ್ಕೆ ವಿಶೇಷವಾದ ಮಹತ್ವ ಬಂದಿದೆ. ವರ್ಷಂಪ್ರತಿ ಈ ದಿನದಂದು ಬೆಳಿಗ್ಗೆಯಿಂದಲೇ ಸಾವಿರಾರು ಭಕ್ತರು ವಿದ್ಯಾರಂಭಕ್ಕೆ ಕಾದು ಕುಳಿತಿರುತ್ತಾರೆ. ಈ ಪ್ರಕ್ರಿಯೆ ಮಧ್ಯಾಹ್ನ ೧.೩೦ ರ ವರೆಗೂ ನಡೆಯಿತು.

(ವಿನಾಯಕ ಆಚಾರ್ಯ ಕೊಲ್ಲೂರು)

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!