spot_img
Thursday, April 30, 2026
spot_img

ಅ.27ರಂದು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ “ರೇಡಿಯೋ ಕುಂದಾಪುರ 89.6 ಎಫ್ ಎಂ” ಲಾಂಛನ ಮತ್ತು ಅಧಿಕೃತ ರಾಗ ಅನಾವರಣ

ಕುಂದಾಪುರ: ಭಂಡಾರ್ಕರ್ಸ್ ಕಾಲೇಜಿನ ರೇಡಿಯೋ ಕುಂದಾಪುರ 89.6 ಎಫ್ ಎಂ ನ ಲಾಂಛನ ಮತ್ತು ಅಧಿಕೃತ ರಾಗ ಬಿಡುಗಡೆ ಕಾರ್ಯಕ್ರಮ ಅಕ್ಟೋಬರ್ 27ರಂದು   ಕಾಲೇಜಿನ ಸಭಾಂಗಣದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಪ್ರಸಿದ್ದ ಚಲನಚಿತ್ರ ಸಂಗೀತ ನಿರ್ದೇಶಕರಾದ ರವಿ ಬಸ್ರೂರು  ಲಾಂಛನ ಬಿಡುಗಡೆ ಮಾಡಲಿದ್ದಾರೆ. ಜಾದುಗಾರ, ಸಾಹಿತಿ ಓಂ ಗಣೇಶ ಇವರು ಸಿಗ್ನೇಚರ್ ಟ್ಯೂನ್ ಬಿಡುಗಡೆ ಮಾಡಲಿದ್ದಾರೆ. ಸಮಾರಂಭದ ಉದ್ಘಾಟನೆಯನ್ನು ವಿಶ್ವಸ್ತ ಮಂಡಳಿಯ ಹಿರಿಯ ಸದಸ್ಯರು ಕೆ.ಶಾಂತರಾಮ್ ಪ್ರಭು ಅವರು ಮಾಡಲಿದ್ದಾರೆ. ಸಮಾರಂಭದ  ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆಯ ಮಾಜಿ ಅಧ್ಯಕ್ಷರಾಗಿರುವ ಎ.ಎಸ್.ಎನ್ ಹೆಬ್ಬಾರ್ ವಹಿಸಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ತಿಳಿಸಿದ್ದಾರೆ.

ಭಂಡಾರ್ಕಾರ್ಸ್ ಕಾಲೇಜಿನ ಮಹತ್ವದ ಸಮುದಾಯ ಯೋಜನೆ “ರೇಡಿಯೋ ಕುಂದಾಪುರ 89.6 ಎಫ್ ಎಮ್ “ಸಿದ್ಧಗೊಳ್ಳುತ್ತಿದ್ದು ತಾಂತ್ರಿಕ ಕಾರ್ಯ ಪೂರ್ಣಗೊಳ್ಳುತ್ತಿದೆ. ಈ ಬಾನುಲಿ ಕೇಂದ್ರ 25 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕೇಳಬಹುದಾಗಿದ್ದು, ಧ್ವನಿ ಪರೀಕ್ಷೆ ಯಶಸ್ವಿಯಾಗಿದೆ. ಕುಂದಾಪುರ ತಾಲೂಕಿನ ಜನರು ದೇಶ ವಿದೇಶದಲ್ಲಿದ್ದರು ರೇಡಿಯೋ ಕುಂದಾಪುರ ಕೇಳುವಂತೆ ಮಾಡುವ ಅಪ್ ರೂಪಿಸಲಾಗುತ್ತಿದ್ದು ದೆಹಲಿಯ ತಂತ್ರಜ್ಞರು ಈ ಬಗ್ಗೆ ಸಿದ್ಧತೆ ನಡೆಸುತ್ತಿದ್ದಾರೆ.

ಉದ್ದೇಶ :
ಜನರ ನಾಡಿ ಮಿಡಿತದ ಮಾಧ್ಯಮವಾಗಿ ಎಲ್ಲಾ ಸಮುದಾಯದ ಆಚಾರ ವಿಚಾರಗಳ ಸಾಂಸ್ಥಿಕವಾಗಿ ವಿಚಾರ ವಿನಿಮಯ ಮಾಡುವುದು. ಎಲ್ಲಾ ಸಮುದಾಯದ ಸುಸ್ಥಿರ ಸಬಲೀಕರಣಕ್ಕೆ ಸೃಜನಶೀಲ ಮತ್ತು ಉಪಯುಕ್ತ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದು. ಶಿಕ್ಷಣ ಸಂಸ್ಕೃತಿ, ಪರಿಸರ ,ಕೃಷಿ,ಮೀನುಗಾರಿಕೆ,ಆರೋಗ್ಯ,ಪ್ರವಾಸೋದ್ಯಮ, ಸ್ವ ಉದ್ಯಮ ಮತ್ತು ಉದ್ಯೋಗ ಸಂಬಂಧಿತ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದು. ಕುಂದಾಪುರ ನಗರ ಮತ್ತು ಸುತ್ತಮುತ್ತಲಿನ ಗ್ರಾಮೀಣ ಸಮುದಾಯದ ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮಗಳನ್ನು ರೂಪಿಸಿ ಪ್ರಸಾರ ಮಾಡಲು ರೇಡಿಯೋ ಕುಂದಾಪುರ ಸಮುದಾಯ ರೇಡಿಯೋ ಕೇಂದ್ರ ಧ್ವನಿ ಯಾಗುವುದು. ಎಲ್ಲಾ ಸಮುದಾಯಗಳ ಸಾಂಸ್ಥಿಕ ಬದುಕಿನ ಪ್ರತಿಬಿಂಬವಾಗಿ ರೇಡಿಯೋ ಕುಂದಾಪುರ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದು. ಸಮುದಾಯದ ಒಳಗೊಳ್ಳುವಿಕೆಯೊಂದಿಗೆ ನಿತ್ಯ ಜೀವನಕ್ಕೆ ಅಗತ್ಯವಾದ ಅರಿವು ತಿಳಿವಿನ ವಿಚಾರ ವಿನಿಮಯವನ್ನು ಬಾನುಲಿ ಮುಖಾಂತರ ಮಾಡುವುದು ಇದರ ಉದ್ದೇಶವಾಗಿದೆ.

ರೇಡಿಯೋ ಕುಂದಾಪುರ:

ರೇಡಿಯೋ ಕುಂದಾಪುರ 89.6 ಎಫ್ ಎಂ ಒಂದು ಸಮುದಾಯ ಬಾನುಲಿ ಕೇಂದ್ರವಾಗಿದೆ. ಇದು ಕರಾವಳಿ ಸೀಮೆಯ ಕುಂದಾಪುರದ ಮೊಟ್ಟಮೊದಲ ಸಮುದಾಯ ಬಾನುಲಿ ಆಗಿರುವುದು ಹೆಮ್ಮೆಯ ವಿಷಯ. ಸಮುದಾಯದ ಶಿಕ್ಷಣ ಮತ್ತು ಸಂಸ್ಕೃತಿಯ ಸುಸ್ಥಿರತೆಯನ್ನೇ ಉದ್ದೇಶವನ್ನಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಬಾನುಲಿ ಕೇಂದ್ರ ಇದಾಗಿದೆ. ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಯಿಂದ ಸಮಗ್ರ ಶಿಕ್ಷಣವನ್ನು ಈ ಬಾನಲಿ ಕೇಂದ್ರ ಗುರುತಿಸಿ ಕಾರ್ಯಕ್ರಮಗಳನ್ನು ರೂಪಿಸುತ್ತದೆ.ಇದು ಸಮುದಾಯಗಳ ಧ್ವನಿಯಾಗಿ ಅವರಿಗೆ ಅಗತ್ಯವಾದ ವಿಷಯ ಕುರಿತ ಅಭಿವೃದ್ಧಿ ಪೂರಕ ಕಾರ್ಯಕ್ರಮಗಳನ್ನು ಆಯಾ ಸಮುದಾಯಗಳ ಮುಖಾಂತರವೇ ಮಾಡಿಸಬೇಕು ಎಂಬ ಆಶಯ ಹೊಂದಿದೆ.ಸ್ಥಳೀಯ ಕಲೆ,ಸಂಸ್ಕೃತಿ,ಪರಿಸರ, ಆರೋಗ್ಯ,ಮೀನುಗಾರಿಕೆ, ಕೃಷಿ, ನಾಡು ನುಡಿಗಳನ್ನು ಉಳಿಸಿ ಬೆಳೆಸುವ ನೆಲೆಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತದೆ. ಕುಂದಾಪುರ ತಾಲೂಕು ಮತ್ತು ಉಡುಪಿ ಜಿಲ್ಲೆಯ ಪ್ರತಿಯೊಬ್ಬ ಸಂವೇದನಾಶೀಲ ಮನಸ್ಸುಗಳಿಗೆ ಪ್ರತಿಭಾನ್ವಿತರ ಮುಕ್ತ ಅಭಿವ್ಯಕ್ತಿಗೆ ರೇಡಿಯೋ ಕುಂದಾಪುರ ವೇದಿಕೆ ಆಗಲಿದೆ.ಕುಂದಾಪುರದ ಎಲ್ಲಾ ಸಮುದಾಯಗಳ ಧ್ವನಿ ಆಗಲಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!