spot_img
Thursday, April 30, 2026
spot_img

ವಂಡ್ಸೆ: ಅಂಚೆ ನಿರೀಕ್ಷಕರಾಗಿ ಭಡ್ತಿ ಹೊಂದಿದ ಶ್ರೀಲಕ್ಷ್ಮೀ ಅವರಿಗೆ ಬೀಳ್ಕೊಡುಗೆ

ಕುಂದಾಪುರ: ವಂಡ್ಸೆ ಅಂಚೆ ಕಛೇರಿಯ ಅಂಚೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಲಕ್ಷ್ಮೀ ಕೆ ಅವರ ಅಂಚೆ ನಿರೀಕ್ಷಕರಾಗಿ ಬೆಂಗಳೂರು ಅಂಚೆ ಕಛೇರಿಗೆ ಭಡ್ತಿ ಹೊಂದಿದ್ದು, ಅವರಿಗೆ ಬೀಳ್ಕೋಡುಗೆ ಕಾರ್ಯಕ್ರಮ ವಂಡ್ಸೆ ಅಂಚೆ ಕಛೇರಿಯಲ್ಲಿ ಅ.18ರಂದು ನಡೆಯಿತು.

ಶ್ರೀಲಕ್ಷ್ಮೀ ಅವರು ನಾಲ್ಕು ತಿಂಗಳ ಹಿಂದೆ ವರ್ಗಾವಣೆಗೊಂಡು ವಂಡ್ಸೆ ಅಂಚೆ ಕಛೇರಿಗೆ ಆಗಮಿಸಿದ್ದರು. ಇವರು ಅಖಿಲ ಭಾರತ ಮಟ್ಟದ ಅಂಚೆ ನಿರೀಕ್ಷಕರ ಆಯ್ಕೆ ಪರೀಕ್ಷೆಯಲ್ಲಿ 6ನೇ ರ್‍ಯಾಂಕ್, ರಾಜ್ಯ ಮಟ್ಟದಲ್ಲಿ 2ನೇ ರ್‍ಯಾಂಕ್ ಪಡೆದಿದ್ದಾರೆ.

ಬೀಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪ ಅಂಚೆಪಾಲಕರಾದ ಭಾಗೀರಥಿ ಜಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಂಚೆ ಕಛೇರಿಯ ಸಿಬ್ಬಂದಿ ವರ್ಗದವರು, ಶಾಖಾ ಅಂಚೆ ಕಛೇರಿಯ ಸಿಬ್ಬಂದಿಗಳು, ನಿವೃತ್ತ ಅಂಚೆ ಸೇವಕ ವಿ.ಆನಂದ್ ನಾಯ್ಕ್ ಉಪಸ್ಥಿತರಿದ್ದರು.

ಇಡೂರು ಶಾಖಾ ಅಂಚೆ ಪಾಲಕರಾದ ಪ್ರಸನ್ನ ಕುಮಾರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಚಿತ್ತೂರು ಶಾಖಾ ಅಂಚೆ ಪಾಲಕರಾದ ಪ್ರಮೋದ್ ಸ್ವಾಗತಿಸಿದರು. ಅಂಚೆ ಸಹಾಯಕರಾದ ಗೋವಿಂದ ಶೆಟ್ಟಿಯವರು ಶ್ರೀಲಕ್ಷ್ಮೀ ಅವರ ಪರಿಚಯಿಸಿದರು. ಮೇಲ್ ಹೊಸೂರು ಶಾಖಾ ಅಂಚೆ ಕಛೇರಿಯ ಸಿಬ್ಬಂದಿ ಅರ್ಚನಾ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!