spot_img
Friday, March 27, 2026
spot_img

ಚಲೋ ಸೇನಾಪುರ : ಬೃಹತ್ ಪ್ರತಿಭಟನಾ ಸಭೆ | ಇಲಾಖೆ ಪೂರಕವಾಗಿ ಸ್ಪಂದಿಸದಿದ್ದರೆ ಅನಿರ್ದಿಷ್ಟಾವಧಿ ಹೋರಾಟ : ರಾಜೀವ್‌ ಪಡುಕೋಣೆ

ಜನಪ್ರತಿನಿಧಿ ವಾರ್ತೆ :  ಸೇನಾಪುರ ನಿಲ್ದಾಣದಲ್ಲಿ ಎಕ್ಸ್‌ ಪ್ರೆಸ್‌ ರೈಲು ನಿಲುಗಡೆ ಹೋರಾಟ ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮೆರವಣಿಗೆ ನಾಡಾ ಗ್ರಾಮ ಪಂಚಾಯತ್‌ ನಿಂದ ಆರಂಭಗೊಂಡು ಸೇನಾಪುರ ರೈಲ್ವೇ ನಿಲ್ದಾಣದವರೆಗೆ ಸಾಗಿಬಂದು, ಬಳಿಕ ರೈಲ್ವೇ ನಿಲ್ದಾಣದಲ್ಲಿ ಬೃಹತ್‌ ಪ್ರತಿಭಟನಾ ಸಭೆ ನಡೆಯಿತು. ಕುಂದಾಪುರ ತಾಲೂಕು ಸೇನಾಪುರ ರೈಲ್ವೇ ನಿಲ್ದಾಣದಲ್ಲಿ ಎಲ್ಲಾ ಎಕ್ಸ್‌ ಪ್ರೆಸ್‌ ರೈಲು ನಿಲುಗಡೆಗೆ ಒತ್ತಾಯಿಸಿ ಸೇನಾಪುರ ರೈಲ್ವೇ ನಿಲ್ದಾಣದ ಎದುರುನಡೆದ ಬೃಹತ್‌ ಪ್ರತಿಭಟನೆಯಲ್ಲಿ 24 ಗ್ರಾಮದ ಜನರ ಸಮ್ಮುಖದಲ್ಲಿ ನಮ್ಮ ಹಕ್ಕೊತ್ತಾಯದ ಮನವಿಯನ್ನು ಪ್ರಾದೇಶಿಕ ರೈಲ್ವೇ ವ್ಯವಸ್ಥಾಪಕರು ಕೊಂಕಣ ರೈಲ್ವೇ ಕಾರ್ಪೋರೇಷನ್‌ ಲಿ, ಶಿರ್ವಾಡ, ಕಾರಾವಾರ ಇವರಿಗೆ ಸಲ್ಲಿಸಲಾಯಿತು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಹೋರಾಟ ಸಮಿತಿಯ ಸಂಚಾಲಕ ರಾಜೀವ್‌ ಪಡುಕೋಣೆ. ಸೇನಾಪುರ ರೈಲ್ವೇ ನಿಲ್ದಾಣದಲ್ಲಿ ಮೂರು ರೈಲ್ವೇ ಟ್ರ್ಯಾಕ್‌ ಗಳಿರುವುದಲ್ಲದೇ, ರೈಲು ನಿಲುಗಡೆಗೆ ಬೇಕಾದ ಪೂರಕವಾದ ಎಲ್ಲಾ ವ್ಯವಸ್ಥೆಗಳಿದ್ದರೂ ಇಲ್ಲಿ ಎಕ್ಸ್‌ ಪ್ರೆಸ್‌ ರೈಲು ನಿಲುಗಡೆಯಾಗುತ್ತಿಲ್ಲ. ಎಕ್ಸ್‌ ಪ್ರೆಸ್‌ ರೈಲು ನಿಲುಗಡೆಯಾದರೇ ಇಲ್ಲಿನ ಸುತ್ತಮುತ್ತ ಸುಮಾರು ೨೪ ಗ್ರಾಮದ ಜನರಿಗೆ ಪ್ರಯೋಜನವಾಗಲಿದೆ. ಕಾರಾವಾರ, ಗೋವಾ, ರತ್ನಗಿರಿ, ಮುಂಬೈ, ಹಾಸನ , ಮೈಸೂರು, ಬೆಂಗಳೂರು ಹಾಗೂ ಕೇರಳ ರಾಜ್ಯದ ನಗರಗಳಲ್ಲಿ ವಾಸವಿರುವವರಿಗೆ ಪ್ರಯಾಣಕ್ಕೆ ಸುಲಭವಾಗುತ್ತದೆ. ಇಲ್ಲಿ ರೈಲು ನಿಲುಗಡೆ ಮಾಡುವುದರಿಂದ ರೈಲ್ವೇ ಇಲಾಖೆಗೂ ಲಾಭವಾಗಲಿದೆ ಎಂದು ಅವರು ಹೇಳಿದರು.

ಸೇನಾಪುರದಲ್ಲಿ ಎಕ್ಸ್‌ ಪ್ರೆಸ್‌ ರೈಲು ನಿಲುಗಡೆಯಾದರೇ ಇಲ್ಲಿನ ಸ್ಥಳೀಯ ಪ್ರವಾಸೋದ್ಯಮ ಮತ್ತು ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯಾಗಲಿದೆ. ಸೇನಾಪುರದ ರೈಲ್ವೇ ನಿಲ್ದಾಣದ ಸುತ್ತಮುತ್ತಲಿನ ಪ್ರವಾಸೋದ್ಯಮಕ್ಕೂ ಇದು ಪರೋಕ್ಷವಾಗಿ ಅನುಕೂಲವಾಗಲಿದೆ. ರೈಲು ನಿಲುಗಡೆಯಾಗುವ ತನಕ ಹೋರಾಟ ನಿರಂತರವಾಗಿ ಮಾಡುತ್ತೇವೆ. ಪ್ರಜಾಪ್ರಭುತ್ವದಲ್ಲಿ ಆಳುವ ಸರ್ಕಾರ ಪ್ರಜೆಗಳಿಗೆ ಅನುಕೂಲವಾಗುವಂತೆ ನಡೆದುಕೊಳ್ಳಬೇಕು. ಸರ್ಕಾರ ಮತ್ತು ರೈಲ್ವೆ ಇಲಾಖೆ ನಮ್ಮ ಮನವಿಗೆ ಪೂರಕವಾಗಿ ಸ್ಪಂದಿಸದೇ ಇದ್ದಲ್ಲಿ ಅನಿರ್ದಿಷ್ಟಾವಧಿ ಹೋರಾಟ ಮಾಡುತ್ತೇವೆ ಎಂದು ಅವರು ಆಕ್ರೋಶ ಹೊರ ಹಾಕಿದ್ದಾರೆ.

ಪತ್ರಕರ್ತ ಜಾನ್‌ ಡಿʼಸೋಜಾ ಮಾತನಾಡಿ, ರೈಲ್ವೇ ನಿಲುಗಡೆಗೆ ತಾಂತ್ರಿಕವಾಗಿ, ಕೇರಳ ಮಾದರಿಯಲ್ಲಿ ಬೇಡಿಕೆಯನ್ನು ಮುಂದಿಡುವುದು ಅನಿವಾರ್ಯತೆ ಇದೆ. ಹೋರಾಟ, ಪ್ರತಿಭಟನೆ ಅಷ್ಟೇ ಅಲ್ಲದೆ ಈ ಭಾಗದ ಸಂಸದರನ್ನು, ಜನಪ್ರತಿನಿಧಿಗಳನ್ನು ಮುಂದಿಟ್ಟುಕೊಂಡು ಮುನ್ನಡೆಯಬೇಕು. ಜನ  ಸೇರಿಸಿ ಮಾಡುವ ಹೋರಾಟಕ್ಕೆ, ಪ್ರತಿಭಟನೆಗೆ ರೈಲ್ವೇ ಇಲಾಖೆಯಾಗಲಿ, ಅಧಿಕಾರಿಯಾಗಲಿ ಯಾರೂ ಸ್ಪಂದಿಸುವುದಿಲ್ಲ. ಜನರ ಒಗ್ಗಟ್ಟು ಈ ಪ್ರತಿಭಟನೆ ಮೂಲಕ ಆಗಿದೆ. ಇನ್ನು, ಜನಪ್ರತಿನಿಧಿಗಳನ್ನು ಮುಂದಿಟ್ಟುಕೊಂಡು ಇಲ್ಲಿನ ಅಗತ್ಯತೆಯನ್ನು ಗುರುತಿಸಿ ಬೇಡಿಕೆ ಇಡುವುದು ಬಹಳ ಮುಖ್ಯ. ತಾಂತ್ರಿಕವಾಗಿ ಹೋರಾಡುವುದು ಬಹಳ ಸೂಕ್ತವಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.

ತಾಲೂಕು ಪಂಚಾಯತ್‌ ನ ಮಾಜಿ ಸದಸ್ಯರಾದ ಕೆನಡಿ ಪಿರೆರಾ, ಕಾರ್ಮಿಕ ಮುಖಂಡ ಸುರೇಶ್‌ ಕಲ್ಲಗಾರ್‌, ಕೆಂಚನೂರು ಸೋಮಶೇಖರ್‌ ಶೆಟ್ಟಿ,  ಮಾಜಿ ಮಂಡಲ ಪ್ರಧಾನರು  ಅರುಣ್‌ ಕುಮಾರ್‌ ಶೆಟ್ಟಿ, ವರಾಹಸ್ವಾಮಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಸತೀಶ್‌ ಎಂ ನಾಯಕ್‌ ಮರವಂತೆ, ಸೇರಿ 24 ಗ್ರಾಮದ ಗ್ರಾಮಸ್ಥರು, ಹೋರಾಟ ಸಮಿತಿಯ ಸದಸಸ್ಯರು ಉಪಸ್ಥಿತರಿದ್ದರು. ಹೋರಾಟ ಸಮಿತಿಯ ಮುಖಂಡ ಫಿಲಿಪ್‌ ಡಿʼಸಿಲ್ವಾ ಪ್ರಸ್ತಾವಿಸಿ ಸ್ವಾಗತಿಸಿದರು, ರಾಜೇಶ್‌ ಪಡುಕೋಣೆ ವಂದಿಸಿದರು, ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.

ಪರೋಕ್ಷವಾಗಿ 24 ಗ್ರಾಮಗಳ ಕಡೆಗಣನೆ :  

ಸೇನಾಪುರದ ಗ್ರಾಮದ ಮೇಲೆಯೆ ಹತ್ತಾರು ರೈಲುಗಳು ಓಡಾಡುತ್ತಿದ್ದರೂ ಇಲ್ಲಿನ ಜನರಿಗೆ ಅದರ ಪ್ರಯೋಜನವನ್ನು ಪಡೆಯುವುದಕ್ಕೆ ಸಾಧ್ಯವಾಗಿಲ್ಲ. ಇದು ರೈಲು ಇಲಾಖೆಯ ಘೋರ ಔಐಫಲ್ಯ. ಸಾರ್ವಜನಿಕ ಸಂಸ್ಥೆಯೊಂದು ಎಲ್ಲರಿಗೂ ಸೇವೆ ಕೊಡುವಂತಿರಬೇಕು. ಸೇನಾಪುರದಲ್ಲಿ ಅಗತ್ಯವಿರುವ ಎಕ್ಸ್‌ ಪ್ರೆಸ್‌ ರೈಲು ನಿಲುಗಡೆ ಮಾಡದೇ ಇರುವುದರಿಂದ ಪರೋಕ್ಷವಾಗಿ 24 ಗ್ರಾಮಗಳನ್ನು ಕಡೆಗಣನೆ ಮಾಡಲಾಗುತ್ತಿದೆ.

-ಸುರೇಶ್‌ ಕಲ್ಲಗಾರ್‌
ಕಾರ್ಮಿಕ ಮುಖಂಡರು

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!