Sunday, September 8, 2024

ಬರೆಯುವುದಕ್ಕೆ ಮುಂದಾಗುವವರ ಕಣ್ಗಳಲ್ಲಿ ಅಸ್ಪೃಶ್ಯತೆ ಇರಬಾರದು : ಶ್ರೀರಾಜ್‌ ವಕ್ವಾಡಿ ಅಭಿಮತ | ಡಾ. ಬಿ.ಬಿ ಹೆಗ್ಡೆ ಕಾಲೇಜಿನ ಕನ್ನಡ ಸಂಘದಿಂದ ಉಪನ್ಯಾಸ ಕಾರ್ಯಕ್ರಮ

ಜನಪ್ರತಿನಿಧಿ ವಾರ್ತೆ : ಎಲ್ಲಿ ಅವ್ಯಕ್ತವನ್ನು ಹೇಳುವಲ್ಲಿ ಸಾಹಿತಿಯೊಬ್ಬ ಸೋಲುತ್ತಾನೋ, ಅಲ್ಲಿ ಉಳಿದದ್ದೆಲ್ಲವೂ ಸೋತಂತೆ. ಇಲ್ಲಿ ಅವ್ಯಕ್ತವಾಗಿರುವ ಧ್ವನಿಗೆ ಹಿಂದಿನ ಎಲುಬಾಗಿ ಸಾಹಿತ್ಯ ಮಾಧ್ಯಮ ಕೆಲಸ ಮಾಡಬೇಕು. ಬರೆಯುವುದಕ್ಕೆ ಮುಂದಾಗುವವರ ಕಣ್ಣುಗಳಲ್ಲಿ ಅಸ್ಪೃಶ್ಯತೆ ಇರಬಾರದು ಎಂದು ಲೇಖಕ, ಪತ್ರಕರ್ತ ಶ್ರೀರಾಜ್‌ ವಕ್ವಾಡಿ ಅಭಿಪ್ರಾಯ ಪಟ್ಟರು.

ಅವರು ಡಾ. ಬಿ. ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಂಘ ಆಯೋಜಿಸಿದ ʼಬರವಣಿಗೆ ಕೌಶಲʼ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಜಗತ್ತಿನ ಮೇಲ್ಪದರವನ್ನು ತೋರಿಸುವುದಷ್ಟೇ ಸಾಹಿತ್ಯವಲ್ಲ. ಸಾಮಾನ್ಯನಿಗೆ ಕಾಣಿಸದಿರುವುದನ್ನು ಧ್ವನಿಸುವ ಪ್ರಯತ್ನವನ್ನು ಸಾಹಿತ್ಯ ಮಾಡಬೇಕು. ನೋಡುವುದಕ್ಕೆ ನೂರು ಬಗೆಗಳಿದ್ದ ಹಾಗೆ, ಸಾಹಿತ್ಯದ  ಸೃಷ್ಟಿಯೂ ನೂರು ಬಗೆಗಳಲ್ಲಿ ಆಗಬೇಕು. ಮನಸ್ಸು ಮತ್ತು ನಿದ್ರೆಯ ನಡುವಿನ ಉದಾಸೀನತೆಯಿಂದ ಎಚ್ಚರಗೊಂಡಾಗ ಜಗತ್ತಿನಲ್ಲಿ ಅದೃಶ್ಯವಾಗಿರುವುದು ಕಾಣಿಸುತ್ತದೆ.  ಸಾಹಿತಿಯಾದವನ್ನು ಅಂತಹ ವಿಚಾರಗಳನ್ನು ಆಯ್ಕೆ ಮಾಡಿಕೊಳ್ಳುವುದರ ಮೂಲಕ ಇಲ್ಲಿನ ನಡೆಯುತ್ತಿರುವ ತಪ್ಪುಗಳ ವಿರುದ್ಧ ಪ್ರತಿಭಟನೆಯ ಕೂಗಿಗೆ ಜೀವಾಳವಾಗಿ ನಿಲ್ಲಬೇಕು ಎಂದರು.

ಬರವಣಿಗೆಯ ವಿಷಯಗಳ ಆಯ್ಕೆಯಲ್ಲಿಯೇ ತಪ್ಪಾಗುತ್ತಿದೆ. ವಿಷಯಗಳ ಆಯ್ಕೆಯೇ ಬರಹಗಾರರಿಗೆ ಬರಣಿಗೆಯ ಕೌಶಲವನ್ನು ಕಲಿಸಿಕೊಡುತ್ತದೆ. ಪ್ರಸ್ತುತತೆಯ ಸೆಳೆತ ಸಾಹಿತ್ಯಕ್ಕೆ ಮುಖ್ಯ. ಯಾವ ಬರಹ ಪ್ರಸ್ತುತತೆಗೆ ತೊಡಗಿಕೊಳ್ಳುವುದಿಲ್ಲವೋ ಅದು ಗೆಲ್ಲುವುದಕ್ಕೆ ಸಾಧ್ಯವಿಲ್ಲ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ. ಉಮೇಶ್‌ ಶೆಟ್ಟಿ, ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಚಿಂತನೆ ಅಗತ್ಯ. ಸಾಮಾಜಿಕ ಮಾಧ್ಯಮಗಳು ಎಲ್ಲರಿಗೂ ಬರೆಯುವುದಕ್ಕೆ ಅವಕಾಶ ಮಾಡಿಕೊಟ್ಟರೂ, ಅದು ಒಳ್ಳೆಯ ಬರಗಳ ಸೃಷ್ಟಿಗೆ ವೇದಿಕೆಯಾಗಿಲ್ಲ. ಹೊಸ ತಲೆಮಾರು ಬರವಣಿಯ ಕೌಶಲ ಬೆಳೆಸಿಕೊಳ್ಳುವುದಕ್ಕೆ ಇಂತಹ ಉಪನ್ಯಾಸ ವೇದಿಕೆಗಳು ಇನ್ನಷ್ಟು ಸೃಷ್ಟಿಯಾಗುವ ಅನಿವಾರ್ಯತೆಯಿದೆ ಎಂದರು.

ಕಾಲೇಜಿನ ಉಪ ಪ್ರಾಂಶುಪಾಲ ಚೇತನ್‌ ಶೆಟ್ಟಿ ಕೋವಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಕಾರ್ಯಕ್ರಮದ ಸಂಯೋಜಕಿ, ಉಪನ್ಯಾಸಕಿ ರೇಷ್ಮಾ ಶೆಟ್ಟಿ, ವಿನಯಾ ವಿ. ಶೆಟ್ಟಿ, ಕನ್ನಡ ಸಂಘದ ವಿದ್ಯಾರ್ಥಿ ಪ್ರತಿನಿಧಿ ದರ್ಶನ್‌ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ದೃಷಿತಾ ಸ್ವಾಗತಿಸಿ, ನಾಗಶ್ರೀ ಹೆಬ್ಬಾರ್‌ ವಂದಿಸಿದರು. ಸವಿನಾ ಪರಿಚಯಿಸಿ, ಕಾಲೇಜಿನ ಕನ್ನಡ ಸಂಘದ ವಿದ್ಯಾರ್ಥಿನಿಯರ ಪ್ರತಿನಿಧಿ ಕೀರ್ತಿ ಕೆ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!