Sunday, September 8, 2024

ಉಡುಪಿ ಜಿಲ್ಲೆಯಲ್ಲಿ ಮುಂದುವರಿದ ಲಾರಿ, ಟೆಂಪೋ ಮುಷ್ಕರ


ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ಲಾರಿ, ಟೆಂಪೋ ಚಾಲಕ-ಮಾಲಕರ ಮುಷ್ಕರ ಮುಂದುವರಿದೆ. ಲಾರಿ, ಟಿಪ್ಪರ್, ಟೆಂಪೋಗಳು ರಸ್ತೆಗಿಳಿಯದೆ ಕಟ್ಟಡ ಸಾಮಗ್ರಿಗಳ ಸಾಗಾಟವನ್ನು ಸ್ಥಗಿತಗೊಳಿಸಿವೆ. ಜಿಲ್ಲೆಯಾದ್ಯಂತ ಲಾರಿ, ಟೆಂಪೋಗಳನ್ನು ಮುಖ್ಯ ರಸ್ತೆಯ ಬದಿಯಲ್ಲಿ ಒಂದರಹಿಂದೊಂದರಂತೆ ನಿಲ್ಲಿಸಿ ಅಲ್ಲಲ್ಲಿ ಧರಣಿ ನಡೆಸುತ್ತಿದ್ದಾರೆ.

ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಮುಷ್ಕರದ ಪರಿಣಾಮ ಜಿಲ್ಲೆಯ ನಿರ್ಮಾಣ ಕಾಮಗಾರಿ ಮತ್ತು ಕೃಷಿ ವಲಯದ ಮೇಲೆ ಆಗುತ್ತಿದೆ. ಜಿಲ್ಲೆಯಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಲಾರಿ ಟೆಂಪೋಗಳಿವೆ. ಎಲ್ಲವೂ ಸಂಚಾರ ಸ್ಥಗಿತಗೊಳಿಸಿವೆ. ಈ ಸಮಯದಲ್ಲಿ ತೋಟದ ಕೆಲಸಗಳು ನಡೆಯುತ್ತಿರುವುದರಿಂದ ಗೊಬ್ಬರ, ಮಣ್ಣು ಪೂರೈಕೆಗೆ ಮುಷ್ಕರದಿಂದ ಸಮಸ್ಯೆಯಾಗಿದೆ.

ಕಟ್ಟಡ ಸಾಮಗ್ರಿಗಳ ಸಾಗಾಣಿಕೆಗೆ ಲೀಸ್ ಮೂಲಕ ಸೂಕ್ತ ಪರವಾನಿಗೆ ನೀಡುವ ತನಕ ತಾತ್ಕಾಲಿಕ ವ್ಯವಸ್ಥೆಯಡಿ ಕಾರ್ಯನಿರ್ವಹಿಸಲು ಅನುಮತಿ ನೀಡಬೇಕು. ಲಾರಿ ಟೆಂಪೊಗಳಿಗೆ ಜಿಪಿ‌ಎಸ್ ಅಳವಡಿಸಲು ಜಿಲ್ಲಾಡಳಿತ ಸಭೆ ಕರೆದು ಮಾಹಿತಿ ನೀಡಬೇಕು. ಇಲ್ಲವಾದರೆ ಮುಷ್ಕರ ನಿಲ್ಲಿಸುವುದಿಲ್ಲ ಎಂದು ಒಕ್ಕೂಟ ಹಠ ಹಿಡಿದಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!