Sunday, September 8, 2024

ಕುಂದಾಪುರ: ಶ್ರೀ ಮಹಾಲಕ್ಷ್ಮೀ ಪ್ರಾಥಮಿಕ ಸೇವಾ ಸಹಕಾರ ಸಂಘ ಉದ್ಘಾಟನೆ


ಕುಂದಾಪುರ, ಸೆ.28: (ಜನಪ್ರತಿನಿಧಿ ವಾರ್ತೆ) ಸಹಕಾರ ವ್ಯವಸ್ಥೆ ಪ್ರಸ್ತುತ ಜನಸಾಮಾನ್ಯರಿಗೆ ಅತ್ಯಂತ ಆಪ್ತವಾಗಿದೆ. ವಾಣಿಜ್ಯ ಬ್ಯಾಂಕುಗಳಿಗಿಂತ ಸಹಕಾರಿ ಸಂಘಗಳು ಉತ್ತಮ ಸೇವೆ ನೀಡುವ ಮೂಲಕ ಗ್ರಾಮೀಣ ಪ್ರದೇಶದ ಜನಸಾಮಾನ್ಯರಿಗೆ ಅನುಕೂಲವಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳು ವಿಲೀನಗೊಳ್ಳುತ್ತಿದೆ. ಜೊತೆಯಲ್ಲಿ ಅಲ್ಲಿ ಭಾಷೆಯ ಸಮಸ್ಯೆಯೂ ಕೂಡಾ ಗ್ರಾಮಾಂತರ ಪ್ರದೇಶದ ಜನರಿಗೆ ವ್ಯವಹಾರಕ್ಕೆ ತೊಂದರೆ ಆಗುತ್ತದೆ. ರೈತರು, ಸಾಮಾನ್ಯ ಜನರಿಗೆ ಬ್ಯಾಂಕುಗಳಲ್ಲಿ ಭಾಷೆಯ ಸಮಸ್ಯೆ ಆಗಬಾರದು. ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಬೇಕು. ಆರ್ಥಿಕ ಪ್ರಗತಿಯಲ್ಲಿ ಸಹಕಾರ ವ್ಯವಸ್ಥೆ ಜನರಿಗೆ ಪೂರಕವಾಗಿ ಸ್ಪಂದಿಸುತ್ತಿದೆ. ಹಾಗಾಗಿ ಸಹಕಾರಿ ಸಂಘಗಳ ಬಲವರ್ಧನೆಯನ್ನು ನೋಡಬಹುದು. ನೂತನವಾಗಿ ಆರಂಭವಾದ ಶ್ರೀ ಮಹಾಲಕ್ಷ್ಮೀ ಪ್ರಾಥಮಿಕ ಸೇವಾ ಸಹಕಾರ ಸಂಘವು ಯಶಸ್ವಿಯಾಗಿ ಮುನ್ನೆಡೆಯಲಿ ಎಂದು ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

ಅವರು ಕುಂದಾಪುರ ಮುಖ್ಯರಸ್ತೆಯ ವಿಕ್ರಮ ಸ್ಕ್ಯಾನಿಂಗ್ ಸೆಂಟರ್‌ನ ಮೊದಲ ಮಹಡಿಯಲ್ಲಿ ನೂತನವಾಗಿ ರಚನೆಯಾದ ಶ್ರೀ ಮಹಾಲಕ್ಷ್ಮೀ ಪ್ರಾಥಮಿಕ ಸೇವಾ ಸಹಕಾರ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.

ಗಣಕಯಂತ್ರ ವಿಭಾಗವನ್ನು ನ್ಯಾಯವಾದಿ ಸತೀಶ್ವಂದ್ರ ಉದ್ಘಾಟಿಸಿದರು. ಭದ್ರತಾ ಕೋಶವನ್ನು ಕುಂದಾಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಅರುಣ್ ಕುಮಾರ್ ಎಸ್.ವಿ ಉದ್ಘಾಟಿಸಿದರು. ಠೇವಣಿ ಪತ್ರವನ್ನು ವಿಕ್ರಮ ಸ್ಕ್ಯಾನಿಂಗ್ ಸೆಂಟರ್‌ನ ಡಾ.ರಾಘವೇಂದ್ರ ಉಪಾಧ್ಯ ವಿತರಿಸಿದರು. ನಗದು ವಿಭಾಗವನ್ನು ಗಿರಿಜಾ ಟ್ರೇಡರ್‍ಸ್‌ನ ಬಿ.ವೆಂಕಟೇಶ್ ಸೇರುಗಾರ್ ಉದ್ಘಾಟಿಸಿದರು. ಸಾಲಪತ್ರವನ್ನು ಕೋಟೇಶ್ವರ ವಿಘ್ನೇಶ್ವರ ಪಾಲಿ ಪ್ರೋಡಕ್ಟ್ಸ್‌ನ ಕೆ.ಪ್ರಕಾಶ್ ಬೆಟ್ಟಿನ್ ವಿತರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಉಪಾಧ್ಯಕ್ಷರಾದ ಕೆ.ಪ್ರಕಾಶ್ ಬೆಟ್ಟಿನ್ ವಹಿಸಿ, ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿ ನಿರ್ದೇಶಕರಾದ ಬಿ.ವೆಂಕಟೇಶ ಸೇರುಗಾರ್, ದಯಾನಂದ ಗಾಣಿಗ, ಜಯಲಕ್ಷ್ಮೀ ಎಮ್.ವಿ., ರಾಜೇಶ ಕಾವೇರಿ, ಕೆ.ಎಸ್.ಸಂತೋಷ ಕುಮಾರ್, ಕೆ.ಉಮೇಶ ಮಧ್ಯಸ್ಥ, ಶರತ್ ಕುಮಾರ್ ಕೆ.ಸಿ., ಅರುಣ ಕುಮಾರಿ, ಕೆ.ವಿ ಭಾಸ್ಕರ್, ಚಂದ್ರಶೇಖರ ಬಿ.ಎಮ್., ಪೂರ್ಣಿಮಾ ಭವಾನಿಶಂಕರ ಉಪಸ್ಥಿತರಿದ್ದರು.

ನ್ಯಾಯವಾದಿ ರಾಘವೇಂದ್ರ ಚರಣ ನಾವಡ ಕಾರ್ಯಕ್ರಮ ನಿರ್ವಹಿಸಿದರು. ನ್ಯಾಯವಾದಿ ರಾಘವೇಂದ್ರ ಚರಣ ನಾವಡ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಪ್ರಭಾರ) ನಾಗರಾಜ ನಾಯ್ಕ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!