spot_img
Monday, March 30, 2026
spot_img

ರಾಖಿ ಸಾವಂತ್​ ಬಯೋಪಿಕ್​ಗೆ ಕುಂದಾಪುರದ ನಿರ್ದೇಶಕ ? | ನಿರ್ದೇಶಕರ ಬಗ್ಗೆ ರಾಖಿ ಸಾವಂತ್‌ ಹೇಳಿದ್ದೇನು ?  

ಜನಪ್ರತಿನಿಧಿ ವಾರ್ತೆ :  ಬಿಗ್​ ಬಾಸ್​ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ ತರುವಾಯ ಪ್ರಚಾರಕ್ಕೆ ಬಂದ ರಾಖಿ ಸಾವಂತ್‌ ಈಗ ತಮ್ಮ ಬಯೋಪಿಕ್‌ ಬಗ್ಗೆ ಕುತೂಹಲಕಾರಿಯಾದ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಮ್ಮ ಜೀವನ ಕಥೆಯ ಸಿನೆಮಾವನ್ನು ಅತಿಶೀಘ್ರದಲ್ಲಿಯೇ ಹೊರತರುವುದರ ಬಗ್ಗೆ ಮಾಹಿತಿ ನೀಡಿದ್ದಾರೆ.

ಸದಾ ವಿವಾದದಲ್ಲೇ ಇರುವ ರಾಖಿ ಸಾವಂತ್‌, ಪ್ರತಿ ದಿನವೂ ಅವರು ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ಅವರ ವೈಯಕ್ತಿಕ ಜೀವನದ ವಿಚಾರಗಳು ಬೀದಿಗೆ ಬಂದಿವೆ. ಪತಿ ಆದಿಲ್​ ಖಾನ್​ ಜೊತೆ ಅವರು ಕಿರಿಕ್​ ಮಾಡಿಕೊಂಡಿದ್ದು ಎಲ್ಲರಿಗೂ ತಿಳಿದಿದೆ. ಈಗ ಅವರು ತಮ್ಮ ಬಯೋಪಿಕ್​ ಬಗ್ಗೆ ಒಂದು ಆಸೆ ವ್ಯಕ್ತಪಡಿಸಿದ್ದಾರೆ. ತಮ್ಮ ಜೀವನದ ಕಥೆಯನ್ನು ಆಧರಿಸಿ ತಯಾರಾಗುವ ಸಿನಿಮಾಗೆ ರಿಷಬ್​ ಶೆಟ್ಟಿ ನಿರ್ದೇಶನ ಮಾಡಬೇಕು ಎಂದು ಹೇಳಿದ್ದಾರೆ. ಆದರೇ, ಈವರೆಗೆ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ʼಕಾಂತಾರ ೨ʼ ಸಿನೆಮಾ ನಿರ್ದೇಶನದಲ್ಲಿ ತೊಡಗಿಕೊಂಡಿರುವ ರಿಷಬ್‌ ರಾಖಿ ಸಾವಂತ್‌ ಬಯಕೆಯಂತೆ ಅವರ ಬಯೋಪಿಕ್‌ ನಿರ್ದೇಶನ ಮಾಡುವುದಕ್ಕೆ ಒಪ್ಪುತ್ತಾರೆಯೇ ಎನ್ನುವುದರ ಬಗ್ಗೆ ಕುತೂಹಲ ಮೂಡಿದೆ.

ಸದಾ ವಿವಾದದಲ್ಲೇ ಮುಳುಗಿರುವ ಸೆಲೆಬ್ರಿಟಿ ರಾಖಿ ಸಾವಂತ್‌ ಜೀವನ ಕಥೆ ಇಟ್ಟುಕೊಂಡು ಸಿನೆಮಾ ಮಾಡುವ ಬಗ್ಗೆ ಯೋಜನೆಗಳು ನಡೆಯುತ್ತಿದೆ. ಈ ಸಿನೆಮಾ  ನಿರ್ಮಾಣ ಮಾಡುವುದಕ್ಕೆ ನಿರ್ಮಾಪಕರು ಕೂಡ ಮುಂದೆ ಬಂದಿದ್ದಾರಂತೆ. ವಿಡಿಯೋವೊಂದರಲ್ಲಿ ತಮ್ಮ ಪಾತ್ರವನ್ನು ವಿದ್ಯಾ ಬಾಲನ್‌ ಮಾಡಿದರೇ ಸೂಕ್ತ ಎಂಬ ಅಭಿಪ್ರಾಯ ಪಟ್ಟಿದ್ದಾರೆ. ನಿಮ್ಮ ಪಾತ್ರವನ್ನು ನೀವೇ ಮಾಡಬಹುದಲ್ಲವೇ ಎಂದು ನಿರ್ಮಾಪಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಖಿ ಸಾವಂತ್‌, ʼಸದ್ಯಕ್ಕೆ ನಾನು ಈ ಬಗ್ಗೆ ಯೋಚನೆ ಮಾಡಿಲ್ಲʼ ಎಂದಿದ್ದಾರೆ. ಈ ಸಿನೆಮಾವನ್ನು ಯಾರು ನಿರ್ದೇಶನ ಮಾಡಬೇಕು ಎಂದು ಕೇಳಿದ್ದಕ್ಕೆ ʼಕಾಂತಾರ ʼ ಖ್ಯಾತಿಯ ಸಿನೆಮಾ ನಿರ್ದೇಶಕ ರಿಷಬ್‌ ಶೆಟ್ಟಿ ಎಂದು ಹೇಳಿರುವುದು ಈಗ ಬಾರಿ ಸದ್ದು ಮಾಡುತ್ತಿದೆ.

ಸಿನೆಮಾ ನಿರ್ದೇಶನ ಯಾರು ಮಾಡಬೇಕು ಎಂಬುವುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಕಥೆ, ಚಿತ್ರಕಥೆ, ಸಂಗೀತ ನಿರ್ದೇಶನ ಎಲ್ಲಾ ವಿಭಾಗಕ್ಕೂ ಹೆಸರಾಂತ ತಂತ್ರಜ್ಙರನ್ನು ಆಯ್ಕೆ ಮಾಡಿಕೊಳ್ಳುವುದರ ಮಾತುಕತೆ ನಡೆಯುತ್ತಿದೆ. ತನಗೆ ʼಕಾಂತಾರʼ ಸಿನೆಮಾ ನಿರ್ದೇಶಕ ರಿಷಬ್‌ ಶೆಟ್ಟಿ ಅಂದರೇ ಬಹಳ ಇಷ್ಟ ಎಂದು ರಾಖಿ ಸಾವಂತ್‌ ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ರಾಖಿ ಸಾವಂತ್​ ಅವರ ಪತಿ ಆದಿಲ್​ ಖಾನ್​ ಮೈಸೂರಿನವರು. ಮದುವೆ ಬಳಿಕ ತಾವು ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿರುವುದಾಗಿ ಈಗಾಗಲೇ ರಾಖಿ ಸಾವಂತ್ ಹೇಳಿಕೊಂಡಿದ್ದಾರೆ. ಅವರು ಫಾತಿಮಾ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ. ಮೆಕ್ಕಾ ಮದೀನಾಗೂ ಅವರು ಹೋಗಿ ಬಂದಿರುವುದು ಕೂಡ ಇತ್ತಿಚೇಗೆ ಸುದ್ದಿಯಾಗಿತ್ತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!