Sunday, September 8, 2024

“ನಾವು ಕಲಿತ ಶಾಲೆ, ಕಲಿಸಿದ ಗುರುಗಳು, ತಂದೆ- ತಾಯಿ ಇವರು ತ್ರಿವಳಿ ರತ್ನಗಳಿದ್ದಂತೆ”-ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ

ಕುಂದಾಪುರ: ಯಾವುದೇ ವ್ಯಕ್ತಿಯು ಯಾವುದೇ ವೃತ್ತಿ ಮಾಡುತ್ತಿರಲಿ ಆ ವೃತ್ತಿಯನ್ನು ಗೌರವದಿಂದ, ಪ್ರೀತಿಯಿಂದ, ಆ ವೃತ್ತಿಗೆ ನ್ಯಾಯ ಕೊಡುವ ಕೆಲಸವನ್ನು ಮಾಡಬೇಕು. ಅಂತಹ ಕೆಲಸ ನಮ್ಮ ಈ ಶಿಕ್ಷಕ ವೃತ್ತಿಯಿಂದ ಸಾಧ್ಯ” ವೃತ್ತಿಯನ್ನು ಪ್ರೀತಿಸಿದರೆ, ಯಶಸ್ಸು ತನ್ನಿಂದ ತಾನೇ ಸಿಗುತ್ತದೆ. ಸಾಧನೆಯ ಹಾದಿ ಹೇಗೆ ಇರಲಿ ಮನಸ್ಸಿದ್ದರೆ ಮಾರ್ಗ. ವ್ಯವಹಾರಕ್ಕಾಗಿ ಅನೇಕ ಕೆಲಸಗಳನ್ನು ಮಾಡಬಹುದು ಆದರೆ ಶಿಕ್ಷಣ ಕ್ಷೇತ್ರದಲ್ಲಿ ಈ ವ್ಯವಹಾರ ಮಾಡಲು ಸಾಧ್ಯವಿಲ್ಲ .ಶಾಲೆ ಕಟ್ಟುವುದಿದ್ದರೆ ಅದು ಜೀವಂತ ದೇವರ ಮೂರ್ತಿಗಳನ್ನು ನಿರಂತರ ಪೂಜೆ ಮಾಡುವುದಕ್ಕೆ ಬದ್ಧರಾಗಿದ್ದಾಗ ಮಾತ್ರ,ಸಂಸ್ಥೆ ಕಟ್ಟುವ ಕೆಲಸ ಸಾರ್ಥಕವಾಗಿ ನಡೆಯುತ್ತದೆ .ಎಲ್ಲಿ ಶಿಕ್ಷಕರಿಗೆ ಕೆಲಸ ಮಾಡುವಾಗ ಸ್ವಾತಂತ್ರ್ಯ, ಗೌರವ ಇರುತ್ತದೆಯೋ ಅಲ್ಲಿ ಉತ್ತಮ ಫಲಿತಾಂಶ ಕಾಣಲು ಸಾಧ್ಯ ಎಂದು ನಿವೃತ್ತ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ ಹೇಳಿದರು.

ಯಡಾಡಿ – ಮತ್ಯಾಡಿಯ ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಎಕ್ಸಲೆಂಟ್ ಹಾಗೂ ಲಿಟ್ಲ್ ಸ್ಟಾರ್ ಶಾಲೆಗಳು, ಸುಜ್ಞಾನ ಎಜುಕೇಶನಲ್ ಟ್ರಸ್ಟ್ (ರಿ), ಕುಂದಾಪುರ. ಇವರ ಸಹಯೋಗದೊಂದಿಗೆ, ಶಿಕ್ಷಕರ ದಿನಾಚರಣೆ ಪ್ರಯುಕ್ತ ಗುರುವಂದನಾ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಸುಜ್ಞಾನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ “.ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಮಹತ್ವ ಕೊಡುವ ಕೆಲಸ ಸಮಾಜದಲ್ಲಿ ಆಗಬೇಕು.ಮುಂದಿನ ವರ್ಷದಿಂದ ಕುಂದಾಪುರ ತಾಲೂಕಿನಲ್ಲಿ ಅನುದಾನ ರಹಿತ ಶಾಲೆಗಳ ಶಿಕ್ಷಕರಿಗೆ “ಅತ್ಯುತ್ತಮ ಶಿಕ್ಷಕ ಪ್ರಶಸ್ತಿ” ನಮ್ಮ ಸಂಸ್ಥೆಯಿಂದ ಕೊಟ್ಟು ಸನ್ಮಾನಿಸುವ ಒಂದು ಯೋಜನೆಯನ್ನು ಹಾಕಿಕೊಂಡಿದ್ದೇವೆ” .ಅಲ್ಲದೆ ನಮ್ಮ ಸುಜ್ಞಾನ ಎಜುಕೇಶನಲ್ ಟ್ರಸ್ಟನ ಅಡಿಯಲ್ಲಿ ನಡೆಯುವ ವಿದ್ಯಾ ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗಳಿಗೆ ಅನೇಕ ನಗದು ಬಹುಮಾನಗಳನ್ನು ಘೋಷಿಸಿದರು.

ಸಭೆಯನ್ನು ಉದ್ದೇಶಿಸಿ ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಖಜಾಂಚಿ ಭರತ್ ಶೆಟ್ಟಿಯವರು ಮಾತನಾಡುತ್ತಾ “ಭಾರತೀಯ ಪರಂಪರೆಯಲ್ಲಿ ಗುರುವಿಗೆ ದೇವರ ಸ್ಥಾನ ನೀಡಿದ್ದೇವೆ. ಶಿಕ್ಷಕ ಒಬ್ಬ ಮಾರ್ಗದರ್ಶಕ, ತತ್ವಜ್ಞಾನಿ ವಿದ್ಯಾರ್ಥಿಯ ನಿರಂತರ ಪರಿಶ್ರಮದಿಂದ ಶಿಕ್ಷಣದಲ್ಲಿ ಶೈಕ್ಷಣಿಕವಾಗಿ ಸಾಧನೆ ಮಾಡಲು ಸಾಧ್ಯ. ಶಿಸ್ತಿನ ಪರಿಶ್ರಮ ನಿರಂತರವಾಗಿದ್ದಲ್ಲಿ ವಿದ್ಯಾರ್ಥಿ ಯಶಸ್ಸು ಸಾಧಿಸಲು ಸಾಧ್ಯ ಹಾಗಿದ್ದಾಗ ಮಾತ್ರ ಅಂತಹ ವಿದ್ಯಾರ್ಥಿಯ ಜೀವನ ಸಾರ್ಥಕವಾಗಲು ಸಾಧ್ಯ” ಎಂದರು.

ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಆಗಸ್ಟಿನ್ ಕೆ ಎ ಇವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.
ಸುಜ್ಞಾನ ಎಜುಕೇಶನಲ್ ಟ್ರಸ್ಟ್ನ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿಯವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಈ ಕಾರ್ಯಕ್ರಮವನ್ನು ಸಂಸ್ಕೃತ ಉಪನ್ಯಾಸಕಿ ಸುದಕ್ಷಿಣ ನಿರೂಪಿಸಿದರು, ಶಿಕ್ಷಕರಾದ ರಜತ್ ಭಟ್ ವಂದಿಸಿದರು. ಎಕ್ಸಲೆಂಟ್ ಮತ್ತು ಲಿಟ್ಲ್ ಸ್ಟಾರ್ ವಿದ್ಯಾಸಂಸ್ಥೆಗಳ ಉಪನ್ಯಾಸಕರು ಮತ್ತು ಶಿಕ್ಷಕರನ್ನು ವೇದಿಕೆಗೆ ಕರೆದು, ಸ್ಮರಣಿಕೆ ನೀಡಿ ಗೌರವಿಸಲಾಯಿತು

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!