Sunday, September 8, 2024

ರೋಜರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ: 660 ಕೋಟಿ ಒಟ್ಟು ವ್ಯವಹಾರ: ರೂ 3.53 ಕೋಟಿ ನಿವ್ವಳ ಲಾಭ, ಶೇ. 22% ಡಿವಿಡೆಂಡ್ ಘೋಷಣೆ


ಕುಂದಾಪುರ: ಸುದೀರ್ಘ ಕಾಲ ಸಾರ್ವಜನಿಕ ಸೇವೆಯಲ್ಲಿರುವ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವರದಿ ವರ್ಷದಲ್ಲಿ ಎಲ್ಲಾ ವ್ಯವಹಾರದಲ್ಲಿ ಗುರಿ ಮೀರಿದ ಸಾಧನೆಯನ್ನು ಮಾಡಿದೆ. ಸುಮಾರು 660 ಕೋಟಿ ಒಟ್ಟು ವ್ಯವಹಾರವನ್ನು ಸಂಘವು ಮಾಡಿದೆ. ವರದಿ ವರ್ಷದ ಅಂತ್ಯಕ್ಕೆ ಒಟ್ಟು ರೂ. 148 ಕೋಟಿ ಠೇವಣಿ ಹೊಂದಿದೆ. ರೂ 119 ಕೋಟಿ ಸಾಲ ನೀಡಿದೆ. ವರದಿ ಸಾಲಿನಲ್ಲಿ ಸಂಸ್ಥೆಯು ರೂ 3.53 ಕೋಟಿ ನಿವ್ವಳ ಲಾಭ ಗಳಿಸಿದೆ. ಎಂದು ರೋಜರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಜೋನ್ಸನ್ ಡಿ’ ಅಲ್ಮೇಡಾ ಹೇಳಿದರು.

ಕುಂದಾಪುರದ ಆರ್ ಎನ್ ಶೆಟ್ಟಿ ಸಭಾಂಗಣದಲ್ಲಿ ಸೆ.10 ರಂದು ನಡೆದ ಕುಂದಾಪುರ ರೋಜರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ 32ನೇ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಸದಸ್ಯರಿಗೆ ಶೇ. 22 % ಡಿವಿಡೆಂಡ್ ಘೋಷಣೆ ಮಾಡಿದ ಅವರು, ಸಹಕಾರಿ ಕ್ಷೇತ್ರದಲ್ಲಿ ವಿಶಿಷ್ಠ ವಿನೂತನ ಸಾಧನೆಯೊಂದಿಗೆ ಅಗ್ರಮಾನ್ಯ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನಿಂದ ಕಳೆದ ಐದು ವರ್ಷಗಳಿಂದ ಸತತವಾಗಿ ಸಂಘಕ್ಕೆ ಉತ್ತಮ ಸಹಕಾರಿ ಪ್ರಶಸ್ತಿ ಲಭಿಸಿದೆ. ಸಂಘವು ಹೊಸ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅಳವಡಿಸಿ ಗ್ರಾಹಕರಿಗೆ ಉತ್ಕøಷ್ಟ ಸೇವೆಯನ್ನು ನೀಡುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಇಂಟರ್‍ನೆಟ್ ಬ್ಯಾಂಕಿಂಗ್, ಕೋರ್ ಬ್ಯಾಂಕಿಂಗ್‍ನಂತಹ ಉನ್ನತ ಸೇವೆಯು ಸಂಘದ 8 ಶಾಖೆಗಳಲ್ಲಿ ಹಾಗೂ ಪ್ರಧಾನ ಕಚೇರಿಯಲ್ಲಿ ನೀಡುತ್ತಿದೆ ಎಂದರು.

ಸೊಸೈಟಿಗೆ ಈಗಾಗಲೇ 8 ಶಾಖೆಗಳು ಇದ್ದು, ಇನ್ನೂ ಎರಡು ಶಾಖೆಗಳನ್ನು ಶೀಘ್ರ ಆರಂಭಿಸಲಿದೆ. ಸೊಸೈಟಿಯು ಕೇವಲ ಹಣದ ವ್ಯವಹಾರ ಮಾಡದೆ, ಸಮಾಜಕ್ಕೆ ಒಳಿತಾಗುವಂತಹ ಯೋಜನೆಗಳನ್ನು ಮಾಡುತ್ತ ಇದ್ದು ಈ ವರ್ಷ ವಿದ್ಯಾರ್ಥಿಗಳಿಗೆ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲು ಆರಂಭಿಸುತ್ತದೆ, ಮುಂದಿನ ವರ್ಷ ಸಿ.ಎ. ಮತ್ತು ಪಿಎಚ್‍ಡಿ ಪದವಿ ಪಡೆದವರನ್ನು ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು.

ಸಂಘದ ಮುಖ್ಯ ಸಲಹೆಗಾರ ಅತೀ ವಂದನಿಯ ಸ್ಟೇನಿ ತಾವ್ರೋ ರವರು ‘ಈ ಸಂಘ ರೋಜರಿ ಮಾತೆಯ ಆಶಿರ್ವಾದದಲ್ಲಿ ಸ್ಥಾಪನೆಯಾಗಿದ್ದು, ಈ ಸಂಘಕ್ಕೆ ಅವಳ ಆಶೀರ್ವಾದ ಎಂದಿಗೂ ಇರುತ್ತದೆ, ರೋಜರಿ ಸಂಘ ವಿದ್ಯಾರ್ಥಿ ವೇತನ, ಶಿಕ್ಷಣಕ್ಕೆ ಸಾಲ ಕೊಟ್ಟು ಪ್ರೇರೆಪಿಸುವುದು ಅಲ್ಲದೆ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಸಹಾಯ ನೀಡುತ್ತದೆ, ಮಾತ್ರವಲ್ಲ ವಾಪಾಸು ಬಂದು ತಾಯ್ನಾಡಿನಲ್ಲಿ ಉದ್ಯೋಗ ಮಾಡಲು ಪ್ರೇರೇಪಿಸುತ್ತದೆ ಎಂದು ಶ್ಲಾಘನೆ ಮಾಡುತ್ತಾ, ಸಂಘ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಹರಸಿದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೇಬಲ್ ಡಿ’ಆಲ್ಮೇಡಾ ಲೆಕ್ಕಪತ್ರಗಳನ್ನು ಮಂಡಿಸಿದರು.

ಸಂಘದ ಸದಸ್ಯರ 10ನೇ ತರಗತಿ, ಪಿ.ಯು.ಸಿ. ಪದವಿ, ಸ್ನಾಕೋತ್ತರ, ಇಂಜಿನಿಯರಿಂಗ್, ಮೆಡಿಕಲ್ ಶಿಕ್ಷಣದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಸಭೆಯಲ್ಲಿ ಸಂಘದ ನಿರ್ದೇಶಕರಾದ ಫಿಲಿಪ್ ಡಿಕೋಸ್ಟಾ, ವಿನೋದ್ ಕ್ರಾಸ್ಟೊ, ಬ್ಯಾಪ್ಟಿಸ್ಟ್ ಡಾಯಾಸ್, ಓಜಲಿನ್ ರೆಬೆಲ್ಲೊ, ಪ್ರಕಾಶ್ ಲೋಬೋ, ಸಂತೋಷ್ ಓಝೊವಲ್ಡ್ ಡಿ ಸಿಲ್ವಾ, ವಿಲ್ಫ್ರೆಡ್ ಮಿನೇಜಸ್, ಟೆರೆನ್ಸ್ ಸುವಾರಿಸ್, ಮತ್ತು ಮೈಕಲ್ ಪಿಂಟೊ, ತಿಯೋದರ ಒಲಿವೇರ, ಡೈನಾ ಡಿ ಅಲ್ಮೇಡಾ, ಶಾಂತಿ ಆರ್ ಕರ್ವಾಲ್ಲೊ, ಶಾಂತಿ ಡಾಯಾಸ್ ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷರಾದ ಕಿರಣ್ ಲೋಬೊ ಸ್ವಾಗತಿಸಿದರು. ನಿರ್ದೇಶಕ ವಿಲ್ಸನ್ ಡಿ ಸೋಜಾ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಡೆರಿಕ್ ಡಿಸೋಜಾ ವಂದಿಸಿದರು.

ಮಹಾಸಭೆಯಲ್ಲಿ ಸದಸ್ಯರು ಸಕ್ರಿಯವಾಗಿ ತೊಡಿಗಿಸಿಕೊಂಡಿರುವುದು ಕಂಡುಬಂತು ಸಭಾಂಗಣ ಕಿಕ್ಕಿರಿದು ತುಂಬಿತ್ತು. ಡೈನಿಂಗ್ ಹಾಲ್‍ನಲ್ಲಿಯೂ ಕೂಡಾ ಸ್ಕ್ರೀನ್ ಮೂಲಕ ಮಹಾಸಭೆಯ ಕಾರ್ಯಕಲಾಪ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಸಭಾಂಗಣದ ಹೊರಭಾಗದಲ್ಲಿ ಕೂಡಾ ಪೆಂಡಲ್ ನಿರ್ಮಿಸಿ ನೋಂದಣಿಗೆ ಅವಕಾಶ ನೀಡಲಾಗಿತ್ತು. ಸದಸ್ಯರಿಗೆ ಆಕರ್ಷಕ ಉಡುಗೊರೆಗಳನ್ನು ನೀಡಲಾಯಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!