Sunday, September 8, 2024

ಯುವ ಸಾಹಿತಿ ಶಯದೇವಿಸುತೆ ಮರವಂತೆಯವರಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ


ಮರವಂತೆ : ಬೈಂದೂರು ತಾಲೂಕಿನ ಮರವಂತೆಯ ಯುವ ಸಾಹಿತಿ, ಶ್ರೀಮತಿ ಶಯದೇವಿಸುತೆ ಮರವಂತೆ (ಜ್ಯೋತಿ ಜೀವನ್ ಸ್ವರೂಪ್) ಯವರಿಗೆ ಸಾಹಿತ್ಯ ಕ್ಷೇತ್ರದ ಜೀವನ ಸಾಧನೆಗಾಗಿ, “ರಾಜ್ಯ ಮಟ್ಟದ ಪ್ರಶಸ್ತಿ” ಪುರಸ್ಕಾರವು ಇತ್ತೀಚೆಗೆ ಜೈನಕಾಶಿ ಕೊಪ್ಪಳದಲ್ಲಿ ಪ್ರದಾನ ಮಾಡಲಾಯಿತು.

ನಿಸರ್ಗ ಸಂಗೀತ ವಿದ್ಯಾಲಯ ಹಾಗೂ, ರಂಗ ಕಲಾವಿದರ ಸಂಘದ ಆಶ್ರಯದಲ್ಲಿ ನಡೆದ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತರಾದ ದಿವಂಗತ ಪಿ. ಬಿ. ಧುತ್ತರಗಿ ಹಾಗೂ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ದಿ. ಶ್ರೀಮತಿ ಸರೋಜಮ್ಮ ಧುತ್ತರಗಿ ಇವರ ಸ್ಮರಣಾರ್ಥವಾಗಿ ನಿಸರ್ಗ ಸಂಗೀತ ವಿದ್ಯಾಲಯದ 250ನೇ ನಿರಂತರ ಸಂಗೀತ ಸರಣಿ ಹಾಗೂ, 32ನೇ ವರ್ಷದ ಕಾರ್ಯಕ್ರಮ ಸಂಭ್ರಮಾಚರಣೆಯ ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಸಲುವಾಗಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ ಪಟ್ಟಣದ ಜೈನಕಾಶಿ ಶ್ರೀ ಕರಿಸಿದ್ದೇಶ್ವರ ಮಠದ ಬಸವ ಮಂಟಪದಲ್ಲಿ 2023, ಆಗಸ್ಟ್ 20 ರಂದು ಭಾನುವಾರ ನಡೆದ ರಾಜ್ಯದ 31 ಜಿಲ್ಲೆಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈಯ್ದಂತಹ ಹಲವಾರು ಸಾಧಕರಿಗೆ ಕೊಡಲ್ಪಡುವ, “ರಾಜ್ಯಮಟ್ಟದ ಪ್ರಶಸ್ತಿ” ಯಲ್ಲಿ ಉಡುಪಿ ಜಿಲ್ಲೆಯಿಂದ ಶಯದೇವಿಸುತೆ ಮರವಂತೆಯವರಿಗೆ ಕೂಡಾ ಸಾಹಿತ್ಯ ಕ್ಷೇತ್ರದಲ್ಲಿನ ತಮ್ಮ ಸಾಧನೆಗಾಗಿ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು.

ಯರನಾಳ ಹಿರೇಮಠ ಸಂಸ್ಥಾನದ ಪರಮಪೂಜ್ಯ ಶ್ರೀ ಶಿವಪ್ರಸಾದ ದೇವರು ಹಾಗೂ, ಹನುಮಸಾಗರ ವ, ಕುದರಿಮೋತಿ ಮೈಸೂರು ಸಂಸ್ಥಾನ ಮಠದ ಶ್ರೀ ಮ.ನಿ.ಪ್ರ. ಜಗದ್ಗುರು ವಿಜಯ ಮಹಾಂತ ಶಿವಯೋಗಿ ಸ್ವಾಮೀಜಿಗಳವರು ಹಾಗೂ, ಕೊಪ್ಪಳದ ಲೋಕಾಸಭಾ ಸದಸ್ಯರು ಸಂಗಣ್ಣ ಕರಡಿ, ಕೊಪ್ಪಳ ಭಾರತೀಯ ಜನತಾದಳದ ಅಧ್ಯಕ್ಷರು ಹಾಗೂ, ಕುಷ್ಟಗಿ ಶಾಸಕರೂ ಆಗಿರುವ ದೊಡ್ಡನಗೌಡ ಎಚ್. ಪಾಟೀಲ ಹಾಗೂ, ಕುಷ್ಟಗಿ ಮಾಜಿ ಸಚಿವರಾದ ಅಮರೇಗೌಡ ಪಾಟೀಲ ಬಯ್ಯಾಪೂರ, ನಿಸರ್ಗ ಸಂಗೀತ ವಿದ್ಯಾಲಯದ ಕಾರ್ಯದರ್ಶಿ ಶ್ರೀದೇವಿ ಎಂ. ಕೋಮಾರಿ ಹಾಗೂ ಅಧ್ಯಕ್ಷರಾದ ಮಲ್ಲಯ್ಯ ಎಸ್. ಕೋಮಾರಿ ಮತ್ತಿತ್ತರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!