spot_img
Wednesday, April 29, 2026
spot_img

ಕಥೊಲಿಕ್ ಸಭಾ ಪಡುಕೋಣೆ ಘಟಕದ ವತಿಯಿಂದ ಬೃಹತ್ ರಕ್ತದಾನ ಶಿಬಿರ

ಕುಂದಾಪುರ: ಕಥೊಲಿಕ್ ಸಭಾ ಪಡುಕೋಣೆ ಘಟಕದ ವತಿಯಿಂದ ಆಯೋಜಿಸಲಾದ ಬೃಹತ್ ರಕ್ತದಾನ ಶಿಬಿರವು ೨೭ ರಂದು ಆದಿತ್ಯವಾರ ಪಡುಕೋಣೆ ಚರ್ಚ್ ಹಾಲಿನಲ್ಲಿ ನೆರವೇರಿತು

ಶಿಬಿರವನ್ನು ಪಡುಕೋಣೆ ಚರ್ಚಿನ ಚರ್ಚಿನ ಧರ್ಮಗುರುಗಳಾದ ವಂ| ಫ್ರಾನ್ಸಿಸ್ ಕರ್ನೆಲಿಯೋ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಚಿಕ್ಕಮರಿ ಮತ್ತು ಮುಖ್ಯ ಅತಿಥಿಯಾಗಿ ರೆಡ್ ಕ್ರಾಸ್ ಸಂಸ್ಥೆಯ ಸಂಯೋಜಕರಾದ ಜಯಕರ ಶೆಟ್ಟಿ ಭಾಗವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಥೋಲಿಕ್ ಸಭಾ ಅಧ್ಯಕ್ಷರಾದ ವಿನಯ್ ಡಿ ಅಲ್ಮೇಡ ಅವರು ವಹಿಸಿದ್ದರು. ರಕ್ತದಾನ ಶಿಬಿರಕ್ಕೆ ಸಂಘಟನೆಗಳಾದ ಡಿ ವೈ ಎಫ್ ಐ ದಲಿತ ಸಂಘರ್ಷ ಸಮಿತಿ, ಚರ್ಚಿನ ಆರೋಗ್ಯ ಆಯೋಗ, ಸ್ತ್ರೀ ಸಂಘಟನೆ, ಐಸಿ‌ಐ‌ಎಂ,ಪಡುಕೋಣೆ ಸ್ಪೋರ್ಟ್ಸ್ ಅಂಡ್ ಎಜುಕೇಶನ್ ಟ್ರಸ್ಟ್, ಪಯಣ ಗ್ರೂಪ್, ೯೪- ೯೫ ಬ್ಯಾಚ್ ಸ್ಟೂಡೆಂಟ್ಸ್ ವಿಷನ್ ಪಾಲ್ ಸಂಘಟನೆಯವರು ಸಹಭಾಗಿತ್ವ ನೀಡಿದ್ದರು,

ಚರ್ಚಿನ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಕೆನಡಿ ಪಿರೇರಾ ಕಾರ್ಯದರ್ಶಿಯಾದ ಅಲೆಕ್ಸ್ ಆಂಟನಿ ಡಿಸೋಜಾ ಆಯೋಗ ಸಂಯೋಜಕರಾದ ವಿನ್ಸೆಂಟ್ ಡಿಸೋಜಾ ಉಪಸ್ಥಿತರಿದ್ದರು. ರಕ್ತದಾನ ಶಿಬಿರದಲ್ಲಿ 96 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ಕಾರ್ಯಕ್ರಮವನ್ನು ಶಾಂತಿ ಅಲ್ಮೇಡಾ ನಿರ್ವಹಿಸಿದರು. ವಿನ್ಸೆಂಟ್ ಡಿಸೋಜಾ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!