spot_img
Wednesday, April 29, 2026
spot_img

‘ಅಧರ್ಮ ಮಾಡುವವರು ಈ ಧರ್ಮದ ಮಣ್ಣಲ್ಲಿ ಬದುಕಲು ಅರ್ಹರಲ್ಲ’ ಕುಂದಾಪುರದಲ್ಲಿ ನಡೆದ ಸೌಜನ್ಯ ಪರ ಹೋರಾಟದಲ್ಲಿ ತಿಮರೋಡಿ ಆಕ್ರೋಶ

ಕುಂದಾಪುರ, ಆ.25: ಮಂಜುನಾಥ ಸತ್ಯದ ಕಣ್ಣು ತೆರೆಸಿದ್ದಾನೆ. ಧರ್ಮಸ್ಥಳದಲ್ಲಿ ಧಾರ್ಮಿಕ ಭಯೋತ್ಪಾದನೆ ನಡೆಯುತ್ತಿದೆ. ಸೌಜನ್ಯ ದೇವಿ ಸ್ವರೂಪಳು. ನಿಜವಾದ ಅಪರಾಧಿಗಳು ಧರ್ಮಸ್ಥಳದಲ್ಲಿಯೇ ಇದ್ದಾರೆ ಎಂದು ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಕಿಡಿ ಕಾರಿದರು.

ಸೌಜನ್ಯ ಪರ ನ್ಯಾಯಕ್ಕಾಗಿನ ಹೋರಾಟ ಸಮಿತಿ ಕುಂದಾಪುರ – ಬೈಂದೂರು ನೇತೃತ್ವದಲ್ಲಿ ಇಲ್ಲಿನ ಶಾಸ್ತ್ರಿ ವೃತ್ತದಲ್ಲಿ ನಡೆದ ಜನಾಗ್ರಹ ಸಭೆಯಲ್ಲಿ ಅವರು ಆಕ್ರೋಶ ವ್ಯಕ್ತ ಪಡಿಸಿದರು.

ಧರ್ಮಸ್ಥಳವೆನ್ನುವುದು ನ್ಯಾಯ ಪೀಠ. ಮಂಜುನಾಥ, ಅಣ್ಣಪ್ಪ ಸ್ವಾಮಿ ಸೌಜನ್ಯಳಿಗೆ ಇವತ್ತಲ್ಲದಿದ್ದರೇ, ನಾಳೆಯಾದರೂ ನ್ಯಾಯ ಒದಗಿಸಿ ಕೊಡುತ್ತಾರೆ. ಮಂಜುನಾಥ, ಅಣ್ಣಪ್ಪ ಸ್ವಾಮಿ ಈ ನ್ಯಾಯದ ಹೋರಾಟವನ್ನು ನನ್ನ ತಲೆ ಮೇಲೆ ಹಾಕಿದ್ದಾರೆ. ಸೌಜ್ಯನಳಿಗೆ ನ್ಯಾಯ ಕೊಡಿಸುವುದಕ್ಕೆ ಎಷ್ಟು ಹೋರಾಟ ಮಾಡುವುದಕ್ಕೂ ಸಿದ್ದ ಎಂದು ಅವರು ಆಕ್ರೋಶ ಹೊರ ಹಾಕಿದರು.

ಕಾನೂನಿನ ಮನೆ ಬಾಗಿಲು ತಟ್ಟುವುದಿಲ್ಲ : ತಿಮರೋಡಿ
ಇನ್ನು ಮುಂದೆ ಕಾನೂನಿನ ಮನೆ ಬಾಗಿಲು ತಟ್ಟುವುದಿಲ್ಲ. ಸೌಜನ್ಯಳಿಗೆ ಜನರೇ ತೀರ್ಪು ಕೊಡಬೇಕು. ಜನರ ತೀರ್ಪಿನ ಮುಂದೆ, ಹೋರಾಟದ ಮುಂದೆ ಯಾವ ಹಣ, ಪ್ರಭಾವವೂ ನಡೆಯುವುದಿಲ್ಲ. ಪ್ರಜಾಪ್ರಭುತ್ವದ ಧ್ವನಿಯನ್ನು ಯಾರಿಗೂ ನಿಲ್ಲಿಸಲು ಸಾಧ್ಯವಿಲ್ಲ. ಅಧರ್ಮ ಮಾಡುವ ಯಾರೂ ಕೂಡ ಈ ಧರ್ಮದ ಮಣ್ಣಲ್ಲಿ ಬದುಕಬಾರದು. ಮಂಜುನಾಥ, ಅಣ್ಣಪ್ಪ ಸ್ವಾಮಿಯ ಮುಖಕ್ಕೆ ಅತ್ಯಾಚಾರದ ರಕ್ತದ ಕಲೆ ಹಚ್ಚಿದವರನ್ನು ಶಿಕ್ಷಿಸುವುದಕ್ಕಾಗಿಯೇ ನಮ್ಮ ಹೋರಾಟ. ನ್ಯಾಯ ಸಿಗುವವರೆಗೆ ರಾಜ್ಯಾದ್ಯಂತ, ರಾಷ್ಟ್ರಾದ್ಯಂತ ಹೋರಾಟ ಮಾಡಲಿದ್ದೇವೆ ಎಂದು ಅವರು ಗುಡುಗಿದರು.

ಇಡೀ ಗ್ರಾಮ ಗ್ರಾಮಗಳ ದೇವಸ್ಥಾನದ ಆಡಳಿತ ಮಂಡಳಿಯನ್ನು ಹಣ ಕೊಟ್ಟು ತಮ್ಮೊಳಗೆ ತೆಗೆದುಕೊಳ್ಳುತ್ತಿದ್ದಾರೆ. ಧರ್ಮಸ್ಥಳ ಆಡಳಿತ ಮಂಡಳಿಯಿಂದ ಬರುವ ಹಣಕ್ಕೆ ಕೈಯೊಡ್ಡಿ ದೇವಸ್ಥಾನ ಕಟ್ಟಬೇಡಿ. ಅದು ಇಡೀ ಗ್ರಾಮಕ್ಕೆ ಶಾಪ. ದೇವಸ್ಥಾನ ಕಟ್ಟುವುದಕ್ಕೆ ಮನೆ ಮನೆಯ ಮನ ಮನದ ಹಣ ಬೇಕು. ಆಗ ದೇವರು ಅಲ್ಲಿ ನೆಲೆ ನಿಲ್ಲುತ್ತಾನೆ ಎಂದು ಅವರು ಹೇಳಿದರು.

ಸಭೆಗೂ ಮೊದಲು ನೆಹರೂ ಮೈದಾನದಿಂದ ಕುಂದಾಪುರ ಮುಖ್ಯ ರಸ್ತೆಯಲ್ಲಿ ಬೃಹತ್ ಮೆರವಣಿಗೆ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದರು.

ರಾಜ್ಯ ಸರ್ಕಾರದ ಮೈಂಡ್ ಗೇಮ್:
ಪ್ರಕರಣವನ್ನು ಕೇಂದ್ರ ಸರ್ಕಾರಕ್ಕೆ ಒಪ್ಪಿಸಿ ರಾಜ್ಯ ಸರ್ಕಾರ ಈ ಪ್ರಕರಣದಿಂದ ಕೈ ತೊಳೆದುಕೊಳ್ಳುವ ಪ್ರಯತ್ನ ಮಾಡುತ್ತಿದೆ.ಇದು ರಾಜ್ಯ ಸರ್ಕಾರದ ಮೈಂಡ್ ಗೇಮ್, ಸೇಫ್ ಗೇಮ್. ಯಾವ ಸರ್ಕಾರ ಏನೇ ಈ ಪ್ರಕರಣದಲ್ಲಿ ಆಟ ಆಡಿದರೂ ನ್ಯಾಯ ಸಿಗುವ ತನಕ ನಾವು ಹೋರಾಟ ನಿಲ್ಲಿಸುವುದಿಲ್ಲ- ಮಹೇಶ್ ಶೆಟ್ಟಿ ತಿಮರೋಡಿ. ಸೌಜನ್ಯ ಪರ ಹೋರಾಟಗಾರ

ಬೆದರಿಕೆಗಳನ್ನು ಎದುರಿಸಿ ಸಾಕಾಯ್ತು :

ನನ್ನ ಮಡಿಲಲ್ಲಿ ಮಲಗಿದ ಮಗಳಿಗಾಗಿ ನ್ಯಾಯ ಕೊಡಿಸಿ. ನಾವು ಆರೋಪ ಮಾಡುವವರನ್ನು ತನಿಖೆ ಮಾಡಲಿ, ಈ ಪ್ರಕರಣದ ಮರು ತನಿಖೆಯಾಗಲಿ. ನ್ಯಾಯಕ್ಕಾಗಿ ಹೋರಾಟ ಮಾಡಿದ್ದಕ್ಕಾಗಿ ಬೆದರಿಕೆಗಳನ್ನು ಎದುರಿಸಿ ಸಾಕಾಯ್ತು. ಇನ್ನಾದರೂ ಸರ್ಕಾರ ನ್ಯಾಯ ಒದಗಿಸಿ ಕೊಡಲಿ -ಕುಸುಮಾವತಿ, ಸೌಜನ್ಯಳ ತಾಯಿ

ಅಪ್ಪಣ್ಣ ಹೆಗ್ಡೆಯವರಿಗೆ ನ್ಯಾಯದ ಜೊತೆ ನಿಲ್ಲಲು ಸಂಘಟಕರ ಕರೆ
ಅಪ್ಪಣ್ಣ ಹೆಗ್ಡೆಯವರೆ ನೀವು ಧರ್ಮ ರಕ್ಷಣೆಗೆ ಕೆಲಸ ಮಾಡಬೇಕು. ನೀವೂ ಕೂಡ ನಮ್ಮ ಜೊತೆಗೆ ನ್ಯಾಯಕ್ಕಾಗಿ ಕೆಲಸ ಮಾಡಿ. ಯಾರೋ ಸುಳ್ಳು ಹೇಳುವವರ ಪರವಾಗಿ ಕೆಲಸ ಮಾಡಬೇಡಿ. ನೀವು ಈ ಭಾಗದ ಹಿರಿಯ ಧಾರ್ಮಿಕ ಮುಖಂಡರು. ನೀವು ಧರ್ಮದ ಪರವಾಗಿ ಎಂದಿಗೂ ಕೆಲಸ ಮಾಡಬೇಕು. ನೀವು ನಮ್ಮ ಜೊತೆಗೆ ನ್ಯಾಯದ ಹೋರಾಟದಲ್ಲಿದ್ದಿದ್ದರೇ ನಿಮ್ಮ ನೇತೃತ್ವದಲ್ಲೇ ಸೌಜನ್ಯಳಿಗಾಗಿ ಹೋರಾಟ ನಾವು ಇಲ್ಲಿ ಮಾಡುತ್ತಿದ್ದೇವು. ಸೌಜನ್ಯಳಿಗೆ ನ್ಯಾಯ ಸಿಗುವ ತನಕ ಹೋರಾಟ ಮಾಡುತ್ತೇವೆ. –ಸುಧೀರ್ ಶೆಟ್ಟಿ ಮಲ್ಯಾಡಿ, ಸಂಘಟಕ

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!