Sunday, September 8, 2024

ಹೆಮ್ಮಾಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘ ವಾರ್ಷಿಕ 93 ಲಕ್ಷ ಲಾಭ, ಶೇ.10 ಡಿವಿಡೆಂಡ್ ಘೋಷಣೆ


ಕುಂದಾಪುರ: ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿ., ಹೆಮ್ಮಾಡಿ ಇದರ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಆ.23 ಬುಧವಾರ ತಲ್ಲೂರಿನಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾದ ಉದಯ ಪೂಜಾರಿ ಬಡಾಕೆರೆ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಸಂಘವು ‘ಎ’ ದರ್ಜೆಯ ಆಡಿಟ್ ವರ್ಗೀಕರಣ ಹೊಂದಿದ್ದು ವರದಿ ವರ್ಷದಲ್ಲಿ ರೂ.93,75,152.57 ನಿವ್ವಳ ಲಾಭ ಗಳಿಸಿದೆ. ಈ ಸಾಲಿನಲ್ಲಿ ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡುವುದಾಗಿ ಅಧ್ಯಕ್ಷರು ಘೋಷಣೆ ಮಾಡಿದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಪೂಜಾರಿ ವರದಿ ಮಂಡಿಸಿ, ಸಂಘವು ರೂ.90,90,590 ಪಾಲು ಬಂಡವಾಳವನ್ನು ಹೊಂದಿದೆ. ಶೇ.5.59ರಷ್ಟು ಪ್ರಗತಿ ಸಾಧಿಸಲಾಗಿದೆ. ವರ್ಷಾಂತ್ಯಕ್ಕೆ ಒಟ್ಟು 9814 ಸದಸ್ಯರಿದ್ದಾರೆ. ಸಂಘವು ವರದಿ ವರ್ಷದಲ್ಲಿ ರೂ.50,50,83,953.39 ಠೇವಣಿ ಸಂಗ್ರಹಣೆ ಮಾಡಿದ್ದು, ಠೇವಣಿ ಸಂಗ್ರಹಣೆಯಲ್ಲಿ ಶೇ.17.94% ರಷ್ಟು ಹೆಚ್ಚಳ ಸಾಧಿಸಿದೆ. ವರದಿ ವರ್ಷದಲ್ಲಿ ಒಟ್ಟು 39,57,37,389 ಸಾಲ ನೀಡಿದೆ. ಇದರಲ್ಲಿ ರೂ.38,58,84,651.80 ರಷ್ಟು ಹೊರಬಾಕಿ ಸಾಲ ಇದ್ದು ಶೇ.7.72%ರಷ್ಟು ವೃದ್ದಿಯಾಗಿದೆ.

ಸಂಘವು 299 ಕಲ್ಪತರು ಮಹಿಳಾ ಸ್ವಸಹಾಯ ಗುಂಪುಗಳನ್ನು ಪ್ರಾಯೋಜಿಸಿದ್ದು ಮಹಿಳಾ ಸಶಕ್ತಿಕರಣಕ್ಕಾಗಿ ರೂ.7,44,22,129 ಸಾಲ ನೀಡಲಾಗಿದೆ. ನಾಡ ಶಾಖೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಸ್ವಸಹಾಯ ಗುಂಪುಗಳಿಗೆ ಲಾಭಾಂಶ ವಿತರಿಸಲಾಗಿದೆ.

ಸಂಸ್ಥೆಯು ವರದಿ ವರ್ಷದಲ್ಲಿ ಒಟ್ಟು ವಹಿವಾಟು 227,57,98,267.24 ಇದರಲ್ಲಿ ದುಡಿಯುವ ಬಂಡವಾಳ 55,14,63,397.74 ಹೊಂದಿದೆ. ವಿವಿಧ ಬ್ಯಾಂಕು ಹಾಗೂ ಸಹಕಾರ ಸಂಘಗಳಲ್ಲಿ ಒಟ್ಟು ರೂ.17,53,18,124.16 ಧನ ವಿನಿಯೋಗ ಮಾಡಲಾಗಿದೆ.

ಕಲ್ಪತರು ಸ್ವಸಹಾಯ ಗುಂಪುಗಳ ಸದಸ್ಯರುಗಳಿಗೆ ಆಂತರಿಕ ಸಾಲ ಮರುಪಾವತಿ ವಿಷಯದಲ್ಲಿ ಎಸ್.ಎಂ.ಎಸ್ ಮೂಲಕ ಮಾಹಿತಿ ನೀಡುವ ತಂತ್ರಾಂಶವನ್ನು ಅಳವಡಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಘದ ಸದಸ್ಯರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಾಂಕೇತಿಕ ವಿದ್ಯಾರ್ಥಿವೇತನ ವಿತರಿಸಲಾಯಿತು.

ಸಂಘದ ಉಪಾಧ್ಯಕ್ಷರಾದ ನರಸಿಂಹ ಪೂಜಾರಿ ಹಕ್ಲಾಡಿ, ನಿರ್ದೇಶಕರಾದ ಕೃಷ್ಣ ಪೂಜಾರಿ, ಶಂಕರ ಪೂಜಾರಿ, ರಘು ಪೂಜಾರಿ, ನಾರಾಯಣ ಪೂಜಾರಿ, ಶ್ರೀನಿವಾಸ ಪೂಜಾರಿ, ಶೇಖರ ಪೂಜಾರಿ, ಜಯಪದ್ಮ ಸೇನಾಪುರ, ಸರೋಜ ಜಿ.ಪೂಜಾರಿ, ಮಹಾಮಂಡಳದ ನಿರ್ದೇಶಕ ಮಂಜು ಪೂಜಾರಿ ಉಪಸ್ಥಿತರಿದ್ದರು.

ನಿರ್ದೇಶಕ ಕೃಷ್ಣ ಪೂಜಾರಿ ಸ್ವಾಗತಿಸಿದರು. ಆಲೂರು ಶಾಖಾ ವ್ಯವಸ್ಥಾಪಕ ನಾಗರಾಜ ಪೂಜಾರಿ ಬಜೆಟ್ ಮಂಡಿಸಿದರು. ಹಿರಿಯ ಲೆಕ್ಕಿಗ ರಮೇಶ ನಿವ್ವಳ ಲಾಭ ವಿಂಗಡಣೆ ವಾಚಿಸಿದರು. ನಾಗರಾಜ ಪೂಜಾರಿ ಕುರು ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!