Sunday, September 8, 2024

ಪಡುಕೋಣೆ ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ಶೇ.15.5 ಡಿವಿಡೆಂಡ್ ಘೋಷಣೆ


ಕುಂದಾಪುರ: ಪಡುಕೋಣೆ ವ್ಯವಸಾಯ ಸೇವಾ ಸಹಕಾರಿ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆ ಆಗಸ್ಟ್ 20ರಂದು ನಾಡದ ಹಾಡಿಗರಡಿ ನಂದಿಕೇಶ್ವರ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಘದ ಅದ್ಯಕ್ಷರಾದ ರಾಜೀವ ಪಡುಕೋಣೆ ಮಾತನಾಡಿ, ಪಡುಕೋಣೆ ವ್ಯವಸಾಯ ಸೇವಾ ಸಹಕಾರಿ ಸಂಘ ಅಭಿವದ್ದಿಯ ಪಥದತ್ತ ಸಾಗುತ್ತಿದೆ. ವರದಿ ವರ್ಷದಲ್ಲಿ ರೂ.33,67,38,525 ಠೇವಣಾತಿ ಸಂಗ್ರಹಿಸುವುದರೊಂದಿಗೆ ಶೇ.14.39 ಹೆಚ್ಚಳವಾಗಿದೆ. ವರದಿ ವರ್ಷದಲ್ಲಿ ಒಟ್ಟು 4668 ಸದಸ್ಯರಿದ್ದು ವರ್ಷಾಂತ್ಯಕ್ಕೆ 1,32,17,390 ಪಾಲುಹಣವನ್ನು ಹೊಂದಿದೆ. ವರದಿ ವರ್ಷದಲ್ಲಿ ಸಂಘವು ರೂ.67,83,760 ನಿವ್ವಳ ಲಾಭ ಗಳಿಸಿದೆ.ಸಂಘದ ಈಗಿರುವ ಕಟ್ಟಡ ಹಳೆಯದಾಗಿದ್ದು ಹೊಸ ಕಟ್ಟಡ ನಿರ್ಮಾಣ ಮಾಡುವ ಅನಿವಾರ್ಯ ಪರಿಸ್ಥಿತಿ ಇರುವುದರಿಂದ ಕಟ್ಟಡ ನಿಧಿಗೆ ಶೇ.31% ಮೀಸಲಿಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಅವರು ಸದಸ್ಯರಿಗೆ ಶೇ.15.5 ಡಿವಿಡೆಂಡ್ ನೀಡುವುದಾಗಿ ಘೋಷಣೆ ಮಾಡಿದರು.

ಮುಂದಿನ ಸಾಲಿನಲ್ಲಿ ಠೇವಣಾತಿಯನ್ನು 50 ಕೋಟಿಗೆ ಹೆಚ್ಚಿಸುವುದು, 70 ಲಕ್ಷ ಲಾಭ ಗಳಿಕೆಯ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಮಹಾಸಭೆಯಲ್ಲಿ ಸಂಘದ ಸದಸ್ಯರಾದ ನಿವೃತ್ತ ಶಿಕ್ಷಕರಾಗಿರುವ ಜಸಿಂತಾ ಡಿಸಿಲ್ವಾ, ನರಸಿಂಹ ಮೂರ್ತಿ, ಸಾಲ್ಗದ್ದೆ ಶಶಿಧರ ಶೆಟ್ಟಿ, ಗೋಪಾಲ ಶೆಟ್ಟಿ, ಹೆಚ್.ಸುಬ್ರಾಯ ಆಚಾರ್ಯ, ಕರುಣಾಕರ ಶೆಟ್ಟಿ, ಕೃಷ್ಣ ಶಂಕರ ಹೆಬ್ಬಾರ್, ನಾಗಪ್ಪಯ್ಯ ಹೆಬ್ಬಾರ್, ಶ್ರೀಮತಿ ತುಂಗಾಭದ್ರಾ ಎಸ್.ಹೆಗಡೆ, ರಾಮಯ್ಯ ಹೆಬ್ಬಾರ್, ಜಯಂತಿ ಟೀಚರ್, ನರಸಿಂಹ ಶೆಟ್ಟಿ ಸಂಸಾಡಿ ಇವರನ್ನು ಸನ್ಮಾನಿಸಲಾಯಿತು.

ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ಶೇ.೮೦ಕ್ಕಿಂತ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.

ಸಂಘದ ಉಪಾಧ್ಯಕ್ಷರಾದ ಜಿ.ರಾಜು ಭಂಡಾರಿ, ನಿದೇರ್ಶಕರಾದ ಪಿ.ನರಸಿಂಹ ಮೂರ್ತಿ, ಹೆಚ್.ರಾಜೀವ ಶೆಟ್ಟಿ, ಪಿಲಿಫ್ ಡಿಸಿಲ್ವ, ಗಣೇಶ ಪೂಜಾರಿ, ವಸಂತಿ ಕಾಂಚನ್, ಶ್ರೀಮತಿ ನಾಗರತ್ನ, ಸುಬ್ರಹ್ಮಣ್ಯ ಆಚಾರ್, ರಾಜೇಶ ಪಡುಕೋಣೆ, ಪ್ರಭಾಕರ, ಸಂತೋಷ್, ವಲಯ ಮೇಲ್ವಿಚಾರಕರಾದ ಶಿವರಾಮ ಯಡ್ತರೆ ಉಪಸ್ಥಿತರಿದ್ದರು.

ಸಂಘದ ನಿರ್ದೇಶಕರಾದ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿ, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಭಾಸ್ಕರ ಎಮ್ ಸ್ಬಾಗತಿಸಿದರು. ಸಿಬ್ಬಂದಿ ಜ್ಯೋತಿ ಮತ್ತು ಮಮತಾ ಪ್ರಾರ್ಥಿಸಿದರು. ನಿರ್ದೇಶಕ ರಾಜೇಶ ಪಡುಕೋಣೆ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!