spot_img
Tuesday, June 16, 2026
spot_img

ಯೋಧರೊಂದಿಗೆ ಸಂವಾದ ನಡೆಸಿದ ತೆಂಕೊಡಿಗೆ ಸ.ಕಿ.ಪ್ರಾ.ಶಾಲೆಯ ಚಿಣ್ಣರು


ಕುಂದಾಪುರ: ಸ.ಕಿ.ಪ್ರಾ.ಶಾಲೆ ತೆಂಕೊಡಿಗೆಯ ವಿದ್ಯಾರ್ಥಿಗಳು ಸ್ವಾತಂತ್ರ್ಯ ದಿನದಂದು ನಿವೃತ್ತ ಯೋಧರಾದ ಅಶೋಕ್ ಶೆಟ್ಟಿ ಇವರೊಂದಿಗೆ ಸಂವಾದ ನಡೆಸಿದರು.

ಕಾರ್ಯಕ್ರಮದಲ್ಲಿ ವೇ.ಮೂ.ದಿನಕರ ಉಡುಪ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗೀತಾ ಅವಿನಾಶ್, ಸದಸ್ಯರಾದ ಗೋವರ್ದನ್ ಜೋಗಿ, ಎಸ್,ಡಿ‌ಎಂಸಿ ಅಧ್ಯಕ್ಷ ನಾಗೇಂದ್ರ ಉಡುಪ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹೇಶ ಗಾಣಿಗ, ವೆಂಕಟೇಶ ಶೆಟ್ಟಿ, ಮುಖ್ಯೋಪಾಧ್ಯಾಯರಾದ ಜ್ಯೋತಿ ಶೆಟ್ಟಿ, ಉಪಸ್ಥಿತರಿದ್ದರು.

ಸಭಾಕಾರ್ಯಕ್ರಮದಲ್ಲಿ ಎಂ.ಎಸ್ ಮಂಜ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಕೊಡಮಾಡಿದ ನೋಟ್ ಪುಸ್ತಕ, ಸಮವಸ್ತ್ರ, ಐಡಿ ಕಾರ್ಡ್‌ಗಳನ್ನು ವಿತರಿಸಲಾಯಿತು. ವೆಂಕಟೇಶ್ ಶೆಟ್ಟಿ ಅವರು ಕೊಡಮಾಡಿದ ಕಲರ್ ಪ್ರಿಂಟರ್ ಹಾಗೂ ವಂಡ್ಸೆ ಗ್ರಾಮ ಪಂಚಾಯಿತಿ ಕೊಡಮಾಡಿದ ಕ್ರೀಡಾ ಪರಿಕರಗಳನ್ನು ಹಸ್ತಾಂತರಿಸಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇ.ಮೂ.ದಿನಕರ ಉಡುಪ ವಹಿಸಿ ಎಂ.ಎಸ್ ಮಂಜ ಚಾರಿಟೆಬಲ್ ಟ್ರಸ್ಟ್‌ನ ಶೈಕ್ಷಣಿಕ ಕಾಳಜಿಯನ್ನು ಶ್ಲಾಘಿಸಿದರು.

ಸುಶ್ಮಿತಾ ಸ್ವಾಗತಿಸಿ, ಜ್ಯೋತಿ ಶೆಟ್ಟಿ ವಂದಿಸಿದರು. ಅನುಷಾ ಹಾಗೂ ಉದಯ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!