spot_img
Wednesday, April 29, 2026
spot_img

ಕುಂದಾಪುರ: ನಮ್ಮ ನಾಡ ಒಕ್ಕೂಟದ ಸಹಭಾಗಿತ್ವದಲ್ಲಿ ಕಮ್ಯೂನಿಟಿ ಸೆಂಟರ್ ಲೋಕಾರ್ಪಣೆ

ಕುಂದಾಪುರ: ನಮ್ಮ ನಾಡ ಒಕ್ಕೂಟದ ಸಹಭಾಗಿತ್ವದಲ್ಲಿ ಕಮ್ಯೂನಿಟಿ ಸೆಂಟರ್ ನ್ನು ದಿನಾಂಕ 17 ರಂದು ಗುರುವಾರ ಕುಂದಾಪುರ ಶಾಸ್ತ್ರಿ ಸರ್ಕಲ್ ಬಳಿರುವ ‘ಮುತ್ತು ಮಹಲ್’ ಕಟ್ಟಡದ ಎರಡನೇ ಅಂತಸ್ತಿನಲ್ಲಿ ಲೋಕಾರ್ಪಣೆಗೊಂಡಿತು.

ಉದ್ಘಾಟನೆಯನ್ನು ಕಟ್ಟಡದ ಮಾಲೀಕರಾದ ಡಾ. ವೈ ಎಸ್ ಹೆಗ್ಡೆ ಉದ್ಘಾಟಿಸಿ ಅವರು ಮಾತನಾಡಿ ಇಂದು ಎಷ್ಟೋ ಪ್ರತಿಭಾವಂತ ಹೆಣ್ಣುಮಕ್ಕಳು ಕೂಡಾ ಬಡತನದ ಕಾರಣದಿಂದ ವಿದ್ಯೆಯಿಂದ ವಂಚಿತರಗಿದ್ದಾರೆ. ಇದರಿಂದ ಪ್ರತಿಭೆಗಳು ಮನೆಯಲ್ಲಿಯೇ ಇದ್ದು ವ್ಯರ್ಥವಾಗುವ ಪರಿಸ್ಥಿತಿ ಬಂದಿದೆ. ಅಂತವರನ್ನು ಗುರುತಿಸಿ ವಿದ್ಯೆ ಕೊಡುವ ಕಾರ್ಯ ಮಾಡಬೇಕು ಎಂದರು.

ನಮ್ಮ ನಾಡ ಒಕ್ಕೂಟ ಸಹಭಾಗಿತ್ವದಲ್ಲಿ ನಗರದಲ್ಲಿ ಆರಂಭಗೊಂಡ ಕಮ್ಯುನಿಟಿ ಸೆಂಟರನ್ನು ಶಾಸ್ತ್ರಿ ವೃತ್ತ ಸಮೀಪದ ಮುತ್ತು ಮಹಲ್ ಕಟ್ಟಡದಲ್ಲಿ ಉದ್ಘಾಟಿಸಿ ಲೋಕಾರ್ಪಣೆಗೊಳಿಸಿ ಅವರು ಶುಭ ಹಾರೈಸಿದರು.

ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದ ಕುಂದಾಪುರ ಕಮ್ಯೂನಿಟಿ ಸೆಂಟರ್ ನ ಪ್ರದಾನ ಕಾರ್ಯದರ್ಶಿ ಹುಸೇನ್ ಹೈಕಾಡಿಯವರು ನಮ್ಮ ನಾಡ ಒಕ್ಕೂಟ ದ ಕಾರ್ಯವೈಖರಿಗಳ ಬಗ್ಗೆ ಸವಿಸ್ತಾರವಾಗಿ ಹೇಳಿದರು.

ಈ ಕಮ್ಯೂನಿಟಿ ಸೆಂಟರ್‌ನಲ್ಲಿ ನಮ್ಮ ಸಮುದಾಯದವರಿಗೆ ಶಿಕ್ಷಣ, ಆರೋಗ್ಯ ಉದ್ಯೋಗ, ಇದರ ಜೊತೆಗೆ ಅಯುಷ್ಮಾನ್ ಕಾರ್ಡ್, ಆಧಾರ್ ಕಾರ್ಡ್ ಸ್ಕಾಲರ್ ಶಿಪ್, ರೇಷನ್ ಕಾರ್ಡ್, ಸರ್ಕಾರಿ ಉದ್ಯೋಗ ಇತರ ಮಾಹಿತಿ ಕಾರ್ಯಕ್ರಮವನ್ನು ಈ ಕಚೇರಿಯ ಮೂಲಕ ಮಾಡಿಕೊಡಲಾಗುವುದು. ಈ ಕಚೇರಿಯ ಮೂಲಕ ನಮ್ಮ ಸಮುದಾಯದ ವಿದ್ಯಾರ್ಥಿಗಳಿಗೆ ಯುವಕರಿಗೆ ಮಾರ್ಗದರ್ಶನ ಇನ್ನಿತರ ತರಬೇತಿ ಕಾರ್ಯಕ್ರಮವನ್ನೂ ನಡೆಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ನಮ್ಮನಾಡ ಒಕ್ಕೂಟ (ಎನ್ ಎನ್ ಓ)ಕಮ್ಯೂನಿಟಿ ಸೆಂಟರ್ ಅಧ್ಯಕ್ಷ ಅಬ್ದುಲ್ ಮುನಾಫ್ ಹಂಗಾರಕಟ್ಟೆ ಇವರು ವಹಿಸಿದ್ದರು.

ಈ ಸಂದರ್ಭದಲ್ಲಿ ಸಮಾಜ ಸೇವಕ ಇಬ್ರಾಹಿಂ ಸಾಹೇಬ್ ಹಂಗಾರಕಟ್ಟೆ, ಎನ್ ಎನ್ ಓ ಉಡುಪಿ ಜಿಲ್ಲಾಧ್ಯಕ್ಷ ಬೆಳ್ವೆ ಮುಸ್ತಾಕ್ ಅಹಮ್ಮದ್, ಕುಂದಾಪುರ ಘಟಕ ಅಧ್ಯಕ್ಷ ಕಂಡ್ಲೂರು ಹಾಜಿ ದಸ್ತಗಿರಿ ಸಾಹೇಬ್, ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹುಸೇನ್, ಉಡುಪಿ ಟ್ರಸ್ಟ್ ಸದಸ್ಯರಾದ ಉಡುಪಿ ಪಿರ್ ಮೊಹಮ್ಮದ್, ಎನ್ ಎನ್ ಓ ಹೆಬ್ರಿ ಘಟಕದ ಅಧ್ಯಕ್ಷ ರಫೀಕ್ ಅಜೆಕಾರು, ಜಿಲ್ಲಾ ಸದಸ್ಯ ಅಬ್ದುಲ್ ಖಾದರ್ ಮೂಡುಗೋಪಾಡಿ ಹಾಗೂ ಎನ್ ಎನ್ ಓ ಕಮ್ಯೂನಿಟಿಯ ಜಿಲ್ಲಾ ಮತ್ತು ತಾಲೂಕಿನ ಸದಸ್ಯರು ಹಾಗೂ ಜಮಾತ್ ಬಾಂಧವರು ಉಪಸ್ಥಿತರಿದ್ದರು.

ಪಳ್ಳಿ ಉಸ್ಮಾನ್ ಗುಲ್ವಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಎನ್ ಎನ್ ಓ ಉಡುಪಿ ಜಿಲ್ಲಾ ಉಪಾಧ್ಯಕ್ಷ ಅಬುಮೊಹಮ್ಮದ್ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!