spot_img
Wednesday, April 29, 2026
spot_img

ಬೆಚ್ಚಳ್ಳಿಯಲ್ಲಿ ಊರ ಹೋರಾಟಗಾರರಿಗೆ ಸನ್ಮಾನ


ಸಿದ್ಧಾಪುರ: 77ನೇ ಸ್ವಾತಂತ್ರ್ಯೋತ್ಸವದ ದಿನಾಚರಣೆಯ ಅಂಗವಾಗಿ ಪ್ರಗತಿಪರ ಕೃಷಿಕ ರಾಜೇಂದ್ರ ಬೆಚ್ಚಳ್ಳಿ ಇವರು ನನ್ನ ಊರು ನನ್ನ ಹೋರಾಟ ಹೊಸಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಚ್ಚಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಮ್ಮೂರಿಗಾಗಿ ಹೋರಾಟ ಮಾಡಿದ ಹಿರಿಯ ಹಾಗೂ ಕಿರಿಯವರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ಆಯೋಜಿಸಿದ್ದರು.

ವಿಶ್ರಾಂತ ಉಪನ್ಯಾಸಕರಾದ ಡಾ. ಶ್ರೀಕಾಂತ್ ರಾವ್ ಸಿದ್ದಾಪುರ ಮಾತನಾಡಿ ಬ್ರಿಟಿಷರ ಕಪಿಮುಷ್ಠಿಯಿಂದ ಹೊರ ಬಂದ ದಿನ ಹಲವಾರು ಮಂದಿ ತ್ಯಾಗ ಬಲಿದಾನದಿಂದ ಇಂದು ನಮಗೆ ಸ್ವಾತಂತ್ರ್ಯ ದೊರೆತಿದೆ ಎಂದು ಹೇಳಿದ ಅವರು ಅಂದಿನ ದಿನಗಳಲ್ಲಿ ಇತರ ಹೋರಾಟ ಮಾಡಿದ ಹಳ್ಳಿಯ ಸಾಧಕರ ಬಗ್ಗೆ ವಿವರಿಸಿದರು.

ಈ ಸಂದರ್ಭದಲ್ಲಿ ಕೃಷ್ಣಪ್ರಸಾದ ಶೆಟ್ಟಿ ಹೊಳೆಶಂಕರನಾರಾಯಣ, ಅಕ್ಷಯ್ ಶೆಟ್ಟಿ ಹೊಳೆಶಂಕರನಾರಾಯಣ, ರಾಮ ಪೂಜಾರಿ ಬೆಚ್ಚಳ್ಳಿ, ರುಕ್ಮಿಣಿ ಬೆಚ್ಚಳ್ಳಿ ಅವರನ್ನು ಸನ್ಮಾನಿಸಲಾಯಿತು.

ಅರ್ಚಕರಾದ ಸುಬ್ರಮಣ್ಯ ಉಪಾಧ್ಯಾಯ, ಕಾರ್ಯಕ್ರಮದ ರೂವಾರಿ ಪ್ರಗತಿಪರ ಕೃಷಿಕ ರಾಜೇಂದ್ರ ಬೆಚ್ಚಳ್ಳಿ, ಶಾಲಾ ಮುಖ್ಯ ಶಿಕ್ಷಕ ಶಿವರಾಂ ರಾವ್, ಶಾಲಾ ಎಸ್ಡಿಎಂಸಿ ಅಧ್ಯಕ್ಷ ಅಶೋಕ ಶೆಟ್ಟಿ, ಗೌರವ ಶಿಕ್ಷಕಿ ನಿರ್ಮಲ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!