Sunday, September 8, 2024

ಹಟ್ಟಿಯಂಗಡಿ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ‘ಭಾವಾಂತರಂಗ’ ಕೌಶಲ್ಯಾಧಾರಿತ ಕಾರ್ಯಾಗಾರ

ಕುಂದಾಪುರ: ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿ‌ಅಂಗಡಿಯಲ್ಲಿ ‘ಭಾವಾಂತರಂಗ’ ಪರಿಪೂರ್ಣ ಬದುಕಿನೆಡೆ ನಮ್ಮ ಪಯಣ ಎನ್ನುವ ಸಂಪೂರ್ಣ ಚಟುವಟಿಕೆ ಆಧಾರಿತ ವ್ಯಕ್ತಿತ್ವ ವಿಕಸನ ಕಾರ್ಯಾಗಾರವನ್ನು ಹತ್ತು ವರ್ಷಗಳಿಂದ ನಡೆಸುತ್ತಿದ್ದು, ಈ ವರ್ಷ ಆ.12 ಶನಿವಾರದಂದು ನಡೆಯಿತು. ಈ ಕಾರ್ಯಾಗಾರವನ್ನು ಸಂಪನ್ಮೂಲ ವ್ಯಕ್ತಿಗಳು ಶಾಲೆಯ ರಜತಮಹೋತ್ಸವದ ಲಾಂಛನದ ಕಲಾಕೃತಿಯ ನಿರ್ಮಾಣ ಮಾಡಿ, ಖ್ಯಾತ ಪರಿಸರ ವಾದಿ ಶಿವಾನಂದ ಕಳವೆ, ಸಿರಸಿ ಇವರ ಅಮೃತಹಸ್ತದಿಂದ ವಿನೂತನ ರೀತಿಯಲ್ಲಿ ಉದ್ಘಾಟಿಸಲಾಯಿತು.

ಈ ಕಾರ್ಯಾಗಾರ ಆಯೋಜನೆ ಕುರಿತಾಗಿ ಮಾತನಾಡಿದ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳೂ ಮತ್ತು ಶಾಲಾ ಪ್ರಾಂಶುಪಾಲರಾದ ಶ್ರೀ ಶರಣ ಕುಮಾರ “ ಶ್ರೀ ಸಿದ್ಧಿವಿನಾಯಕನ ಕೃಪೆ, ಸಂಸ್ಥಾಪಕರಾದ ದಿವಂಗತ ವೇದಮೂರ್ತಿ ರಾಮಚಂದ್ರ ಭಟ್ಟರ ಸದಾಶಯಗಳಿಂದಲೇ ಮುಂದುವರಿಯುತ್ತಿರುವ ಈ ಸಂಸ್ಥೆ ಹತ್ತು ವರ್ಷಗಳಿಂದ ಭಾವಾಂತರಂಗ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದೆ. ಗುರಿಯನ್ನು ಸದಾ ಸ್ಮರಿಸಿಕೊಂಡು ಪ್ರತಿನಿತ್ಯ ಪ್ರಯತ್ನಿಸಿದರೆ ಅಸಾಧ್ಯವೆಂಬುದೇನೂ ಇಲ್ಲ. ವಿಭಿನ್ನವಾದ ಕಾರ್ಯಗಳ ಮೂಲಕ ಸಾಧಿಸುವವಗೆ ಯಶಸ್ಸು ಸಿಗುತ್ತದೆ. ಯಾವುದೇ ಕಾರ್ಯ ಎರಡು ರೀತಿಯಲ್ಲಿ ಪ್ರೇರಣೆ ನೀಡಬಹುದು. ಅದರಲ್ಲಿ ಸಕಾರಾತ್ಮಕವಾದ ಮಾರ್ಗವನ್ನಷ್ಟೇ ಆಯ್ಕೆ ಮಾಡಿಕೊಳ್ಳಬೇಕು. ಇಂದು ವಿದ್ಯಾರ್ಥಿಗಳು ಪಡೆದುಕೊಳ್ಳುವ ಅತ್ಯಲ್ಪ ಮಾಹಿತಿಯೂ ಕೂಡ ಅವರ ಮುಂದಿನ ಜೀವನಕ್ಕೆ ನೆರವು ನೀಡಬಹುದೆನ್ನುವ ನಿರೀಕ್ಷೆ ನಮ್ಮದು. ಅವರು ಕಲಿತು, ತಾವು ಕಲಿತದ್ದನ್ನು ತಮ್ಮವರೊಂದಿಗೆ ಹಂಚಿಕೊಡರೆ, ನಮ್ಮ ಪ್ರಯತ್ನ ಸಾರ್ಥಕ” ಎಂದು ತಿಳಿಸಿದರು.

ಈ ಸಂದರ್ಭದಲ್ಲಿ 46 ವಿವಿಧ ಬಗೆಯ ಕಾರ್ಯಾಗಾರಗಳನ್ನು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ನಡೆಸಲಾಯಿತು. ಶಿವಾನಂದ ಕಳವೆಯವರು ಪರಿಸರ ಶಿಕ್ಷಣದ ಕುರಿತು ಮಾಹಿತಿ ನೀಡಿದರೆ, ಜನಾರ್ದನ ಹಾವಂಜೆಯವರು ಕಾವಿಕಲೆಯ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟರು. ಶ್ರೀಮತಿ ಪ್ರಸನ್ನಾ ಪ್ರಸಾದ್ ಭಟ್ ಕಸಿಕಟ್ಟುವುದರ ಬಗ್ಗೆ ಮಾಹಿತಿ ನೀಡಿ ಕಸೆ ಕಟ್ಟಿ ತೋರಿಸಿದರೆ, ನಾರಾಯಣ ಜಿ. ಶೇರುಗಾರರು ಬದುಕಿಗೆ ಉಸಿರು ತುಂಬಿದವರು ಎಂಬ ವಿಚಾರದಲ್ಲಿ ಮಾಹಿತಿ ನೀಡಿದರು. ಸಂದೀಪ ಭಟ್ಟ ಈ ಜಗ-ಸೋಜಿಗವೆಂಬ ವಿಚಾರವನ್ನು ಪ್ರಸ್ತುತಪಡಿಸಿದರೆ, ಯೋಗೀಶ್ ಬಂಕೇಶ್ವರರು – ರಂಗಶಿಕ್ಷಣದ ಬಗ್ಗೆ ತಿಳಿಸಿಕೊಟ್ಟರು. ಸತ್ಯನಾ ಕೊಡೇರಿಯವರು ರಂಗಕಲೆಯ ಬಗ್ಗೆ ತಿಳಿಸಿದರೆ, ಸದ್ಗುರುಭಟ್ಟ ಮತ್ತು ಶ್ರೀಪ್ರಕಾಶ್ ಭಟ್ಟರು ಜಂತರ್ – ಮಂತರ್ ವಿಚಾರಗಳನ್ನು ತಿಳಿಸಿದರು. ಗಣಪತಿ ಹೆಗಡೆ ಮತ್ತು ಶ್ರೀಗಣೇಶ ಹೆಗಡೆಯವರು ಬಹುಮುಖಿ ಬದುಕು ಎಂಬ ವಿಚಾರಗಳನ್ನು ಪ್ರಸ್ತುತ ಪಡಿಸಿದರೆ ವಿ. ಟಿ. ಹೆಗಡೆಯವರು ತೆಂಗಿನ ಗರಿಗಳ ಮೂಲಕ ವಿವಿಧ ಕಲಾಕೃತಿಗಳನ್ನು ರಚಿಸಲು ತಿಳಿಸಿಕೊಟ್ಟರು. ರವಿಪ್ರಸಾದ್ ಆಚಾರ್ ಕಲಾಚಿತ್ತಾರದ ಬಗ್ಗೆ ತಿಳಿಸಿದರೆ ಶ್ರೀಮತಿ ನಾಗರತ್ನ ಹೇರ್ಳೆ ಸ್ಥಿರಚಿತ್ತದ ಚಿತ್ತಾರವೆಂಬ ಶೀರ್ಷಿಕೆಯಡಿಯಲ್ಲಿ ತಿಳಿಸಿಕೊಟ್ಟರು. ನರೇಂದ್ರ ಎಸ್. ಗಂಗೊಳ್ಳಿಯವರು ಬರಹ ಬಂಧದ ವಿಚಾರಗಳನ್ನು ತಿಳಿಸಿದರೆ, ಬೈಂದೂರು ಚಂದ್ರಶೇಖರ ನಾವುಡರು ಸೃಜನಾತ್ಮಕ ಬರವಣಿಗೆಯನ್ನು ಪರಿಚಯಿಸಿದರು. ರಾಘವೇಂದ್ರ ಕೊಡ್ಲಾಡಿಯವರು ತರಕಾರಿಗಳಲ್ಲಿ ಕಲೆಯನ್ನು ಅರಳಿಸಲು ತಿಳಿಸಿದರೆ, ವಿನಯಚಂದ್ರರು ಬೀಜದುಂಡೆಗಳ ರಚನೆಯನ್ನು ತಿಳಿಸಿದರು. ಶ್ರೀಮತಿ ಯಶೋಧಾರವರು ವಿವಿಧ ಬಗೆಯ ಹೂಬುಟ್ಟಿ ತಯಾರಿಕೆಯನ್ನು ಮಕ್ಕಳಿಗೆ ತಿಳಿಸಿಕೊಟ್ಟರೆ ಕುಮಾರಿ ವೈಷ್ಣವಿ ಮೆಹಂದಿ ಹಚ್ಚುವ ಕಲೆಗಳನ್ನು ತಿಳಿಸಿಕೊಟ್ಟರು. ಶ್ರೀಮತಿ ಲತಾಡಿ.ಶೆಟ್ಟಿ ಹೂಗುಚ್ಚ ತಯಾರಿಕೆಯನ್ನು ತಿಳಿಸಿ ಕೊಟ್ಟರೆ, ಶ್ರೀಮತಿ ವನಿತಾ ಶೆಟ್ಟಿಯವರು ಏಕಪಾತ್ರಾಭಿನಯಗಳ ಮೂಲಕ ಅದನ್ನು ನಡೆಸುವ ಕಲೆಗಳನ್ನು ತಿಳಿಸಿಕೊಟ್ಟರು. ಶ್ರೀಮತಿ ಸವಿತಾ ಎರ್ಮಾಳ್ ವ್ಯಕ್ತಿತ್ವವಿಕಸನದ ಮಾರ್ಗದರ್ಶನ ನೀಡಿದರೆ, ಕುಮಾರಿ ಶಾಂಭವಿಕಾ. ಶ್ರೀ. ಭತ್ತದಿಂದ ವಿವಿಧ ಕಲಾಕೃತಿ ರಚನೆಯನ್ನು ಮಕ್ಕಳಿಗೆ ಬೋಧಿಸಿ, ಮಾಡಿಸಿದರು. ಶ್ರೀಮತಿ ವೀಣಾಪಿ. ಶ್ಯಾನುಭೋಗ್- ಸ್ಮರಣಶಕ್ತಿಯನ್ನು ವೃದ್ಧಿಸಿಕೊಳ್ಳುವ ವಿವಿಧ ಆಟಗಳನ್ನು ಪರಿಚಯಿಸಿದರೆ, ಶ್ರೀಮತಿ ಸಹನಾ ಕೆ. ಹೆಬ್ಬಾರ್ ಬೆಂಕಿಬಳಸದೆ ಅಡುಗೆ ತಯಾರಿ ನಡೆಸಿ ಮಕ್ಕಳಿಗೆ ಸವಿರುಚಿಯ ಅನುಭವ ನೀಡಿದರು. ಕುಮಾರಿ ಪ್ರಗತಿ ಗಾಳಿಪಟ ತಯಾರಿಕೆಯ ಮಾಹಿತಿ ನೀಡಿದರೆ, ಶ್ರೀಮತಿ ಸುಮತಿ ಕಾಮತ್ ಸಿ. ಡಿ. ಮೂಲಕ ವಾಲ್ ಹ್ಯಾಂಗಿಂಗ್ ತಯಾರಿಕೆಯನ್ನು ತಿಳಿಸಿಕೊಟ್ಟರು. ಶ್ರೀಮತಿ ಉಷಾ ಕೆ. ಕೀಬಂಚ್ ತಯಾರಿಕೆಯ ಬಗ್ಗೆ ತಿಳಿಸಿಕೊಟ್ಟರೆ ಕುಮಾರಿ ತನುಶ್ರೀ ಬಿ. ವಾಲ್ ಕೀ ಹೋಲ್ಡರ್ ಬಗ್ಗೆ ಮಕ್ಕಳಿಗೆ ತಿಳಿಸಿದರು. ಕುಮಾರಿ ಪೃಥ್ವಿ ಶೆಟ್ಟಿಯವರು ಮಂಡಲ ಕಲೆ ಬಗ್ಗೆ ತಿಳಿಸಿದರೆ, ಶ್ರೀಮತಿ ಸುರೇಖಾ ಭಟ್ ವಿವಿಧ ರಂಗೋಲಿಗಳ ರಚನೆಯನ್ನು ತಿಳಿಸಿದರು. ಶ್ರೀಮತಿ ಪ್ರಿಯಾ ಕಾಮತ್ ಕ್ರಾಫ್ಟ್ ಬಗ್ಗೆ ತಿಳಿಸಿದರೆ ಶ್ರೀಮತಿ ತಾರಕೇಶ್ವರಿ ತೆಂಗಿನ ಚಿಪ್ಪಿನಿಂದ ವಿವಿಧ ಕಲಾಕೃತಿಗಳ ರಚನೆಯನ್ನು ಪರಿಚಯಿಸಿದರು. ಶ್ರೀಮತಿ ಜ್ಯೋತಿ ಶೇಟ್ ಪೇಪರ್ ಆರ್ಟ್ ಬಗ್ಗೆ ತಿಳಿಸಿದರೆ, ಶ್ರೀಮತಿ ಜ್ಯೋತಿ ಪ್ರಶಾಂತ್ ಜೀವನ ಕೌಶಲ್ಯಗಳ ಬಗ್ಗೆ ಮಾಹಿತಿ ನೀಡಿದರು. ಶ್ರೀಮತಿ ವಂದನಾಕೃಷ್ಣ ಮ್ಯಾಕ್ರೇಮ್ ಬಗ್ಗೆ ಮಾಹಿತಿ ನೀಡಿದರೆ, ಕುಮಾರಿ ಚಿನ್ಮಯಿ ಶೆಟ್ಟಿ ಡ್ರೀಮ್ ಕ್ಯಾಪ್ಚರ್ ಬಗ್ಗೆ ತಿಳಿಸಿದರು. ರಾಜಶೇಖರ ತಾಳಿಕೋಟೆಯವರು ವಿವಿಧ ಮುಖವಾಡ ತಯಾರಿಕೆಯ ಬಗ್ಗೆ ತಿಳಿಸಿದರೆ, ವೇಣುಗೋಪಾಲ ಶೆಟ್ಟಿ ಲ್ಯಾಂಡ್ ಸ್ಕೇಪ್ ಬಗ್ಗೆ ತಿಳಿಸಿದರು. ಉದಯ ನಾಯ್ಕ ಇವರು ಭಾಷಣ ಕಲೆಯ ಬಗ್ಗೆ ತಿಳಿಸಿದರೆ, ಶ್ರೀನಿವಾಸರು ಬರವಣಿಗೆಯನ್ನು ತಿಳಿಸಿಕೊಟ್ಟರೆ, ಮಂಜುನಾಥ ದೇವಾಡಿಗರು ಬಲೂನ್ ಆರ್ಟ್ ಬಗ್ಗೆ ತಿಳಿಸಿದರು. ಶ್ರೀಮತಿ ಪೂರ್ಣಿಮಾರವರು ಆಡುತ ಪದ್ಯವ ಹೆಣೆಯೋಣ ಎನ್ನುತ್ತಾ ಪದ್ಯ ರಚನೆಯ ಕೌಶಲಗಳನ್ನು ತಿಳಿಸಿಕೊಟ್ಟರು. ಶ್ರೀಮತಿ ಮಾಲಿನಿ ಎಂ. ಪಿ. ಹಾಡು-ಪಾಡುಗಳ ಬಗ್ಗೆ ತಿಳಿಸಿಕೊಟ್ಟರೆ ದೇವರಾಜ ಬಿ. ಮತ್ತು ನಾಗಾರ್ಜುನ ನಾಯ್ಕ ಇವರು ದೈನಂದಿನ ಜೀವನದಲ್ಲಿ ವಿಜ್ಞಾನ ವೆಂಬ ವಿಷಯದಲ್ಲಿ ಮಾಹಿತಿ ನೀಡಿದರು. ರಮೇಶ್ ರೆಬಿನಾಳ್ ರವರು ಬಣ್ಣದಲೋಕದಲ್ಲಿ ಪುಟಾಣಿಗಳನ್ನು ತೇಲಿಸಿದರೆ ಬೇಬಿ. ಎಸ್. ನಾಯಕ್ ರವರು ಪೇಪರ್ ಗೊಂಬೆಗಳ ತಯಾರಿಕೆಯನ್ನು ತಿಳಿಸಿದರು.

ಈ ಸಂದರ್ಭದಲ್ಲಿ ರವಿಪ್ರಸಾದ್ ಆಚಾರ್ ತಮ್ಮ ಯಕ್ಷಗಾನ ಕಲಾಕೃತಿಯನ್ನು ಸಂಸ್ಥೆಗೆ ಹಸ್ತಾಂತರಿಸಿದರು. ಶಾಲಾ ಆಡಳಿತಾಧಿಕಾರಿ ವೀಣಾ ರಶ್ಮೀ ಎಂ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸುಜಾತ ಸದಾರಾಮ್, ಶಿಕ್ಷಕ-ಶಿಕ್ಷಕೇತರ ವೃಂದ ಮತ್ತು ವಿದ್ಯಾರ್ಥಿಗಳು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲರಾದ ರಾಮ ದೇವಾಡಿಗ ಸರ್ವರನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!