spot_img
Tuesday, April 28, 2026
spot_img

ಸ್ವಾತಂತ್ರ್ಯೋತ್ಸವದ ದಿನಾಚರಣೆಯಲ್ಲಿ ತ್ರಿವರ್ಣದ ಕ್ರಾಫ್ಟ್ ರಚನೆ ಅತ್ಯಂತ ಸೂಕ್ತ- ಪ್ರಸನ್ನ ಹೆಬ್ಬಾರ್


ತೆಕ್ಕಟ್ಟೆ: ವರ್ಣಗಳನ್ನು ಬಳಸಿ, ಕಾಗದ ಅಥವಾ ಕ್ಯಾನ್ವಾಸಿನ ಮೇಲೆ ಮಾನವಜೀವಿ ಮೂರ್ತ ಅಥವಾ ಅಮೂರ್ತ ದೃಶ್ಯವನ್ನು ಅರ್ಥವತ್ತಾಗಿ ಮೂಡಿಸುವ ಕಲೆ ಚಿತ್ರಕಲೆ. ಚಿತ್ರಗಳನ್ನು ಯಾರೂ ಬಿಡಿಸಬಹುದು. ಬಿಡಿಸಿದಂತಹ ಚಿತ್ರಗಳಿಗೆ ಒಳ್ಳೆಯ ಸಂಸ್ಕಾರ ದೊರೆಯಬೇಕಾದರೆ ಗುರುವಿನ ಮೂಲಕ ಆಗಬೇಕಾಗುತ್ತದೆ. ತೀರಾ ಎಳೆಯವರಿಂದ ಮುದುಕರವರೆಗೂ ಈ ಕಲೆಯಲ್ಲಿ ತೊಡಗಿಸಿಕೊಳ್ಳಬಹುದು. ಮಕ್ಕಳಲ್ಲಿ ಶೃದ್ಧೆ, ಏಕಾಗೃತೆ, ಸಹನೆ ಮೂಡಿಸುವ ಸರ್ವಶ್ರೇಷ್ಠ ಕಲೆ ಚಿತ್ರಕಲೆ. ಇಂತಹ ಶ್ರೇಷ್ಠ ಕಲೆ ಗಿರೀಶ್ ವಕ್ವಾಡಿ ಚಿತ್ರಕಲಾ ಶಿಕ್ಷಕರ ಶ್ರಮದಿಂದ 15 ವರ್ಷಗಳಿಂದ ಶ್ರೀ ಕೈಲಾಸ ಕಲಾಕ್ಷೇತ್ರದ ಆಶ್ರಯದಲ್ಲಿ ಬೆಳೆದು ಬಂದಿದೆ. ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಸಾಂದರ್ಭೋಚಿತ ಕ್ರಾಫ್ಟ್ ಮಾಡುವುದರ ಮೂಲಕ ಬ್ಯಾಡ್ಜ್ ಇನ್ನಿತರ ತ್ರಿವರ್ಣ ಧ್ವಜದ ಬಣ್ಣಗಳಿಂದ ತರಗತಿಯನ್ನು ಸಂಪನ್ನಗೊಳಿಸಿರುವುದು ನಿಜಕ್ಕೂ ಸ್ತುತ್ಯರ್ಹ ಎಂದು ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಟೆಕ್ನೋಲಜಿ ಕುಂದಾಪುರ ಇದರ ಉಪನ್ಯಾಸಕರಾದ ಪ್ರಸನ್ನ ಹೆಬ್ಬಾರ್ ಅಭಿಪ್ರಾಯಪಟ್ಟರು.

ತೆಕ್ಕಟ್ಟೆ ಹಯಗ್ರೀವದಲ್ಲಿ ಆಗಸ್ಟ್ ೧೨ರಂದು ಶ್ರೀ ಕೈಲಾಸ ಕಲಾಕ್ಷೇತ್ರ ತೆಕ್ಕಟ್ಟೆ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿಶೇಷ ಶಿಬಿರವನ್ನು ಉದ್ದೇಶಿಸಿ ಪ್ರಸನ್ನ ಹೆಬ್ಬಾರ್ ಮಾತನ್ನಾಡಿದರು.

ಚಿತ್ರಕಲಾ ಶಿಕ್ಷಕರಾದ ಗಿರೀಶ್ ವಕ್ವಾಡಿ, ಸಹ ಶಿಕ್ಷಕಿಯಾದ ಮೇಘನಾ, ನಿಶ್ಮಿತಾ, ವರ್ಷ ಉಪಸ್ಥಿತರಿದ್ದು ಕ್ರಾಫ್ಟ್ ರಚನೆಯಲ್ಲಿ ಸಹಕಾರಿಯಾದರು. ಕಾರ್ಯದರ್ಶಿ ಯೋಗೀಶ್ ಭಟ್ ಕಾರ್ಯಕ್ರಮ ನಿರೂಪಿಸಿ, ಕೊಮೆ ವಿಜಯ್ ಸ್ವಾಗತಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!