spot_img
Monday, June 15, 2026
spot_img

ಆ.20ರಂದು ‘ಅತ್ತ ನಕ್ಷತ್ರ’ ನೀಳ್ಗತೆ ಪುಸ್ತಕ ಬಿಡುಗಡೆ

ಕುಂದಾಪುರ : ಜನಪ್ರತಿನಿಧಿ ಪ್ರಕಾಶನ ಪ್ರಕಟಿಸಿದ ಕವಿ, ಲೇಖಕ ಕಾವ್ಯ ಬೈರಾಗಿ (ಶ್ರೀರಾಜ್ ವಕ್ವಾಡಿ) ಅವರ ಐದನೇ ಕೃತಿ ’ಅತ್ತ ನಕ್ಷತ್ರ’ ನೀಳ್ಗತೆ ಪುಸ್ತಕ ಬಿಡುಗಡೆ ಸಮಾರಂಭ ಆಗಸ್ಟ್ 20, ಆದಿತ್ಯವಾರ ಮಧ್ಯಾಹ್ನ 02:30ಕ್ಕೆ ಜನಪ್ರತಿನಿಧಿ ಕುಂದಾಪುರದಲ್ಲಿ ನಡೆಯಲಿದೆ.

ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ಜಿಲ್ಲೆಯ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಕೃತಿ ಬಿಡುಗಡೆ ಮಾಡಲಿದ್ದಾರೆ. ಕವಿ, ಸಾಹಿತಿ ರಾಜ್ ಆಚಾರ್ಯ ಪುಣೆ, ಪ್ರಕಾಶಕರಾದ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದು, ಮೈಸೂರು ವಿದ್ಯಾವರ್ಧಕ ಕಾನೂನು ಕಾಲೇಜಿನ ಉಪನ್ಯಾಸಕಿ ಕೀರ್ತಿ ಭಟ್ ಕೃತಿ ಪರಿಚಯಿಸಲಿದ್ದಾರೆ.

ಕೃತಿ ಬಿಡುಗಡೆ ಕಾರ್ಯಕ್ರಮದ ಬಳಿಕ ಕೃತಿಯ ಲೇಖಕರೊಂದಿಗೆ “ಅತ್ತ ನಕ್ಷತ್ರ : ಮಾತು ಕಥೆ” ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಲೇಖಕಿ ಪೂರ್ಣಿಮಾ ಕಮಲಶಿಲೆ, ಪತ್ರಕರ್ತ ನಿಝಾಮ್ ಅನ್ಸಾರಿ, ಉಪನ್ಯಾಸಕಿಯರಾದ ಅಮೃತಾ ಕುಂದಾಪುರ, ವಿನಯಾ ಶೆಟ್ಟಿ ಕೌಂಜೂರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!