spot_img
Tuesday, April 28, 2026
spot_img

ಶಂಕರನಾರಾಯಣ: ಅಂಚೆ ವಿತರಕರಿಗೆ ಬೀಳ್ಕೊಡುಗೆ


ಶಂಕರನಾರಾಯಣ: ಭಾರತೀಯ ಅಂಚೆ ಇಲಾಖೆಯ ಅಮಾಸೆಬೈಲು ಶಾಖಾ ಅಂಚೆ ಕಛೇರಿಯಲ್ಲಿ 33 ವರ್ಷಗಳ ಕಾಲ ಸೇವೆ ಸಲ್ಲಿಸಿ ವಯೋ ನಿವೃತ್ತಿಗೊಳ್ಳುತ್ತಿರುವ ಗಣಪತಿ ಕಾಮತ್ ರವರಿಗೆ ಬೀಳ್ಕೊಡುಗೆ ಕಾರ್ಯಕ್ರಮವು ಶಂಕರನಾರಾಯಣ ಉಪ ಅಂಚೆ ಕಛೇರಿಯಲ್ಲಿ ನೆರವೇರಿತು.

ಶಂಕರನಾರಾಯಣ ಉಪ ಅಂಚೆ ಕಛೇರಿಯ ಅಂಚೆ ಪಾಲಕಿ ಶ್ರೀಮತಿ ಚೇತನಾ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನಿವೃತ್ತರಿಗೆ ಶುಭ ಹಾರೈಸಿದರು. ಕುಂದಾಪುರ ದಕ್ಷಿಣ ವಿಭಾಗದ ಅಂಚೆ ನಿರೀಕ್ಷಕರಾದ ರಾಮಚಂದ್ರರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ನಿವೃತ್ತರಿಗೆ ಸನ್ಮಾನಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಅಂಚೆ ಸಹಾಯಕರಾದ ಶ್ರೀ ನಾಗರಾಜ ನಾಯ್ಕ, ಅಂಚೆ ಸಿಬ್ಬಂದಿ ಆಶಾ, ಮಮತಾ, ಶಾಖಾ ಅಂಚೆ ಕಛೇರಿ ಸಿಬ್ಬಂದಿಗಳಾದ ಸುಬ್ರಹ್ಮಣ್ಯ ಬಾಯರಿ, ಸುರೇಶ ನಾಯ್ಕ, ಶ್ರೀನಿವಾಸ, ರಮೇಶ ನಾಯ್ಕ, ಸದಾನಂದ, ಸುಭಾಸ್, ರಮೇಶ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರವೀಣ ನಾಯ್ಕ ನಿರೂಪಿಸಿ, ರಾಮ ಹಾಂಡ ಸ್ವಾಗತಿಸಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!