Sunday, September 8, 2024

ಹೆನ್ನಾಬೈಲ್ ಸರ್ಕಾರಿ ಶಾಲೆಯಲ್ಲಿ ಆಷಾಡದ ತಿಂಡಿ ತಿನಿಸುಗಳ ಪ್ರದರ್ಶನ

ಸಿದ್ಧಾಪುರ: ಹೆನ್ನಾಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಗತಿಪರ ಕೃಷಿಕ ರಾಜೇಂದ್ರ ಬೆಚ್ಚಳ್ಳಿ ಪ್ರಾಯೋಜಕತ್ವದಲ್ಲಿ ಆಷಾಡದ ತಿಂಡಿ ತಿನಿಸುಗಳ ಪ್ರದರ್ಶನ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಶ್ರಾಂತ ಉಪನ್ಯಾಸಕ ಡಾ.ಶ್ರೀಕಾಂತ್ ರಾವ್ ಸಿದ್ದಾಪುರ ಮಾತನಾಡಿ ಹಳೆ ಕಾಲದ ಸಂಸ್ಕೃತಿ ಆಚಾರ ವಿಚಾರ ನಡೆ ನುಡಿ ಜತೆಗೆ ಅಂದಿನ ಕಾಲದ ಆಹಾರ ಪದ್ಧತಿ ಆರೋಗ್ಯ ದೃಷ್ಟಿ, ಜೀವನ ಶೈಲಿಯಲ್ಲಿ ನಂಟು ಹೊಂದಿದೆ, ದೀರ್ಘ ಆಯುಷ್ಯಕ್ಕೂ ಅಂದಿನ ಕಾಲದ ಆಹಾರ ಪದ್ಧತಿ ದೊಡ್ಡ ನಂಬಿಕೆ ಇದೆ ಆದುನಿಕ ಬದುಕಿಗೆ ಹೊಂದಿಕೊಂಡು ಅವೆಲ್ಲವೂ ಮರೆಯಾಗಿದೆ. ಆರೋಗ್ಯ ದೃಷ್ಟಿಯಲ್ಲಿ ಇಂಥಹ ತಿಂಡಿ ತಿನಿಸುಗಳನ್ನು ಯುವ ಪೀಳಿಗೆ ಜತೆಗೆ ಸಮುದಾಯಕ್ಕೂ ಪರಿಚಯಿಸುವ ಅಗತ್ಯವಿದೆ ಎಂದರು.

ಶಾಲಾ ಸಮಿತಿ ಅಧ್ಯಕ್ಷ ಸಂಜೀವ ಶೆಟ್ಟಿ, ಸಾಹಿತಿ ಮುಸ್ತಾಕ್ ಹೆನ್ನಾಬೈಲ್, ಮುಖ್ಯ ಶಿಕ್ಷಕ ಪದ್ಮನಾಭ ಶೇಟ್, ಕಾರ್ಯಕ್ರಮ ರೂವಾರಿ ರಾಜೇಂದ್ರ ಬೆಚ್ಚಳ್ಳಿ, ಅಂಗನವಾಡಿ ಶಿಕ್ಷಕಿ ದಿವ್ಯ, ಸಹ ಶಿಕ್ಷಕಿ ಅಮೃತ, ಗೌರವ ಶಿಕ್ಷಕಿ ಶ್ರುತಿ ಮತ್ತಿತರರು ಉಪಸ್ಥಿತರಿದ್ದರು.

ಹಿಂದೆ ಆಷಾಡ ಮಾಸದಲ್ಲಿ ಸಹಜವಾಗಿ ಮಾಡುತ್ತಿದ್ದ ವಿಶೇಷವಾದ ಆಹಾರ ಪದಾರ್ಥ ತಿಂಡಿ ತಿನಿಸುಗಳನ್ನು ವಿದ್ಯಾರ್ಥಿಗಳು ಹಾಗೂ ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ 20 ಬಗೆಯ ಆಹಾರ ಪದಾರ್ಥ ಖಾದ್ಯವನ್ನು ಪ್ರದರ್ಶನ ಮಾಡಲಾಯಿತು. ನುರಿತ ಬಾಣಸಿಗರು ಹಾಗೂ ಅಪಾಡ ಅಡುಗೆಯ ಅನುಭವಿಗಳು ಅಡುಗೆಯನ್ನು ಸಿದ್ಧಪಡಿಸಿದ್ದರು.

ಏನೆಲ್ಲಾ ಇದ್ದವು?

ಕುಚಲಕ್ಕಿ ಅನ್ನ, ಹುರುಳಿ ಸಾರು, ಅಕ್ಕಿ ಪಾಯಸ, ಹಲಸಿನ ಬೀಜದ ಚಟ್ನಿ, ಹುರಿದ ಹಲಸಿನ ಬೀಜ, ಬೇಯಿಸಿದ ಹಲಸಿನ ಬೀಜ, ಹುರಿದ ಕುಚಲಕ್ಕಿ, ಕುಚಲಕ್ಕಿ ಹುಡಿ, ಹುರಿದ ಕುಚಲಕ್ಕಿ ಕಾಯಿಬೆಲ್ಲ, ಒಂದೆಲಗ ಸೊಪ್ಪಿನ ಚಟ್ನಿ, ರವೆ ಲಾಡು, ಕೆಸುವಿನ ಚಟ್ನಿ, ಹಲಸಿನ ಕಾಯಿ ಪಲ್ಯ, ಕ್ಯಾನಿಗಡ್ಡೆ ಕಡಬು, ಹಲಸಿನ ಹಪ್ಪಳ, ಅಮ್ಟೆಕಾಯಿ ಉಪ್ಪಿನಕಾಯಿ, ಕಾಯಿವಡೆ, ಅವಡೆ ಕಿಚ್ಚಿಡಿ, ಒಲೆಬೆಲ್ಲ, ನೀರ್ ಬೆಲ್ಲ, ಬಾಳೆದಿಂಡು, ಬಾಳೆಕುಂಡಿಕೆ, ನುಗ್ಗೆ ಸೊಪ್ಪು, ಚಕ್ತೆ ಸೊಪ್ಪು ಮುಂತಾದವುಗಳು ಪ್ರದರ್ಶನದಲ್ಲಿದ್ದವು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!