spot_img
Thursday, April 30, 2026
spot_img

ಕೋಟ: ಕೆಸರು ಗದ್ದೆಯಲ್ಲಿ ಹಸಿರು ಕಾವ್ಯ ಬರೆದ ವಿದ್ಯಾರ್ಥಿಗಳು!

ಕೋಟ: ಭತ್ತದ ಸಸಿಗಳನ್ನೇ ಕುಂಚವನ್ನಾಗಿ ಹಿಡಿದ ವಿದ್ಯಾರ್ಥಿಗಳು ಕೆಸರು ಗದ್ದೆಯ ಕ್ಯಾನ್ವಾಸ್‌ನಲ್ಲಿ ಹಸಿರು ಚಿತ್ರವ ರಚಿಸಿದರು. ಗದ್ದೆಯ ಕೆಸರಿನ ಭಿತ್ತಿಯಲ್ಲಿ, ಸಸಿಗಳ ನೀಟು ಸಾಲುಗಳನ್ನು ಪೋಣಿಸಿ, ಹಸಿರು ಕಾವ್ಯವನ್ನೇ ರಚಿಸಿದರು.

ಪಡುಕರೆಯ ಸಮಾಜ ಸೇವಾ ಸಂಸ್ಥೆ ಗೀತಾನಂದ ಫೌಂಡೇಶನ್ ಉಡುಪಿ ಜಿಲ್ಲಾ ಕೃಷಿ ಇಲಾಖೆಯ ಸಹಯೋಗದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಮಣೂರು ಪಡುಕರೆಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಕಾರ್ಯಕ್ರಮ, “ಸಾಗುವಳಿ ಸಂಭ್ರಮ”ದಲ್ಲಿ ಹಸಿರು ಪ್ರೀತಿ ಮೂಡಿದ ಬಗೆ ಇದು.

ಆಧುನಿಕ ವಿದ್ಯೆಯ ಕಾರಣದಿಂದಾಗಿ ನೆಲದೊಂದಿನ ನಂಟನ್ನು ಕಳೆದುಕೊಳ್ಳುತ್ತಿರುವ ಯುವಜನತೆಯಲ್ಲಿ ಒಂದಿಷ್ಟಾದರೂ ನೆಲದ ನೆಲೆಯರಿಯುವ ಪ್ರೇರಣೆಯಾಗಲಿ ಎಂಬ ಉದ್ದೇಶದಿಂದ ಹಮ್ಮಿಕೊಂಡ ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ತರಗತಿಯ ಗೋಡೆಗಳಾಚೆಯ ಖುಷಿಯ ಕಲಿಕೆಯ ಅವಕಾಶ ಒದಗಿಸಿತು.

ಮುಟ್ಟಾಳೆಗಳನ್ನು ಗಣ್ಯರ ತಲೆಗಿಟ್ಟು ಜನತಾ ಗ್ರೂಪ್‌ನ ವ್ಯವಸ್ಥಾಪಕರಾದ ಶ್ರೀನಿವಾಸ್ ಕುಂದರ್ ಸಂಭ್ರಮದಿಂದ ಗದ್ದೆಗಿಳಿಸಿದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ರಾಜ್ ಮಾತನಾಡಿ, ಪ್ರಸ್ತುತ ವಿದ್ಯಮಾನಗಳಲ್ಲಿ ಕೃಷಿಯ ಅವಶ್ಯಕತೆ, ಕೃಷಿ ನಿರ್ಲಕ್ಷ್ಯದಿಂದ ಮುಂದಿನ ದಿನಗಳಲ್ಲಿ ಎದುರಾಗುವ ಪರಿಣಾಮಗಳು, ನಾಟಿಗೈಯುವ ವಿಧಾನ, ಸಾಂಪ್ರದಾಯಕ ನಾಟಿ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಸಾಂಪ್ರದಾಯಿಕ ಕೃಷಿಗೆ ಒತ್ತು ನೀಡುವ ಉದ್ದೇಶದಿಂದ ಕೋಟದ ರೈತಧ್ವನಿ ಸಂಘದ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ ಒಳಲ್ (ಕೂಗು)ಹಾಕುವ ಮೂಲಕ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ನೆಟ್ಟಿ ಮುಗಿಸಿ ಬಂದ ನೆಟ್ಟಿಯಾಳುಗಳಿಗೆ ಕಾದಿತ್ತು ಅವಡೆ!
ಸ್ಥಳೀಯವಾಗಿ ಅವಡೆ ಎಂದು ಕರೆಯುವ ಅವಡೆಯನ್ನು ಬೇಯಿಸಿ ನಾಟಿ ಮಾಡುವ ನೆಟ್ಟಿಯಾಳುಗಳಿಗೆ ನೀಡುವುದು ವಾಡಿಕೆ. ಅಂತೆಯೇ ನೀಡಿದ ಅವಡೆಯನ್ನು ವಿದ್ಯಾರ್ಥಿಗಳು ಖುಷಿಯಿಂದ ಸವಿದರು.

ಗೀತಾನಂದ ಫೌಂಡೇಶನ್ ನಿರ್ದೇಶಕರಾದ ಗೀತಾ ಆನಂದ್ ಸಿ ಕುಂದರ್, ವೈಷ್ಣವಿ ರಕ್ಷಿತ್ ಕುಂದರ್, ಕೋಟ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಸುಪ್ರಭಾ, ಮಣೂರು ಪಡುಕರೆ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡೆನಿಸ್ ಬಾಂಜಿ ಕೆ, ಪದವಿಪೂರ್ವ ಕಾಲೇಜಿನ ಉಪನ್ಯಾಸಕ ವೃಂದ ಮತ್ತಿತರರು ಉಪಸ್ಥಿತರಿದ್ದರು.

ಉಪನ್ಯಾಸಕ ಸತ್ಯನಾರಾಯಣ ಕಾರ್ಯಕ್ರಮ ನಿರ್ವಹಿಸಿ, ಗೀತಾನಂದ ಫೌಂಡೇಶನ್‌ನ ಸಮಾಜಕಾರ್ಯ ವಿಭಾಗದ ರವಿಕಿರಣ್ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!