Sunday, September 8, 2024

ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರ ಪದಗ್ರಹಣ


ಕುಂದಾಪುರ: ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರದ ಪದಗ್ರಹಣ ಸಮಾರಂಭ ಆನೆಗುಡ್ಡೆಯ ಶ್ರೀ ವಿನಾಯಕ ಸಭಾಗ್ರಹದಲ್ಲಿ ಜರುಗಿತು.

ಲಯನ್ಸ್ ಜಿಲ್ಲೆ 317ಸಿ ಇದರ ಮಾಜಿ ಜಿಲ್ಲಾ ಗವರ್ನರ್, ಲಯನ್ಸ್ ಅಂತರಾಷ್ಟ್ರೀಯ ತರಬೇತುದಾರರಾದ ಎಂಜಿ‌ಎಫ್ ನೀಲಕಾಂತ ಎಂ ಹೆಗಡೆಯವರು ನೂತನ ಅಧ್ಯಕ್ಷೆ ಆಶಾ ಶಿವರಾಮ ಶೆಟ್ಟಿ ಹಾಗೂ ಅವರ ತಂಡಕ್ಕೆ ಪದ ಪ್ರದಾನ ಮಾಡಿದರು.

ಪ್ರಸ್ತುತ ಲಯನ್ಸ್ ಜಿಲ್ಲೆಯಲ್ಲಿ ಮಹಿಳಾ ಲಯನ್ಸ್ ಕ್ಲಬ್ ಗಳಲ್ಲಿ ಕುಂದಾಪುರ ಅಮೃತಧಾರ ತನ್ನದೇ ಆದ ಚಾಪನ್ನು ಬೆಳೆಸಿ ಮಾದರಿಯಾಗಿದೆ, ವಿಶೇಷವಾಗಿ ಪರಿಸರ ಕಾಳಜಿ ಬಗ್ಗೆ ಒತ್ತು ನೀಡುತ್ತಿರುವುದು ಇತರ ಕ್ಲಬ್ ಗಳಿಗೆ ಅನುಕರಣೀಯ ಎಂದು ಪ್ರಶಂಶಿಸಿದರು.

ಸಮಾರಂಭದ ವೇದಿಕೆಯಲ್ಲಿ ಜಿಲ್ಲಾ ಸಂಪುಟ ಕಾರ್ಯದರ್ಶಿ ರವಿರಾಜ್ ನಾಯಕ್, ಜಿಲ್ಲಾ ಸಮನ್ವಯಾಧಿಕಾರಿ ಅರುಣ್ ಹೆಗ್ಡೆ , ಪ್ರಾಂತ್ಯ ಅಧ್ಯಕ್ಷ ಏಕನಾಥ ಬೋಳಾರ್, ಪ್ರಾಂತ್ಯ ಕಾರ್ಯದರ್ಶಿ ಭೋಜರಾಜ್ ಶೆಟ್ಟಿ, ವಲಯ್ಯಾಧ್ಯಕ್ಷ ನವೀನ್ ಶೆಟ್ಟಿ, ವಿಸ್ತರಣಾಧಿಕಾರಿ ಅಕ್ಷಯ್ ಹೆಗ್ಡೆ , ನಿಕಟಪೂರ್ವ ಅಧ್ಯಕ್ಷೆ ಸರಸ್ವತಿ ಪುತ್ರನ್, ನೂತನ ಅಧ್ಯಕ್ಷೆ ಆಶಾ ಶಿವರಾಮ ಶೆಟ್ಟಿ, ನಿರ್ಗಮನ ಕಾರ್ಯದರ್ಶಿ ಜಯಶೀಲ ಕಾಮತ್ ನೂತನ ಕಾರ್ಯದರ್ಶಿ ಸುಮಶ್ರೀ ಧನ್ಯ, ನೂತನ ಕೋಶಾಧಿಕಾರಿ ಕಲ್ಪನಾ ಭಾಸ್ಕರ್ ಉಪಸ್ಥಿತರಿದ್ದರು.

ಜಿಲ್ಲಾ ಸಂಪುಟ ಸದಸ್ಯರುಗಳಾದ ರಮಾನಂದ ಕೆ ,ಪ್ರಕಾಶ್ ಬೆಟ್ಟಿನ್, ಚಂದ್ರಶೇಖರ್ ಕಲ್ಪತರು, ದಿನಕರ್ ಶೆಟ್ಟಿ, ರಮಾ ಬೋಳಾರ್ ,ರಾಜೀವ ಕೋಟ್ಯಾನ್, ಸೀತಾರಾಮ ಶೆಟ್ಟಿ, ಅಡ್ವಕೇಟ್ ಬನ್ನಾಡಿ ಸೋಮನಾಥ ಹೆಗಡೆ, ಜಗದೀಶ್ ಹೊಳ್ಳ, ರವಿಕಿರಣ್ ಡಿ ಕಾಸ್ತಾ, ರಜತ್ ಹೆಗಡೆ,ಶಂಕರ್ ಶೆಟ್ಟಿ ಹಾಗೂ ಕಿರಣ್ ಕುಂದಾಪುರ ಹಾಗೂ ಪ್ರಾಂತ್ಯದ ಲಯನ್ಸ್ ಕ್ಲಬ್ ಅಧ್ಯಕ್ಷರು ಕಾರ್ಯದರ್ಶಿ, ಕೋಶಾಧಿಕಾರಿಗಳು ,ಸದಸ್ಯರು ರೋಟರಿ ಹಾಗೂ ಇನ್ನಿತರ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದ್ದರು. ಸರಸ್ವತಿ ಪುತ್ರನ್ ಸ್ವಾಗತಿಸಿ ಪ್ರಸ್ತಾಪಿಸಿದರು. ಕಾರ್ಯದರ್ಶಿ ಸುಮಶ್ರೀ ಧನ್ಯ ವಂದಿಸಿದರು ,ಸತ್ಯ ಶ್ರೀ ಗೌತಮ್ ಕಾರ್ಯಕ್ರಮ ನಿರೂಪಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!