spot_img
Tuesday, April 28, 2026
spot_img

ರಾಜ್ಯದಲ್ಲಿ ಪ್ರಪ್ರಥಮ: ಕುಂದಾಪುರದಲ್ಲಿ ಜಿಲ್ಲಾ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖಾ ನೌಕರರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉದ್ಘಾಟನೆ


ಕುಂದಾಪುರ: ಕರ್ನಾಟಕ ರಾಜ್ಯದಲ್ಲಿ ಪ್ರಪ್ರಥಮವಾಗಿ ಕುಂದಾಪುರದಲ್ಲಿ ಉಡುಪಿ ಜಿಲ್ಲಾ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖಾ ನೌಕರರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಕುಂದಾಪುರ ಇದರ ಉದ್ಘಾಟನೆ ಜು.9ರಂದು ನಡೆಯಿತು.

ಕುಂದಾಪುರ ತಾಲೂಕು ಪಂಚಾಯಿತಿ ಹಿಂಭಾಗದ ಕಟ್ಟಡದಲ್ಲಿ ನೂತನ ಕಛೇರಿಯನ್ನು ಉಡುಪಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ರಾಜ್ಯದ 31 ಜಿಲ್ಲೆಗಳಲ್ಲಿಯೇ ಪ್ರಥಮವಾಗಿ ಈ ಸೊಸೈಟಿ ಆರಂಭವಾಗಿದೆ. ಈ ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ನೌಕರರ ಸೊಸೈಟಿ ಸಾಲಕ್ಕೆ ಸೀಮಿತವಾಗದೆ ಅಸ್ಮಿತೆಯ ಪ್ರತೀಕವಾಗಿ, ಆರ್ಥಿಕ ಸದೃಢತೆ, ಒಗ್ಗಟ್ಟನ್ನು ವೃದ್ದಿಸಲಿದೆ.

೧೯೦೪ರಲ್ಲಿ ಗದಗಿನಲ್ಲಿ ಪ್ರಥಮ ಕೃಷಿಪತ್ತಿನ ಸಹಕಾರ ಸಂಘ ಆರಂಭವಾದರೂ ಕೂಡಾ ಕರಾವಳಿ ಜಿಲ್ಲೆಯಲ್ಲಿ ಸಹಕಾರ ಚಟುವಟಿಕೆಗಳು ಹೆಚ್ಚು ಕ್ರಿಯಾಶೀಲವಾಗಿ ನಡೆದವು. ನಾಲ್ಕು ರಾಷ್ಟ್ರೀಕೃತ ಬ್ಯಾಂಕುಗಳು ಉಡುಪಿ ಜಿಲ್ಲೆಯಲ್ಲಿ ಹುಟ್ಟಿದರೂ ಅಷ್ಟೇ ಶಕ್ತಿಶಾಲಿಯಾಗಿ ಇಲ್ಲಿ ಸಹಕಾರಿ ಸಂಘಗಳು ಬೆಳೆದಿವೆ ಎಂದರು.

ಉಡುಪಿ ಜಿಲ್ಲೆಯ ಧಾರ್ಮಿಕ ಮುಖಂಡರಾದ ಬಿ.ಅಪ್ಪಣ್ಣ ಹೆಗ್ಡೆ ಸಭಾ ಕಾರ್ಯಕ್ರಮ ಉದ್ಘಾಟಿಸಿ,ಕರಾವಳಿ ಜಿಲ್ಲೆಗಳು ಸಹಕಾರ ಕ್ಷೇತ್ರ ಮಹತ್ವದ ಕೊಡುಗೆಯನ್ನು ನೀಡುತ್ತಿವೆ. ಆ ಹಿನ್ನೆಲೆಯಲ್ಲಿ ಪಂಚಾಯತ್ ರಾಜ್ ನೌಕರರು ಕೂಡಾ ಸಹಕಾರ ತತ್ವದಡಿ ಸೊಸೈಟಿಯನ್ನು ಆರಂಭಿಸಿರುವುದು ಉತ್ತಮ ಕಾರ್ಯ. ಇಲ್ಲಿ ಸಹಕಾರ ಸಂಘಗಳು ರಾಷ್ಟ್ರೀಕೃತ ಬ್ಯಾಂಕುಗಳಿಗಿಂತ ಉತ್ಕೃಷ್ಟ ಮಟ್ಟದಲ್ಲಿ ಸೇವೆ ನೀಡುವ ಮೂಲಕ ಗ್ರಾಹಕರನ್ನು ತನ್ನೆಡೆಗೆ ಸಳೆದಿವೆ ಎಂದರು.

ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ರಾಜು ಪೂಜಾರಿ ಮಾತನಾಡಿ, ಸಹಕಾರ ಕ್ಷೇತ್ರ ಇವತ್ತು ಸುದೃಢವಾಗಿ ಬೆಳೆದಿದೆ. ಗ್ರಾಮ ಪಂಚಾಯಿತಿ ನೌಕರರು ಸವಲತ್ತುಗಳಿಲ್ಲದೆ ಸಾಲಸೌಲಭ್ಯಕ್ಕೆ ಸಮಸ್ಯೆ ಪಡುತ್ತಿರುವ ಕಾಲದಲ್ಲಿ ತಮ್ಮದೆಯಾದ ಸಂಘವನ್ನು ಸ್ಥಾಪನೆ ಮಾಡಿರುವುದು ಅಭಿನಂದನೀಯ. ರಾಜ್ಯದಲ್ಲಿ ಪ್ರಥಮವಾಗಿ ಉಡುಪಿ ಜಿಲ್ಲೆಯಲ್ಲಿ ಆರಂಭವಾಗುತ್ತಿರುವುದು ಹೆಮ್ಮೆ ಪಡುವಂತಹದ್ದು ಎಂದರು.

ಕುಂದಾಪುರ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಅರುಣ್ ಕುಮಾರ್ ಎಸ್.ವಿ. ಮಾತನಾಡಿ ಉಡುಪಿ ಜಿಲ್ಲೆಯಲ್ಲಿ ೬೮೭ ಸಹಕಾರ ಸಂಘಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ೮-೧೦ ಸಹಕಾರ ಸಂಸ್ಥೆಗಳು ನೂರು ವರ್ಷಗಳನ್ನು ಕಂಡಿವೆ. ಉಡುಪಿ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ಪ್ರಬಲವಾಗಿ ಬೆಳೆದಿದೆ. ಈಗ ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ನೌಕರರು ಕೂಡಾ ಸಂಘವನ್ನು ಆರಂಭಿಸಿದ್ದಾರೆ. ಇದು ಅವರ ಆರ್ಥಿಕ ಸದೃಢತೆ, ಒಗ್ಗಟ್ಟು, ಅವಶ್ಯತೆಗಳನ್ನು ಪೂರೈಸಲು ನೆರವಾಗಲಿ. ನೌಕರರ ಸಮಯಕ್ಕೆ ಅನುಗುಣವಾಗಿ ಈ ಸಂಘದ ಕಛೇರಿಯ ಸಮಯವನ್ನು ಹೊಂದಾಣಿಕೆ ಮಾಡಿಕೊಂಡು ಸದಸ್ಯರಿಗೆ ಅನುಕೂಲವಾಗಲಿ. ಸಂಘದಿಂದ ಬಂದ ಆದಾಯ ಆರೋಗ್ಯ, ಉನ್ನತ ಶಿಕ್ಷಣ ಹಾಗೂ ಸದಸ್ಯರ ಮಕ್ಕಳ ವಿದ್ಯಾರ್ಥಿ ವೇತನಕ್ಕೆ ವಿನಿಯೋಗಿಸುವ ಹೊಸ ಪ್ರಯೋಗಗಳು ಆಗಲಿ ಎಂದರು.

ಉಡುಪಿ ಜಿಲ್ಲಾ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖಾ ನೌಕರರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಕುಂದಾಪುರ ಇದರ ಅಧ್ಯಕ್ಷರಾದ ಸಂತೋಷ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕುಂದಾಪುರ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭಾರತಿ ಎನ್., ಬ್ರಹ್ಮಾವರ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ವಿ.ಇಬ್ರಾಹೀಂಪುರ್, ಪಂಚಾಯಿತಿ ನೌಕರರ ಶ್ರೇಯೋಭಿವೃದ್ದಿ ಸಂಘದ ಅಧ್ಯಕ್ಷರಾದ ಮಂಜುನಾಥ ಶೆಟ್ಟಿ, ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ವಿಕಾಸ್ ಹೆಗ್ಡೆ ಉಪಸ್ಥಿತರಿದ್ದರು.

ಸಂಸ್ಥೆಯ ನಿರ್ದೇಶಕರಾದ ಜಯರಾಮ ಶೆಟ್ಟಿ, ಉಮೇಶ್, ಗುರುಮೂರ್ತಿ, ಶೇಖರ್, ಶ್ರೀಮತಿ ದೀಪಾ, ಶ್ರೀಮತಿ ರೂಪಾ ಗೋಪಿ, ಉದಯ ಕುಮಾರ್, ಉದಯ ಮಡಿವಾಳ, ವಿಜೇಂದ್ರ ಎಂ., ವಾಸು ನಾಯ್ಕ ಉಪಸ್ಥಿತರಿದ್ದರು.

ಮಾಜಿ ಸಚಿವರು, ವಿಧಾನಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಸಂಘದ ಲೋಗೋ ಅನಾವರಣಗೊಳಿಸಿದರು. ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ನೂತನ ಕಛೇರಿಗೆ ಆಗಮಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಷೇರುಪತ್ರ, ಠೇವಣಿ ಪತ್ರ, ಸಂಘದ ಗುರುತು ಪತ್ರವನ್ನು ವಿತರಿಸಲಾಯಿತು. ಸಂಘದ ಉಪಾಧ್ಯಕ್ಷರಾದ ಚಂದ್ರಕಾಂತ್ ಬಿಲ್ಲವ ಸ್ವಾಗತಿಸಿದರು. ನಾಗೇಂದ್ರ ಕುಮಾರ್ ಪ್ರಾರ್ಥನೆ ನೆರವೇರಿಸಿದರು. ಮಹೇಶ್ ಮತ್ತು ರೂಪಾ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕರಾದ ನಾಗೇಂದ್ರ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!