Sunday, September 8, 2024

ಮಳೆಗೆ ಹಾನಿಯಾದ ಕೋಟ ಪಡುಕೆರೆ ಕೃಷಿ ಪ್ರದೇಶಕ್ಕೆ ಎಂ.ದಿನೇಶ ಹೆಗ್ಡೆ ಭೇಟಿ


ಕುಂದಾಪುರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೊಳಹಳ್ಳಿ ದಿನೇಶ್ ಹೆಗ್ಡೆಯವರು ನಾಲ್ಕೈದು ದಿನದಿಂದ ಸುರಿಯುತ್ತಿರುವ ಮಳೆಗೆ ಹಾನಿಯಾದ ಕೋಟ ಪಡುಕೆರೆ ಭಾಗದ ಕೃಷಿ ಪ್ರದೇಶವನ್ನು ವೀಕ್ಷಿಸಿದರು. ಹಲವು ವರ್ಷಗಳಿಂದ ಈ ಸಮಸ್ಯೆಯಿದ್ದು ಇದನ್ನು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಸಹ ಅದನ್ನು ಪರಿಹರಿಸದ ಬಗ್ಗೆ ರೈತರು ತಿಳಿಸಿದಾಗ ಅದನ್ನು ಸರ್ಕಾರದ ಹಾಗೂ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತಂದು ಈ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಪ್ರಯತ್ನಿಸುವ ಭರವಸೆ ನೀಡಿದರು.

ನೀರಿನಿಂದ ಸುಮಾರು 200 ಎಕ್ರೆಗೂ ಹೆಚ್ಚು ಭತ್ತದ ಕೃಷಿ ಹಾಳಾಗಿದೆ, ಪೇಟೆಯ ನೀರೆಲ್ಲಾ ಹರಿದು ಹೋಗುವ ಪರಂಬೋಕು ತೋಡು ಸಂಪೂರ್ಣ ಹೂಳು ತುಂಬಿದ್ದು ಇದರಲ್ಲಿ ಮಳೆ ನೀರು ಹರಿಯದ ಕಾರಣ ಕೃಷಿ ಭೂಮಿ ಸಂಪೂರ್ಣ ಜಾಲವೃತವಾಗಿದೆ, ಈ ತೋಡಿನ ಹೂಳನ್ನು ತಗೆಯಲು ಹಲವು ಬಾರಿ ಶಾಸಕರಿಗೆ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಎಷ್ಟೇ ಮನವಿ ಕೊಟ್ಟರೂ ಸಹ ಇಲ್ಲಿಯ ತನಕ ಸಮಸ್ಯೆ ಪರಿಹಾರವಾಗಲಿಲ್ಲ ಎಂದು ಕೃಷಿಕರು ಸಮಸ್ಯೆ ಹೇಳಿಕೊಂಡರು.

ಈ ಸಂದರ್ಭದಲ್ಲಿ ಕೋಟ ಸಿ.ಎ ಬ್ಯಾಂಕ್ ಅಧ್ಯಕ್ಷರಾದ ತಿಮ್ಮ ಪೂಜಾರಿ, ನಿರ್ದೇಶಕರಾದ ಭಾಸ್ಕರ ಶೆಟ್ಟಿ, ಅರುಣ್ ಶೆಟ್ಟಿ, ಮಹಾಬಲ ಶೆಟ್ಟಿ, ಕೋಟ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶಿವ ಪೂಜಾರಿ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ವಿಜಯ ಕುಂದರ್, ನಾರಾಯಣ ಮೆಂಡನ್ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!