Sunday, September 8, 2024

ಕೊಲ್ಲೂರಿನಲ್ಲಿ ಮಹಿಳೆ ಪರ್ಸ್‍ನಿಂದ ಬಂಗಾರ ಕಳವುಗೈದ ಆರೋಪಿ ಬಂಧನ, ಆಭರಣ ವಶಕ್ಕೆ


ಕೊಲ್ಲೂರು: ಜೂನ್ 4ರಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಂದಿದ್ದ ಮಹಿಳೆಯ ಪರ್ಸ್‍ನಿಂದ ಕಳವಾಗಿದ್ದ ಹದಿಮೂರೂವರೆ ಪವನ್ ಚಿನ್ನಾಭರಣ ಕಳವಿಗೆ ಸಂಬಂಧಿಸಿ ಆರೋಪಿಯನ್ನು ಬಂಧಿಸಿ, ಕಳವು ಮಾಡಲಾದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.
ಖಾಸಗಿ ಬಸ್ಸೊಂದರಲ್ಲಿ ಕೆಲಸ ಮಾಡುತ್ತಿದ್ದ ತೀರ್ಥಹಳ್ಳಿ ಮೂಲದ ಗಿರೀಶ್ ಬಿ.ಜಿ. (32ವ) ನನ್ನು ಬಂಧಿಸಿದ ಪೊಲೀಸರು ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಬೆನ್ನತ್ತಿದ ಪೊಲೀಸರು ಸಿಸಿ ಕ್ಯಾಮೆರಾದ ಜಾಡು ಹಿಡಿದು ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿ ಎಗರಿಸಿದ್ದ ಎನ್ನಲಾದ 7.5 ಪವನ್ ಚಿನ್ನದ ಚೈನ್, 3 ಪವನ್ ತೂಕದ ಎರಡು ಚಿನ್ನದ ಬಳೆ, 1.5 ಪವನ್ ಚಿನ್ನದ ಚೈನ್, ಅರ್ಧ ಪವನ್ ಚಿನ್ನದ ಬಳೆ, 1 ಪವನ್ ತೂಕದ 4 ಜೊತೆ ಚಿನ್ನದ ಕಿವಿ ಓಲೆ ಸಹಿತ ಒಟ್ಟು 13.5 ಪವನ್ (108 ಗ್ರಾಂ) ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಮಚೀಂದ್ರ ಹಾಕೆ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ಧಲಿಂಗಪ್ಪ, ಕುಂದಾಪುರ ಡಿವೈಎಸ್‍ಪಿ ಬೆಳ್ಳಿಯಪ್ಪ, ಬೈಂದೂರು ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ನೇತೃತ್ವದಲ್ಲಿ ಕೊಲ್ಲೂರು ಠಾಣೆ ಉಪನಿರೀಕ್ಷಕರಾದ ಜಯಶ್ರೀ, ಸುಧಾರಾಣಿ, ಸಿಬ್ಬಂದಿಗಳಾದ ನಾಗೇಂದ್ರ ಹಾಗೂ ಸಂದೀಪ್ ಆರೋಪಿಯನ್ನು ಬಂಧಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!