Sunday, September 8, 2024

ತ್ರಾಸಿ ಡಾನ್ ಬಾಸ್ಕೊ ಶಾಲೆಯಲ್ಲಿ ಸೀನಿಯರ್ ಕೆಜಿ ವಿದ್ಯಾರ್ಥಿಗಳ ಘಟಿಕೋತ್ಸವ


ತ್ರಾಸಿ: ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಮೇಲಿನ ತರಗತಿಗಳಿಗೆ ಉತ್ತೀರ್ಣರಾಗುವ ಗುರಿಯಿಂದ ಅಧ್ಯಯನ ಮಾಡಿದರೆ ಸಾಲದು. ಅವರು ತಮ್ಮ ಮುಂದಿನ ಬದುಕಿಗೂ ಅಗತ್ಯವಿರುವ ಕೌಶಲಗಳನ್ನು ಕಲಿತುಕೊಳ್ಳಬೇಕು. ಅದಕ್ಕಾಗಿ ಅವರಿಗೆ ಯಶಸ್ಸು ಸಾಧಿಸುವ ಮಾರ್ಗವನ್ನು ಹೇಳಿಕೊಡುವುದರ ಜತೆಗೆ ಸೋಲನ್ನು ಸವಾಲಾಗಿ ಸ್ವೀಕರಿಸುವ ಎದೆಗಾರಿಕೆಯನ್ನೂ ಕಲಿಸಬೇಕು ಎಂದು ಕುಂದಾಪುರದ ಗುರುಕುಲ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಲೋರ್ನಾ ಲೂಯಿಸ್ ಹೇಳಿದರು.

ಅವರು ಈಚೆಗೆ ತ್ರಾಸಿ ಡಾನ್ ಬಾಸ್ಕೊ ಶಾಲೆಯಲ್ಲಿ ನಡೆದ ಸೀನಿಯರ್ ಕೆಜಿ ವಿದ್ಯಾರ್ಥಿಗಳ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿದ್ದರು. ಅವರು ಮತ್ತು ಶಾಲೆಯ ರೆಕ್ಟರ್ ಹಾಗೂ ಪ್ರಾಂಶುಪಾಲ ಫಾ. ಮ್ಯಾಕ್ಷಿಂ ಡಿಸೋಜ, ಆಡಳಿತಾಧಿಕಾರಿ ಫಾ. ರೋಶನ್ ಡಿಸೋಜ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು.

ಮೊದಲು ಘಟಿಕೋತ್ಸವದ ಪೋಷಾಕು ಧರಿಸಿದ್ದ ವಿದ್ಯಾರ್ಥಿಗಳನ್ನು ಶಿಕ್ಷಕರು ಅನ್ಯ ವಿದ್ಯಾರ್ಥಿಗಳ ಮತ್ತು ಪೋಷಕರ ಜಯಘೋಷದ ನಡುವೆ ವೇದಿಕೆಗೆ ಕರೆತಂದರು. ನೃತ್ಯ ಪ್ರದರ್ಶನ ನಡೆಯಿತು. ತಮ್ಮ ಮಕ್ಕಳ ಶಿಕ್ಷಣಕ್ಕೆ ಡಾನ್ ಬಾಸ್ಕೊ ಶಾಲೆಯನ್ನು ಆಯ್ಕೆ ಮಾಡಿಕೊಂಡ ಪೋಷಕರಿಗೆ ಮ್ಯಾಕ್ಷಿಂ ಡಿಸೋಜ ಅಭಿವಂದನೆ ಸಲ್ಲಿಸಿದರು.

ಕೆಜಿ ವಿಭಾಗದ ಸಂಚಾಲಕಿ ಶೀತಲ್ ಒಲಿವೇರ ಕಾರ್ಯಕ್ರಮ ಸಂಯೋಜಿಸಿದರು. ಶಿಕ್ಷಕಿಯರಾದ ಸುಜಾತಾ, ಫಿಲೋಮಿನ, ಸುನಿತಾ, ಲಲಿತಾ, ಜಯಾ ಸಹಕರಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!