Sunday, September 8, 2024

ಶ್ರೀ ಕೈಲಾಸ ಕಲಾಕ್ಷೇತ್ರದ ‘ರಜಾರಂಗು ರಂಗಮಂಚ’ ಸಮಾರೋಪ


ತೆಕ್ಕಟ್ಟೆ: ಸಂವಹನ ಕ್ರಿಯೆಯ ಮೂಲಕ ಪ್ರಾಣಿ ಪಕ್ಷಿಗಳಲ್ಲೂ ಮಾತಾಡಬಲ್ಲ ಅದ್ಭುತ ರಂಗನಟ ಗೋಪಾಲಕೃಷ್ಣ ನಾಯರಿ ಹೆಸರಿನಲ್ಲಿ ಕಾರ್ಯಕ್ರಮ ನೆರವೇರಿಸುತ್ತಿರುವುದು ನಿಜಕ್ಕೂ ಸ್ತುತ್ಯರ್ಹ. ತೆಕ್ಕಟ್ಟೆಯ ಈ ಪರಿಸರದಲ್ಲಿ ರಂಗಭೂಮಿಯ ಚಟುವಟಿಕೆಗಳು ನಿರಂತರವಾಗಿ ನಡೆಸುತ್ತಿರುವ ಕಾರ್ಯ ಶ್ಲಾಘನೀಯವಾದದ್ದು. ರಂಗಭೂಮಿಯ ಕೆಲಸ ಹವ್ಯಾಸವಲ್ಲ. ಹವ್ಯಾಸವಾದಾಗ ರಂಗಭೂಮಿ ಸಾಯುತ್ತದೆ. ಅದೊಂದು ಸಾಮಾಜಿಕ ಬದ್ಧತೆ. ಸಮಾಜಕ್ಕೆ ಧನಾತ್ಮಕವಾಗಿ ಹೇಳುವುದಕ್ಕಾಗಿ ಆಯ್ದುಕೊಂಡ ಮೀಡಿಯ ರಂಗಭೂಮಿ. ಆ ಮೂಲಕ ಸಮಾಜಕ್ಕೆ ಸಂದೇಶವನ್ನು ಸಾರುತ್ತದೆ. ಈ ನಿಟ್ಟಿನಲ್ಲಿ ಮಕ್ಕಳನ್ನು ಅಣಿಗೊಳಿಸಿ ರೋಹಿತ್ ಎಸ್. ಬೈಕಾಡಿಯಂತಹ ಒಳ್ಳೆಯ ಮನಸ್ಸಿನ ಯುವಕ ರಂಗದ ಮೂಲಕ ಧ್ವನಿಯಾಗುತ್ತಿರುವುದು ನಿಜಕ್ಕೂ ಸಂತಸದ ವಿಷಯ ಎಂದು ರಂಗ ನಿರ್ದೇಶಕ ಉದ್ಯಾವರ ನಾಗೇಶ ಅಭಿಪ್ರಾಯಪಟ್ಟರು.

ತೆಕ್ಕಟ್ಟೆಯ ಹಯಗ್ರೀವದಲ್ಲಿ ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ದೇಶೀ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ ಹೆಸರಿನ ಕಾರ್ಯಕ್ರಮದಲ್ಲಿ ’ರಜಾರಂಗು-ರಂಗಮಂಚ’ ಸಮಾರೋಪ ಸಮಾರಂಭದಲ್ಲಿ ರಂಗ ನಿರ್ದೇಶಕ ರೋಹಿತ್ ಎಸ್. ಬೈಕಾಡಿಯನ್ನು ಸಮ್ಮಾನಿಸಿ ಮೇ ೨೮ರಂದು ಮಾತನ್ನಾಡಿದರು.

ರಜೆಗೆ ರಂಗು ಬಳಿಯುವುದಕ್ಕೆ ಪ್ರತೀ ವರ್ಷ ಕಾದು ಕುಳಿತಿರುವ ಕೈಲಾಸ ಕಲಾಕ್ಷೇತ್ರ ಸಾಮಾಜಿಕ ಕಾಳಜಿಯನ್ನು ಮಕ್ಕಳಲ್ಲಿ ಬೆಳೆಸುವುದರ ಜೊತೆಗೆ ಒಂದು ನಾಟಕವನ್ನು ಕಟ್ಟಿ ಇಡೀ ವರ್ಷ ಕಲಿಸಲಿಕ್ಕಾಗದ ವಿಷಯವನ್ನು ಮಕ್ಕಳಿಗೆ ಹೃದಯಕ್ಕೆ ಮುಟ್ಟಿಸುವ ಮೂಲಕ ರೋಹಿತ್ ಎಸ್. ಬೈಕಾಡಿ ಶ್ರೇಷ್ಠರಾಗಿದ್ದಾರೆ. ಮಕ್ಕಳೆಲ್ಲ ಕಥೆ ಹೇಳಬೇಕು, ಓದಬೇಕು, ಬರೆಯಬೇಕು, ಅದನ್ನು ನೀವೇ ಮಾಡಬೇಕು ಆ ನಿಟ್ಟಿನಲ್ಲಿ ಇತರ ಮಕ್ಕಳಿಗಿಂತ ನೀವು ಮುಂದಿರುತ್ತೀರಿ ಎಂದು ಮಕ್ಕಳಿಗೆ ಸಂದೇಶವನ್ನು ಗೌರವ ಉಪಸ್ಥಿತಿಯಲ್ಲಿರುವ ಎಸ್.ಎಮ್.ಎಸ್. ಆಂಗ್ಲಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ಅಭಿಲಾಷ ಎಸ್. ಮಾತನ್ನಾಡಿದರು.

ನಿವೃತ್ತ ಮುಖ್ಯೋಪಾಧ್ಯಾಯರಾದ ತೆಕ್ಕಟ್ಟೆ ಶ್ರೀನಿವಾಸ ಅಡಿಗ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಲ್ಯಾಡಿ ಸೀತಾರಾಮ ಶೆಟ್ಟಿ, ರಂಗ ನಿರ್ದೇಶಕ ರೋಹಿತ್ ಎಸ್. ಬೈಕಾಡಿ, ಶಿಬಿರಾರ್ಥಿಗಳೆಲ್ಲಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷರಾದ ಹೆರಿಯ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು. ಗೋಪಾಲ ಪೂಜಾರಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಬಳಿಕ ಶಿಬಿರದ ಸಂಘಟಕರಿಂದ ಜಯಂತ್ ಕಾಯ್ಕಿಣಿ ರಚನೆಯ ನಾಟಕವನ್ನು ರೋಹಿತ್ ಎಸ್. ಬೈಕಾಡಿ ನಿರ್ದೇಶಿಸಿದ ‘ಸೇವಂತಿ ಪ್ರಸಂಗ’ ರಂಗ ಪ್ರದರ್ಶನಗೊಂಡಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!