Sunday, September 8, 2024

‘ಶ್ರೀ ಕಾಳಾವರ ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಪ್ರಸಂಗ ಬಿಡುಗಡೆ

ಕುಂದಾಪುರ : ಸ್ಪಂದನಾ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಕಾಳಾವರ ಹಾಗೂ ಶ್ರೀ ಕಾಳಿಂಗ ಸುಬ್ರಹ್ಮಣ್ಯ ಮಕ್ಕಳ ಯಕ್ಷಗಾನ ತರಬೇತಿ ಕೇಂದ್ರ ಕಾಳಾವರ ಇದರ 5 ನೇ ವಾಷಿ೯ಕೋತ್ಸವ ಸಂದಭ೯ದಲ್ಲಿ ಶ್ರೀನಿವಾಸ ಕಾಳಾವರ ರಚಿಸಿದ ಶ್ರೀ ಕಾಳಾವರ ಕ್ಷೇತ್ರ ಮಹಾತ್ಮೆ ಪ್ರಸಂಗವನ್ನು ಬಿಡುಗಡೆಗೊಳಿಸಿ, ಶ್ರೀ ಹಟ್ಟಿಯಂಗಡಿ ಮೇಳದವರಿಂದ ಯಕ್ಷಗಾನ ಪ್ರದರ್ಶನ ನಡೆಯಿತು.

ಸೋಮವಾರ ಕಾಳಾವರ ಶ್ರೀ ಕಾಳಿಂಗ ಸುಬ್ರಹ್ಮಣ್ಯ ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ಸಮಾರಂಭದಲ್ಲಿ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಅಪ್ಪಣ್ಣ ಹೆಗ್ಡೆ ಅವರು ಪ್ರಸಂಗ ಬಿಡುಗಡೆಗೊಳಿಸಿ, ಮೇಳದ ಭಾಗವತರಿಗೆ ಪ್ರಸಂಗದ ಪ್ರತಿಯನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಅವರು ಮಾತನಾಡಿ, ಕರಾವಳಿಯ ಬುದ್ಧಿವಂತೆಕೆಯ ಕಲೆ ಯಕ್ಷಗಾನದ ನವರಸ ಜನರಿಗೆ ಪರಿಚಯವಾಗಲಿ, ಕಾರಣೀಕ ಶ್ರೀ ಕ್ಷೇತ್ರದ ಕಾಳಿಂಗನನ್ನು ದರ್ಶನ ಮಾಡಿ ಅನುಗೃಹ ಪಡೆಯಲು ಭಕ್ತರು ಇಲ್ಲಿಗೆ ಬರುತ್ತಾರೆ, ಯಕ್ಷಗಾನದ ಮೂಲಕ ಶ್ರೀ ಕ್ಷೇತ್ರದ ಮಹಿಮೆ ಎಲ್ಲಾ ಭಕ್ತರಿಗೆ ತಲುಪಲಿ ಎಂದರು.

ಕೆ. ಕೆ. ಕಾಳಾವರ್ಕರ್ ಅವರ ಪತ್ನಿಯ ಹೆಸರಿನಲ್ಲಿ ಕಲಿಕೆಯಲ್ಲಿ ಮುಂದಿರುವ ಕು. ರಿತಿಕಾ, ತ್ರಿಶಾ ಅವರಿಗೆ ಸಹಾಯಧನ ನೀಡಿದರು.
ವೇದಿಕೆಯಲ್ಲಿ ಶ್ರೀ ಕಾಳಿಂಗ ಸುಬ್ರಹ್ಮಣ್ಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪ್ರಸಂಗಕರ್ತರನ್ನು ಅಭಿನಂದಿಸಿದರು. ಜಾದುಗಾರ ಪ್ರಕಾಶ್ ಹೆಮ್ಮಾಡಿ, ರಂಗನಟ, ಪ್ರಸಂಗಕರ್ತ ಹರಿದಾಸ್. ಕೆ. ಕೆ. ಕಾಳಾವರ್ಕರ್, ಮೇಳದ ಯಜಮಾನ ವಕ್ವಾಡಿ ರಂಜಿತ್ ಶೆಟ್ಟಿ, ಭಾಗವತ ಶ್ರೀಧರ್ ಭಟ್ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ದೇವಳದ ವತಿಯಿಂದ ಪ್ರಸಂಗಕರ್ತ ಶ್ರೀನಿವಾಸ ಕಾಳಾವರ ಅವರ ಪತ್ನಿ ಭಾವಾಸ್ಮಿತ ಅವರನ್ನು ಸನ್ಮಾನಿಸಲಾಯಿತು. ಶ್ರೀನಿವಾಸ ಕಾಳಾವರ ಕಾರ್ಯಕ್ರಮ ನಿರೂಪಿಸಿದರು

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!