Sunday, September 8, 2024

ಶಂಕರನಾರಾಯಣ: 1990ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪುನರ್ ಮಿಲನ, ಗುರುವಂದನ ಕಾರ್ಯಕ್ರಮ

ಸರಕಾರಿ ಪದವಿ ಪೂರ್ವ ಕಾಲೇಜು ಶಂಕರನಾರಾಯಣ ಪ್ರೌಢ ಶಾಲಾ ವಿಭಾಗದ 1990 ನೇ ಸಾಲಿನ ಎಸ್.ಎಸ್ ಎಲ್ ಸಿ ವಿದ್ಯಾರ್ಥಿಗಳ ಪುನರ್‌ಮಿಲನ ಮತ್ತು ಗುರುವಂದನೆ ಕಾರ್ಯಕ್ರಮವು ಕಾಲೇಜಿನ ಸುಬ್ರಹ್ಮಣ್ಯ ಜೋಯಿಸ ಸುವರ್ಣ ಸಭಾಂಗಣದಲ್ಲಿ ಇತ್ತೀಚಿಗೆ ನೆರವೇರಿತು. 

ಸುಮಾರು 45 ಕ್ಕೂ ಅಧಿಕ ಹಳೆ ವಿದ್ಯಾರ್ಥಿಗಳು ತಮ್ಮ ಕುಟುಂಬ ಸಮೇತ ಪುನರ್ ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಈ ಕಾರ್ಯಕ್ರಮದಲ್ಲಿ ಅಂದಿನ ಪ್ರೌಢಶಾಲಾ ಶಿಕ್ಷಕರಾದ ಗೋಪಾಲ ಶೆಟ್ಟಿಗಾರ್, ವಾಸುದೇವ ಉಡುಪ ಮತ್ತು ಕಾಲೇಜು ವಿಭಾಗದ ಕರುಣಾಕರ ಶೆಟ್ಟಿ, ಶ್ರೀಯುತ ಶಿವಕುಮಾರ್ ಗಂಗೂರ್, ರಾಜಾರಾಮ್ ಪಾಟೀಲ್, ನಾಗೇಶ್ ಶಾನುಬೊಗ್ ಇವರುಗಳನ್ನು ಗೌರವಿಸಿ ಸನ್ಮಾನಿಸಲಾಯಿತು.

1990 ರ ಎಸ್.ಎಸ್.ಎಲ್.ಸಿ ಸಮಾನ ಮನಸ್ಕರು ರಚಿಸಿಕೊಂಡ ವಾಟ್ಸಪ್ ಬಳಗದ ಮೂಲಕ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ 1990 ಮೊದಲ ಮತ್ತು 1990 ರ ನಂತರ ಹಳೆ ವಿದ್ಯಾರ್ಥಿಗಳೂ ಭಾಗವಹಿಸಿದ್ದು ವಿಶೇಷವಾಗಿತ್ತು.

ಮನೋರಂಜನಾ ಕಾರ್ಯಕ್ರಮದ ಅಂಗವಾಗಿ ಸಾಯಿಶ್ರುತಿ ಪಿಲಿಕಜೆ ಇವರಿಂದ ಮಾತನಾಡುವ ಗೊಂಬೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೇರೆ ಬೇರೆ ಜಿಲ್ಲೆ ಮತ್ತು ರಾಜ್ಯಗಳಲ್ಲಿ ಬದುಕನ್ನು ಕಟ್ಟಿಕೊಂಡಿದ್ದ ಹಳೆ ವಿದ್ಯಾರ್ಥಿಗಳು ಸುಮಾರು 33 ವರ್ಷಗಳ ನಂತರ ತಮ್ಮದೇ ಕಾಲೇಜಿನ ಪರಿಸರದಲ್ಲಿ ಮತ್ತೆ ಒಂದಾಗಿ ಹಳೆಯ ನೆನಪುಗಳನ್ನು ಹಂಚಿಕೊಂಡು ತಮ್ಮ ಪ್ರೀತಿಯ ಶಿಕ್ಷಕರಿಗೆ ಗುರುವಂದನೆ ನೀಡಿದ ಕಾರ್ಯಕ್ರಮ ಶಂಕರನಾರಾಯಣ ಇತಿಹಾಸದಲ್ಲಿ ಇದು ಪ್ರಥಮವಾಗಿತ್ತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು 1990 ರ ಎಸ್ಎಸ್ಎಲ್ .ಸಿ ಸಮಾನ ಮನಸ್ಕರು ಕಟ್ಟಿಕೊಂಡ ವಾಟ್ಸಪ್ ಬಳಗದ ಎಡ್ಮಿನ್ ಗಳಲ್ಲಿ ಓರ್ವರೂ ವೃತ್ತಿಯಲ್ಲಿ ವಕೀಲರಾದ ಯೋಗೇಂದ್ರ ನಾಯ್ಕ ವಹಿಸಿದ್ದರು. ಇನ್ನೋರ್ವ ಎಡ್ಮಿನ್ ನಾಗರಾಜ ತಲ್ಲಂಜೆ ಮತ್ತು ಮಹಿಳಾ ಎಡ್ಮಿನ್ ಜಯಂತಿ ಐರೋಡಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ವಿಜಯಲಕ್ಷ್ಮೀ ಸೋಮಯಾಜಿ ಪ್ರಾರ್ಥಿಸಿ, ಚಂದ್ರಶೇಖರ ಹೆಗ್ಡೆ ಕಲ್ಗದ್ದೆ ಸ್ವಾಗತಿಸಿ, ಸುಭಾಷ್ ಚಂದ್ರ ರಾವ್ ವಂದಿಸಿದರು.

ಹಲವು ವರ್ಷಗಳ ಬಳಿಕ ಪುನರ್‌ಮಿಲನಗೊಂಡ ಗುರು ಶಿಷ್ಯರ ಅವಿನಾಭಾವ ಸಂಬಂಧಕ್ಕೆ ಸಾಕ್ಷಿ ಎನ್ನುವಂತೆ ಗುರು ಶಿಷ್ಯ ಮತ್ತು ಕುಟುಂಬಸ್ಥರ ಸಹಭೋಜನ ಕಾರ್ಯಕ್ರಮ ಭಾವನಾತ್ಮಕವಾಯಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!