Sunday, September 8, 2024

ಕಷ್ಟ ಬರುವ ಮೊದಲೇ ಭಗವಂತನ ಸ್ಮರಣೆ ಮಾಡಬೇಕು-ರಾಘವೇಶ್ವರ ಭಾರತೀ ಶ್ರೀ


ತಲ್ಲೂರು ಮಹಾಲಿಂಗೇಶ್ವರ ಹಾಗೂ ಶ್ರೀ ಗಣಪತಿ ದೇವಸ್ಥಾನ ಲೋಕಾರ್ಪಣೆ

ಕುಂದಾಪುರ: ನಿರಂತರ ಶೃದ್ದಾಭಕ್ತಿಯಿಂದ ಭಗವಂತನ ಸ್ಮರಣೆ ಮಾಡಿದರೆ ದುಃಖ ಬರುವುದಿಲ್ಲ. ಕ್ಲೇಶಗಳು ಮನುಷ್ಯನಿಗೆ ಬಾಧಿಸುವುದು ಸ್ವಾಭಾವಿಕವಾದರೂ ಆ ಸಂದರ್ಭದಲ್ಲಿ ಭಗವನಂತನ ಕೃಪಾ ಕವಚವಾಗಿ ನಮ್ಮನ್ನು ರಕ್ಷಿಸುತ್ತದೆ. ದೇವರು, ಧರ್ಮವನ್ನು ಪೂರ್ಣವಾಗಿ ನಂಬುವ ವ್ಯಕ್ತಿಗಳಲ್ಲಿ ಆತ್ಮವಿಶ್ವಾಸ ಬಲವಾಗಿರುತ್ತದೆ. ಹಾಗಾಗಿ ಕಷ್ಟ ಬರುವ ಮೊದಲೇ ಭಗವಂತನ ಸ್ಮರಣೆ ಮಾಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಶಂಕರಾಚಾರ್ಯ ಶ್ರೀ ಗೋಕರ್ಣ ಮಂಡಲಾಧೀಶ್ವರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನುಡಿದರು.

ಶಿಲಾಮಯವಾಗಿ ಜೀರ್ಣೋದ್ಧಾರಗೊಂಡ ತಲ್ಲೂರು ಮಹಾಲಿಂಗೇಶ್ವರ ಹಾಗೂ ಶ್ರೀ ಗಣಪತಿಯ ದೇವಸ್ಥಾನದ ಲೋಕಾರ್ಪಣೆ, ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮಹಾರುದ್ರಾನುಷ್ಠಾನ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಮಹಾಲಿಂಗೇಶ್ವರ ಇಲ್ಲಿ ಬೃಹದಾಕಾರದ ಲಿಂಗದಲ್ಲಿ ಪ್ರತಿಷ್ಠಾನೆಗೊಂಡಿದ್ದಾನೆ. ಭಕ್ತರ ಸೇವೆ ಸ್ವೀಕರಿಸಿ ಭಕ್ತರನ್ನು ನಿರಂತರ ಹರಸುತ್ತಿರಲಿ. ಬಿಂಬಕ್ಕೆ ಹೇಗೆ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಆಗಿ ಸ್ಥಿರತೆ ಬರುತ್ತದೆಯೋ ಹಾಗೆಯೇ ಭಕ್ತರಿಗೂ ಬ್ರಹ್ಮಕಲಶಾಭಿಷೇಕವಾಗಿ ಪಾಪಗಳು ಕಳೆದುಹೋಗಿ ಮನಸ್ಸಿನಲ್ಲಿ ಸ್ಥಿರತೆ ಬರಲಿ ಎಂದರು.

ತಲ್ಲೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪುನಃ ಪ್ರತಿಷ್ಠೆಯಾಗಿತ್ತು ಬಳಿಕ ಊರಿಗೆ ಒಳ್ಳೆದಾಗಿದೆ. ಇನ್ನೂ ತುಂಬಾ ಒಳ್ಳೆದಾಗುತ್ತದೆ ಎಂದು ಆಶೀರ್ವದಿಸಿದರು.

ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ವಾಸ್ತುತಜ್ಞರಾದ ಸುಬ್ರಹ್ಮಣ್ಯ ಭಟ್ ಗುಂಡಿಬೈಲು, ನಗು ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಕುಶಲ ಶೆಟ್ಟಿ, ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಬಾಲಚಂದ್ರ ಭಟ್, ಶ್ರೀನಿವಾಸ ಉಳ್ಳೂರ, ಪುರೋಹಿತರಾದ ವಿಶ್ವನಾಥ ಭಟ್, ರವೀಂದ್ರ ಶೆಟ್ಟಿ, ಪ್ರಭಾಕರ ಶೆಟ್ಟಿ, ಮೋಹನ ಶೆಟ್ಟಿ, ರಾಜೀವ ಶೆಟ್ಟಿ, ಸತ್ಯಾನಂದ ಶೆಟ್ಟಿ, ಗೋಪಾಲ ಶೆಟ್ಟಿ ತಲ್ಲೂರು ದೊಡ್ಮನೆ, ಮಾಕ ಪೂಜಾರಿ, ದೇವಸ್ಥಾನದ ಸಹ ಮೊಕ್ತೇಸರರು ಉಪಸ್ಥಿತರಿದ್ದರು,

ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ದೇವಸ್ಥಾನ ನಿರ್ಮಾಣದಲ್ಲಿ ನೆರವು ನೀಡಿದ ದಾನಿಗಳನ್ನು ಸನ್ಮಾನಿಸಿದರು.

ದೇವಸ್ಥಾನದ ಆಡಳಿತ ಮೊಕ್ತೇಸರ ವಸಂತ ಆರ್.ಹೆಗ್ಡೆ ತಲ್ಲೂರು ದೊಡ್ಮನೆ ಸ್ವಾಗತಿಸಿದರು. ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಟಿ.ಬಿ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರವೀಂದ್ರ ಶ್ರೀಯಾನ್ ಅತಿಥಿಗಳನ್ನು ಗೌರವಿಸಿದರು. ರಮಾನಂದ ಶೆಟ್ಟಿ ವಂದಿಸಿದರು. ಕೆ.ಎನ್.ರಾಜೇಶ, ದೇವರಾಜ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.

ಶಂಕರಾಚಾರ್ಯ ಶ್ರೀ ಗೋಕರ್ಣ ಮಂಡಲಾಧೀಶ್ವರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಮಹಾಗಣಪತಿ ಮತ್ತು ಶ್ರೀ ಮಹಾಲಿಂಗೇಶ್ವರ ದೇವರ ಪ್ರತಿಷ್ಠಾ, ಶಿಖರ ಪ್ರತಿಷ್ಠಾ ಮೊದಲಾದ ಧಾರ್ಮಿಕ ವಿಧಿವಿಧಾನಗಳು ನಡೆದವು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!