Sunday, September 8, 2024

ಉಡುಪಿ ಕಡಿಮೆ 75.87%, ಬೈಂದೂರು 77.84%, ಕುಂದಾಪುರ 78.94%, ಕಾರ್ಕಳ 81.30%, ಕಾಪು 78.79% ಮತದಾನ

ಮುಗಿದ ಮತದಾನ : ಶನಿವಾರಕ್ಕೆ ಕಾತರ
ಕುಂದಾಪುರ: ರಾಜಕೀಯ ಪಕ್ಷಗಳ ಒಂದು ಹೋರಾಟ ಮುಗಿದಿದೆ. ರಾಜ್ಯದ 16ನೇ ವಿಧಾನಸಭಾ ರಚನೆಗೆ ನಡೆದ ಚುನಾವಣೆ ಅತ್ಯಂತ ಯಶಸ್ವಿಯಾಗಿ ಜರುಗಿದೆ. ಅಲ್ಲಲ್ಲಿ ನಡೆದ ಸಣ್ಣ ಪುಟ್ಟ ಘಟನೆಗಳು ಹೊರತು ಪಡಿಸಿ ಉಳಿದೆಲ್ಲಾ ಕಡೆ ಶಾಂತಿಯುತ ಮತದಾನ ನಡೆದಿದೆ.
ಉಡುಪಿ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ನಡೆದಿದೆ. ಎಲ್ಲ ಮತಗಟ್ಟೆಗಳಲ್ಲಿ ಬೆಳಿಗ್ಗೆಯಿಂದಲೇ ಬಿರುಸಿನ ಮತದಾನ ನಡೆದಿದೆ. ಜಿಲ್ಲೆಯಲ್ಲಿ ಶೇಕಡಾ 78.46% ಮತದಾನ ನಡೆದಿದೆ.

ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 77.84% ಕುಂದಾಪುರ 78.94%, ಉಡುಪಿ 75.87%, ಕಾಪು 78.79%, ಕಾರ್ಕಳ 81.30% ಶೇಕಡಾ ಮತದಾನವಾಗಿದೆ. ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ಜಿಲ್ಲೆಯಲ್ಲಿ ಕಡಿಮೆ ಮತದಾನವಾಗಿದೆ.
ಮತ ಚಲಾವಣೆಗೆ ಮತದಾರರು ಅತ್ಯಂತ ಉತ್ಸಾಹದಲ್ಲಿ ಪಾಲ್ಗೊಂಡರು. ರಾಜಕೀಯ ಪಕ್ಷಗಳು ಬಹಳ ಮುಖ್ಯವಾಗಿ ಮತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹ ನೀಡಿದ್ದವು.

ಉಡುಪಿ ಜಿಲ್ಲೆಯಲ್ಲಿ ಮುಖ್ಯವಾಗಿ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ನೇರ ಹಣಾಹಣಿ ಕಂಡು ಬಂದಿದೆ. ಮತಗಟ್ಟೆಯ ಹೊರಗಿನ ವಾತಾವರಣದಲ್ಲಿ ಎರಡೇ ಪಕ್ಷದವರು ಉತ್ಸಾಹದಲ್ಲಿ ಪಾಲ್ಗೊಂಡು, ಎಲ್ಲರೂ ನಮ್ಮದೇ ಜಯ ಎಂದು ಹೇಳುತ್ತಿದ್ದರು, ಆದರೆ ಮತದಾರರು ಮಾತ್ರ ಮೌನವಾಗಿದ್ದಾರೆ.

ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಗೋಪಾಲ ಪೂಜಾರಿ ಮತ್ತು ಗುರುರಾಜ ಗಂಟಿಹೊಳೆ ನಡುವೆ ನೇರ ಸ್ಪರ್ಧೆ ಇದೆ. 5ನೇ ಬಾರಿ ಶಾಸಕರಾಗಲು ಹೊರಟ ಗೋಪಾಲ ಪೂಜಾರಿಯವರು, ಗುರುರಾಜ ಗಂಟಿಹೊಳೆ ಪ್ರಬಲ ಹೋರಾಟವನ್ನು ಎದುರಿಸಬೇಕಾಗಿ ಬಂತು. ಕ್ಷೇತ್ರದಲ್ಲಿ ಗೆಲ್ಲಲು ಎರಡೇ ಪಕ್ಷಗಳಿಗೆ ಸಮಾನ ಅವಕಾಶವಿದೆ. ಮತದಾರರ ಮನ ಸೆಳೆಯಲು ಎರಡೂ ರಾಜಕೀಯ ಪಕ್ಷಗಳು ತಮಗೆ ಬೇಕಾದ ವ್ಯವಸ್ಥೆಯನ್ನು ಮಾಡಿದ್ದರು, ಕ್ಷೇತ್ರದಲ್ಲಿ ಸುಲಭ ಗೆಲುವು ಯಾರಿಗೂ ಸಾಧ್ಯವಿಲ್ಲ.

ಕುಂದಾಪುರ ಕ್ಷೇತ್ರದಲ್ಲಿ ಕೊನೆಯ ಗಳಿಗೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಬಿಗುವಾದ ಸ್ಪರ್ಧೆ ಉಂಟಾಯಿತು. ಕಾಂಗ್ರೆಸ್ ಕೊನೆಯ ಗಳಿಗೆಯಲ್ಲಿ ತನ್ನ ಬತ್ತಳಿಕೆಯಲ್ಲಿರುವ ಎಲ್ಲಾ ಬಾಣಗಳನ್ನು ಪ್ರಯತ್ನಿಸಿ ಗೆಲುವಿಗಾಗಿ ಹೋರಾಟ ನಡೆಸಿದೆ. ಬಿಜೆಪಿ ಎಂದಿನಂತೆ ಮತ ಹೋರಾಟದಲ್ಲಿ ತೊಡಗಿಸಿಕೊಂಡಿದೆ. ಬಿಜೆಪಿಯ ಕಿರಣ ಕುಮಾರ ಕೊಡ್ಗಿಯವರು ಗೆಲುವು ಸುಲಭವೆಂದುಕೊಂಡರೆ, ಕಾಂಗ್ರೆಸ್ ಜಯದ ಹಾದಿ ನಮ್ಮದೇ ಎಂದು ಕೊಂಡಿದೆ.

ಉಡುಪಿ ಜಿಲ್ಲೆಯಲ್ಲಿ ಸುಲಭದ ಗೆಲುವು ಯಾರಿಗೂ ಸಾಧ್ಯವಿಲ್ಲ. ಹಾಗೆಯೇ ಉಡುಪಿ, ಕಾಪು, ಕಾರ್ಕಳ ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳಿಗೆ ಜಯ ಸಾಧಿಸಲು ಸಮಾನ ಅವಕಾಶಗಳಿವೆ. ಕಳೆದ ಬಾರಿ ಉಡುಪಿ ಜಿಲ್ಲೆಯ ಐದುಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿತ್ತು.

ಈ ಬಾರಿ ಕಾಂಗ್ರೆಸ್ ಯಾವ ರೀತಿಯ ಹೋರಾಟ ನೀಡಿತು ಎಂಬುದನ್ನು ಕಾದು ನೋಡಬೇಕಿದೆ. ಜಿಲ್ಲೆಯಲ್ಲಿ ಎರಡು ಪಕ್ಷಗಳು ಗೆಲುವಿಗಾಗಿ ಬಿಗು ಹೋರಾಟವನ್ನೇ ಮಾಡಿವೆ. ಇದೀಗ ಶನಿವಾರದ ಫಲಿತಾಂಶಕ್ಕಾಗಿ ಎಲ್ಲರ ಕಾತರ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!