spot_img
Sunday, April 26, 2026
spot_img

ಉಡುಪಿ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿ ಶೌರ್ಯ ಎಸ್. ಕಾಡಿಂತಾರ್ ‘ಇಸ್ರೋ- ಯುವಿಕಾ -2023’ರ ಯುವ ವಿಜ್ಞಾನಿಯಾಗಿ ಆಯ್ಕೆ

ಕುಂದಾಪುರ: 2023ರ ಶೈಕ್ಷಣಿಕ ವರ್ಷದ ’ಯುವಿಕಾ’ ಕಾರ್‍ಯಕ್ರಮಕ್ಕೆ ಮಣಿಪಾಲ ಪ್ರಗತಿ ನಗರದಲ್ಲಿರುವ ಕೇಂದ್ರೀಯ ವಿದ್ಯಾಲಯ ಉಡುಪಿಯಲ್ಲಿ 10ನೇ ತರಗತಿ ಓದುತ್ತಿರುವ ಶೌರ್ಯ ಎಸ್. ಕಾಡಿಂತಾರ್ ರವರನ್ನು ಇಸ್ರೋ ಸಂಸ್ಥೆ ಯುವ ವಿಜ್ಞಾನಿಯಾಗಿ ಆಯ್ಕೆ ಮಾಡಿದೆ.

ಇಸ್ರೋ ಪ್ರಸಕ್ತ ವರ್ಷ ದೇಶದಲ್ಲಿ ಆಯ್ಕೆ ಮಾಡಿದ 350 ವಿದ್ಯಾರ್ಥಿಗಳಲ್ಲಿ ಶೌರ್ಯ. ಎಸ್. ಕಾಡಿಂತಾರ್ ಓರ್ವರಾಗಿದ್ದಾರೆ.

ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆಯು ಶಾಲಾ ವಿದ್ಯಾರ್ಥಿಗಳಿಗಾಗಿ ಯುವಿಕಾ (ಯುವ ವಿಜ್ಞಾನಿ ಕಾರ್‍ಯಕ್ರಮ ) ಎಂಬ ವಿಶೇಷ ಕಾರ್‍ಯಕ್ರಮವನ್ನು ಆಯೋಜನೆ ಮಾಡುತ್ತಿದೆ. ಇದು ಯುವ ವಿದ್ಯಾರ್ಥಿಗಳಿಗೆ ಬಾಹ್ಯಕಾಶ ವಿಜ್ಞಾನ, ತಂತ್ರಜ್ಞಾನ ಹಾಗೂ ಬಾಹ್ಯಕಾಶ ಅಪ್ಲಿಕೇಶನ್‌ಗಳ ಕುರಿತು ಮೂಲಭೂತ ಜ್ಞಾನವನ್ನು ನೀಡುತ್ತದೆ. ಈ ಕಾರ್‍ಯಕ್ರಮವನ್ನು ಕ್ಯಾಚ್ ದೆಮ್ ಯಂಗ್ ಎಂಬ ಶೀರ್ಷಿಕೆ ಅಡಿಯಲ್ಲಿ ಇಸ್ರೋ ರೂಪಿಸಿದ್ದು 2023 ರ ಮೇ 15ರಿಂದ ಮೇ 26 ರವರೆಗೆ ನಡೆಯಲಿದೆ.

ಇವರು ಪ್ರಸ್ತುತ ಬ್ರಹ್ಮಾವರ ತಾಲೂಕಿನ ಯಡ್ತಾಡಿ ನಿವಾಸಿ, ಪೊಲೀಸ್ ಇಲಾಖೆ ಉಡುಪಿ ಸಶಸ್ತ್ರ ಮೀಸಲು ಪಡೆ, ಚಂದು ಮೈದಾನ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಂಕರ್ ಪೂಜಾರಿ ಹಾಗೂ ಬ್ರಹ್ಮಾವರ ವಲಯದ ಸಗ್ರಿನೋಳೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀಮತಿ ಜ್ಯೋತಿ ದಂಪತಿಯ ಪುತ್ರ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!