Sunday, September 8, 2024

ಸುದರ್ಶನ ಉರಾಳರಿಂದ ಯಕ್ಷಗಾನದ ವಸ್ತ್ರಾಲಂಕಾರದ ಪ್ರಾತ್ಯಕ್ಷಿಕೆ

ಬೆಂಗಳೂರು: ಕರಾವಳಿಯ ಗಂಡು ಕಲೆ ಯಕ್ಷಗಾನ ತನ್ನ ಸ್ವಂತಿಕೆ ಉಳಿಸಿ ಮಕ್ಕಳಿಂದ ಹಿಡಿದು ಹಿರಿಯರ ತನಕ ರಸಸ್ವಾಧವ ನೀಡುವ ಕಲೆಯಾಗಿದೆ. ಮಹಾಭಾರತ, ರಾಮಾಯಣ ಕತೆಯನ್ನು ಆಡಿತೋರಿಸುವ ಮೂಲಕ ಭಾರತಿಯ ಕೌಟುಂಬಿಕ, ಸಾಮರಸ್ಯವನ್ನು ಇಂದಿನ ಸಮಾಜಕ್ಕೆ ತಿಳಿಹೇಳುವ ಕಲೆಯಾಗಿದೆ. ಕಲೆಯಿಂದ ಎಲ್ಲವನ್ನು ಪಡೆಯುವುದಕ್ಕಿಂತ ಕಲೆಯ ಉಳಿವಿಗಾಗಿ ನಾವೇನು ಕೊಟ್ಟಿದ್ದೇವೆ ಎನ್ನುವುದು ಬಹುಮುಖ್ಯ. ನಮ್ಮಲ್ಲಿನ ಪ್ರತಿಭೆಯನ್ನು ಭವಿಷ್ಯದ ಕಲಾ ಕುಸುಮಗಳಲ್ಲಿ ಬೆರೆಸಿ, ಬೆಳೆಸಿದರೆ ಭವಿಷ್ಯ ಉಜ್ವಲವಾಗುತ್ತದೆ ಎಂದು ಮಾಜಿ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾದ ಕೆ. ಮೋಹನ ಹೇಳಿದರು.

ಅವರು ಎ. 13 ರಂದು ಬೆಂಗಳೂರಿನ ತ್ಯಾಗರಾಜ ನಗರದಲ್ಲಿ ಯಕ್ಷಾಂಗಣ ಟ್ರಸ್ಟ್ ನಡೆಸುವ 18 ದಿವಸದ ಯಕ್ಷಗಾನ ಬೇಸಿಗೆ ಶಿಬಿರದ 6ನೇ ದಿನದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ಅಂದು ಯಕ್ಷಗಾನದ ವಸ್ತ್ರಾಲಂಕಾರದ ಪರಿಚಯ ಕಟ್ಟುವ ಕ್ರಮದ ಬಗ್ಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಗುರು ಕೋಟ ಸುದರ್ಶನ ಉರಾಳರು. ಪ್ರಾತ್ಯಕ್ಷಿಕೆ ಮೂಲಕ ಸಮಗ್ರ ಪರಿಚಯ ಮಾಡಿಸಿದರು. ಆ ಸಂದರ್ಭದಲ್ಲಿ ಯಕ್ಷಗುರು ಪ್ರಿಯಾಂಕ ಕೆ. ಮೋಹನ್, ಯಕ್ಷಾಂಗಣ ಟ್ರಸ್ಟಿನ ಕೆ. ಸುಶೀಲ ಮತ್ತು ವೀಣಾ ಮೋಹನ್ ಉಪಸ್ಥಿತರಿದ್ದರು.

ಹಿರಿಯ ವಿದ್ಯಾರ್ಥಿಗಳಾದ ಶ್ರೀವತ್ಸ ಮತ್ತು ಶ್ರೀ ವಿದ್ಯಾ ಈ ಶಿಬಿರಕ್ಕೆ ಸಹಕರಿಸಿದರು. ೨೫-೩೦ ಮಕ್ಕಳು ಶಿಬಿರಕ್ಕೆ ಭಾಗವಹಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!