Sunday, September 8, 2024

ಉಡುಪಿ ಜಿಲ್ಲೆ: ಏಳು ಜನ ಹೊಸಬರು, ನಾಲ್ಕು ಶಾಸಕರಿಗೆ ಟಿಕೆಟಿಲ್ಲ


ಉಡುಪಿ ಜಿಲ್ಲೆಯಲ್ಲಿ ಬರುವ ಐದು ವಿಧಾನ ಸಭಾ ಕ್ಷೇತ್ರಗಳ ಸಂಪೂರ್ಣ ರಾಜಕೀಯ ಚಿತ್ರಣ ದೊರೆತಿದೆ. ಎರಡು ರಾಷ್ಟ್ರೀಯ ಪಕ್ಷಗಳು ಐದು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಅಂತಿಮ ಗೊಳಿಸಿದೆ. ಇಲ್ಲಿ ಬಿಜೆಪಿ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳನ್ನು ಬದಲಿಸಿದೆ.

ಕಾಂಗ್ರೆಸ್ ಮೂರನೆ ಪಟ್ಟಿಯನ್ನು ಈಗಾಗಲೆ ಬಿಡುಗಡೆ ಮಾಡಿದೆ. ಕಾರ್ಕಳಕ್ಕೆ ಕೊನೆಗೂ ಅಭ್ಯರ್ಥಿಯನ್ನು ಅಂತಿಮಗೊಳಿಸಿದೆ. ಅದೇ ರೀತಿ ಬಿಜೆಪಿ ಬೈಂದೂರು ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ.

ಕುಂದಾಪುರ ವಿಧಾನಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪ್ರಥಮ ಪಟ್ಟಿಯಲ್ಲೇ ಅಭ್ಯರ್ಥಿಯನ್ನು ಘೋಷಿಸಿದೆ. ಮೊಳಹಳ್ಳಿ ದಿನೇಶ್ ಹೆಗ್ಡೆಯವರನ್ನು ಕಣಕ್ಕಿಳಿಸಿದೆ. ಹಾಗೆಯೇ ಬಿಜೆಪಿಯಲ್ಲೂ ಯಾವುದೇ ಗೊಂದಲವಿಲ್ಲ. ಹಾಲಾಡಿಯವರ ನಿರ್ಧಾರ ಮತ್ತು ಪಕ್ಷದ ತೀರ್ಮಾನದಿಂದ ಅಭ್ಯರ್ಥಿ ಆಯ್ಕೆ ಸುಗಮವಾಗಿ ನೆಡೆದಿದೆ.

ಉಡುಪಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬದಲಿಸಿದೆ. ಹಾಲಿ ಶಾಸಕರಾದ ರಘುಪತಿ ಭಟ್ ರವರಿಗೆ ಟಿಕೇಟ್ ನೀಡಿಲ್ಲ. ಮೀನುಗಾರರ ಮುಖಂಡರಾಗಿರುವ ಯಶಪಾಲ್ ಸುವರ್ಣರಿಗೆ ಟಿಕೇಟನ್ನು ನೀಡಿದೆ. ಇಲ್ಲಿ ಬ್ರಾಹ್ಮಣ ಸಮುದಾಯ ಬಿಟ್ಟು ಮೊಗವೀರ ಸಮುದಾಯಕ್ಕೆ ಬಿಜೆಪಿ ಪ್ರಾತಿನಿಧ್ಯ ನೀಡಿದೆ. ಕಾಂಗ್ರೆಸ್ ಇಲ್ಲಿ ಎರಡನೆ ಪಟ್ಟಿಯಲ್ಲಿ ಪ್ರಸಾದ್ ರಾಜ್ ಕಾಂಚನ್‌ರವರ ಹೆಸರನ್ನು ಘೋಷಿಸಿದೆ.

ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕರಾದ ಲಾಲಾಜಿ ಮೆಂಡನ್‌ರವರಿಗೆ ಟಿಕೇಟ್ ನೀಡಿಲ್ಲ. ಅಲ್ಲಿ ಹೊಸಮುಖ ಸುರೇಶ್ ಶೆಟ್ಟಿ ಗುರ್ಮೆಯವರಿಗೆ ಟಿಕೇಟ್ ನೀಡಿದೆ. ಇವರು ಕಳೆದ ಎರಡು ಅವಧಿಗಳಿಂದ ಟಿಕೇಟಿಗಾಗಿ ಪ್ರಯತ್ನ ಮಾಡುತ್ತಾ ಬಂದಿದ್ದಾರೆ. ಇಲ್ಲಿ ಕಾಂಗ್ರೆಸ್ ಮೊದಲೇ ತಿಳಿದಂತೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆಯವರನ್ನು ಕಣಕ್ಕಿಳಿಸಿದೆ. ಕಳೆದ ಬಾರಿ ಸೋಲಿನಿಂದ ಎಚ್ಚೆತ್ತುಕೊಂಡ ಸೊರಕೆ ಮೊದಲಿಂದಲೂ ಕ್ಷೇತ್ರದಲಿದ್ದು ತಯಾರಿ ನೆಡೆಸಿದ್ದಾರೆ.

ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಕೆ.ಗೋಪಾಲ ಪೂಜಾರಿ ಸ್ಪರ್ಧೆ ಮಾಡುತ್ತಿದ್ದಾರೆ. ಬೈಂದೂರು ಕ್ಷೇತ್ರದಲ್ಲಿ ಗೋಪಾಲ ಪೂಜಾರಿ ಏಕೈಕ ಕಾಂಗ್ರೆಸ್ ಅಭ್ಯರ್ಥಿ ಅಕಾಂಕ್ಷಿಯಾಗಿದ್ದರು. ಹಾಗಗಿ ಅವರಿಗೆ ಟಿಕೆಟು ದೊರಕಿತ್ತು. ಬಿಜೆಪಿ ಅಭ್ಯರ್ಥಿ ಆಯ್ಕೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. 12ಕ್ಕೂ ಹೆಚ್ಚು ಜನ ಇಲ್ಲಿ ಅಭ್ಯರ್ಥಿತನ ಬಯಸಿದರು. ಪಕ್ಷದ ವರಿಷ್ಢರಿಗೂ ಅಭ್ಯರ್ಥಿ ಆಯ್ಕೆ ಸವಾಲಾಗಿತ್ತು. ಕೊನೆಗೂ ಗುರುರಾಜ್ ಗಂಟಿಹೊಳೆ ಅವರಿಗೆ ಟಿಕೆಟು ನೀಡಲಾಗಿದೆ.

ಕಾರ್ಕಳದಲ್ಲಿ ಸಚಿವ ಸುನಿಲ್ ಕುಮಾರ್ ಬಿಜೆಪಿಯಿಂದ ಮೊದಲ ಪಟ್ಟಿಯಲ್ಲಿಯೇ ಟಿಕೆಟು ಪಡೆದಿದ್ದರು. ಕಾಂಗ್ರೆಸ್ ಯಾರಿಗೆ ಟಿಕೆಟು ಕೊಡುವುದೆಂಬ ಲೆಕ್ಕಚಾರದಲ್ಲೇ ಇದ್ದು ಕೊನೆಗೂ ಮುನಿಯಾಲು ಉದಯ ಕುಮಾರ್ ಶೆಟ್ಟಿಯವರಿಗೆ ಟಿಕೆಟು ನೀಡಿದೆ. ಒಟ್ಟಾರೆ ಜಿಲ್ಲೆಯ ಐದು ಕ್ಷೇತ್ರಗಳ ಸ್ಪಷ್ಟ ಚಿತ್ರಣ ದೊರಕಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!