Sunday, September 8, 2024

ಎರಡು ದಿನಗಳಲ್ಲಿ ನನ್ನ ನಿರ್ಧಾರ ಘೋಷಣೆ-ಬಿ.ಎಂ.ಸುಕುಮಾರ್ ಶೆಟ್ಟಿ


ಕುಂದಾಪುರ, ಎ.13: ಶಾಸಕನಾಗಿ ಯಾವುದೇ ಕಳಂಕವಿಲ್ಲದೆ ಕೆಲಸ ಮಾಡಿದ್ದೇನೆ. ಕ್ಷೇತ್ರದಲ್ಲಿ ಇಲ್ಲಿಯ ತನಕ ಆಗದ ಅಭಿವೃದ್ದಿ ಕೆಲಸ ನನ್ನ ಅವಧಿಯಲ್ಲಿ ಆಗಿದೆ. ಕ್ಷೇತ್ರದ ಕಾರ್ಯಕರ್ತರ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದೇನೆ. ಆದರೂ ಕೂಡಾ ಪಕ್ಷ ನನಗೆ ಅವಕಾಶ ನೀಡದ ಬಗ್ಗೆ ಬೇಸರವಿದೆ. ನನ್ನ ನಿಲುವನ್ನು ಎರಡು ದಿನಗಳಲ್ಲಿ ತಿಳಿಸುತ್ತೇನೆ ಎಂದು ಬೈಂದೂರು ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ತಿಳಿಸಿದರು.

ಅವರು ನೆಂಪುವಿನಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದರು.

ನಾನು ಕಳೆದ 10 ವರ್ಷಗಳಿಂದ ಕ್ಷೇತ್ರದ ಜನರೊಂದಿಗೆ ಇದ್ದೇನೆ. ಪಕ್ಷವನ್ನು ಬೆಳೆಸುವಲ್ಲಿ ಶ್ರಮಿಸಿದ್ದೇನೆ. 2013ರ ಚುನಾವಣೆಯಲ್ಲಿ 31 ಸಾವಿರ ಮತಗಳಿಂದ ಸೋತರೂ ಸುಮ್ಮನಿರದೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು 2018ರ ಚುನಾವಣೆಯಲ್ಲಿ 24ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದೇನೆ. ಕ್ಷೇತ್ರದ ಅಭಿವೃದ್ದಿಗೆ ಶಕ್ತಿಮೀರಿ ಶ್ರಮಿಸಿದ್ದೇನೆ. ಜನರ ನೋವು ನಲಿವುಗಳಿಗೆ ಸ್ಪಂದಿಸಿದ್ದೇನೆ. 800 ಕೋಟಿ ರೂ.ಅನುದಾನದ ಮನೆಮನೆಗೆ ಕುಡಿಯುವ ನೀರು ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ಈ ಐದು ವರ್ಷದ ಅವಧಿಯಲ್ಲಿ ಬೈಂದೂರು ಕ್ಷೇತ್ರ ಅಭಿವೃದ್ದಿ ಕಂಡಿದೆ. ಇನ್ನೂ ಐದು ವರ್ಷ ಅವಕಾಶ ಸಿಕ್ಕಿದರೆ ಬೈಂದೂರನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಕನಸಿತ್ತು ಎಂದರು.
ನಾನು ಶಾಸಕನಲ್ಲದ್ದರೂ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಾಮರ್ಥ್ಯವಿದೆ. ನನ್ನ ಸಿಟ್ಟು ಕ್ಷಣಿಕ, ಶಾಶ್ವತವಾದ ಪ್ರೀತಿ ನನ್ನಲ್ಲಿ ಇದೆ ಎಂದ ಅವರು, ನಾನು ನೂರಕ್ಕೆ ನೂರು ಬಿಜೆಪಿ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಪಕ್ಷ ಘೋಷಣೆ ಮಾಡಿರುವ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಅವರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಗುರುರಾಜ್ ಗಂಟಿಹೊಳೆ ನನಗೆ ಗೊತ್ತಿಲ್ಲ, ನನ್ನ ಚುನಾವಣೆಯಲ್ಲಿ ಅವರು ಕೆಲಸ ಮಾಡಿಲ್ಲ ಎಂದರು.

ಈ ಸಂದರ್ಭದಲ್ಲಿ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ, ಪ್ರಕಾಶ್ ಪೂಜಾರಿ ಜೆಡ್ಡು ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!