spot_img
Wednesday, January 22, 2025
spot_img

ಎ.16ಕ್ಕೆ ಮಾರಣಕಟ್ಟೆಯಲ್ಲಿ ಕಲ್ಪವೃಕ್ಷ: ಪ್ರಶಸ್ತಿ ಪ್ರದಾನ, ನೆರವು ವಿತರಣೆ


ಕುಂದಾಪುರ: ಮಾರಣಕಟ್ಟೆ ಸುಬ್ರಹ್ಮಣ್ಯ ಮಂಜ ಚಾರಿಟೇಬಲ್ ಟ್ರಸ್ಟ್ ರಿ., ನೇತೃತ್ವದಲ್ಲಿ ಮಾರಣಕಟ್ಟೆ ಸುಬ್ರಹ್ಮಣ್ಯ ಮಂಜರವರ ಸಂಸ್ಮರಣಾ ಕಾರ್ಯಕ್ರಮ ಕಲ್ಪವೃಕ್ಷ ಎ.16 ಆದಿತ್ಯವಾರ ಸಂಜೆ 6ಗಂಟೆಯಿಂದ ಮಾರಣಕಟ್ಟೆ ಅನುಗ್ರಹದ ವಠಾರದಲ್ಲಿ ನಡೆಯಲಿದೆ.

ಸಂಜೆ 7 ಗಂಟೆಯಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು ದಿ|ಸುಬ್ರಹ್ಮಣ್ಯ ಮಂಜರವರ ನೆನಪಿನಲ್ಲಿ ನೆರವು ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ನಿವೃತ್ತ ಪ್ರಾಂಶುಪಾಲರಾದ ಸುಬ್ರಹ್ಮಣ್ಯ ಉಡುಪ ಕೊಕ್ಕರ್ಣೆ ಉದ್ಘಾಟಿಸಲಿದ್ದಾರೆ. ಎಂ.ಎಸ್.ಮಂಜ ಚಾರಿಟೇಬಲ್ ಟ್ರಸ್ಟ್ ಮಾರಣಕಟ್ಟೆ ಅಧ್ಯಕ್ಷರಾದ ಎಂ.ಕೃಷ್ಣಮೂರ್ತಿ ಮಂಜ ಅಧ್ಯಕ್ಷತೆ ವಹಿಸಲಿದ್ದಾರೆ.

ವೇ.ಮೂ. ನೆಂಪು ಶ್ರೀಧರ ಭಟ್ ತೋನ್ಸೆ ಅವರಿಗೆ ವೈದಿಕ ರತ್ನ ಪ್ರಶಸ್ತಿ, ಗೀತ ಎಚ್.ಎಸ್ ಫೌಂಡೇಶನ್ ಅಧ್ಯಕ್ಷ ಶಂಕರ ಐತಾಳ್ ಅಮಾಸೆಬೈಲು, ಇವರಿಗೆ ಅಮೂಲ್ಯ ರತ್ನ ಪ್ರಶಸ್ತಿ, ಕುಂದಾಪುರದ ಅಂಬುಲೆನ್ಸ್ ಸೇವೆಯಲ್ಲಿ ಹೆಸರಾಗಿರುವ ವಿ.ವಾಸುದೇವ ಹಂದೆ ಅವರಿಗೆ ಸೇವಾ ರತ್ನ ಪ್ರಶಸ್ತಿ, ಯಕ್ಷಗಾನ ಪ್ರಸಂಗಕರ್ತ ರಘುರಾಮ ಶೆಟ್ಟಿ ಕಂದಾವರ ಅವರಿಗೆ ಕಲಾರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಸಂಜೆ 6 ಗಂಟೆಯಿಂದ ಸ.ಹಿ.ಪ್ರಾ.ಶಾಲೆ ಚಿತ್ತೂರು ವಿದ್ಯಾರ್ಥಿಗಳಿಂದ ಜನಪದ ನೃತ್ಯ, ರಾತ್ರಿ 9 ಗಂಟೆಯಿಂದ ಮನು ಹಂದಾಡಿ ಇವರಿಂದ ಕುಂದಾಪ್ರ ಕನ್ನಡ ಹಾಸ್ಯ ನಗೆ ಹಬ್ಬ, ರಾತ್ರಿ 9.30ರಿಂದ ಸ.ಪ್ರೌ.ಹಕ್ಲಾಡಿ ಪಂಚವಟಿ ರಂಗಶಾಲೆ ಪ್ರಸ್ತುತ ಪಡಿಸುವ ನಾಟಕ ಪಂಚವಟಿಯ ಮಾಯಾ ಮುಖಗಳು ಪ್ರದರ್ಶನಗೊಳ್ಳಲಿದೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!