Sunday, September 8, 2024

ಗುಂಡ್ಮಿ ಶ್ರೀ ಮಾಣಿಚೆನ್ನಕೇಶವ ದೇವಳದ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ

ಕೋಟ: ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಪುಣ್ಯದ ಕಾರ್ಯ ತನ್ಮೂಲಕ ಶ್ರೀದೇವರು ಶಕ್ತಿಭರಿತನಾಗಿ ಭಕ್ತರನ್ನು ಸಲಹುತ್ತಾನೆ,ಪ್ರಸ್ತುತ ಕಾಲಘಟ್ಟದಲ್ಲಿ ಪ್ರತಿಯೊರ್ವರಲ್ಲೂ ಧಾರ್ಮಿಕ ಚಿಂತನೆ ಪಸರಿಸಬೇಕಾದ ಅಗತ್ಯತೆ ಇದೆ ಅಲ್ಲದೆ ಅದರ ಕುರಿತು ಭಕ್ತಾಧಿಗಳಿಗೆ ಸಮರ್ಪಕ ಮಾಹಿತಿ ನೀಡುವ ಅವಶ್ಯಕತೆ ಇದೆ ಎಂದು ಸಾಸ್ತಾನದ ಷ್ಟಾಂಗ ಯೋಗ ಗುರುಕುಲದ ವಿದ್ವಾನ್ ವಿಜಯ ಮಂಜರ್ ಹೇಳಿದರು

ಸೋಮವಾರ ಗುಂಡ್ಮಿ ಶ್ರೀ ಮಾಣಿಚೆನ್ನಕೇಶವ ದೇವಸ್ಥಾನ ಇದರ ಬ್ರಹ್ಮಕಲಶೋತ್ಸವ ಇದರ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಧಾರ್ಮಿಕ ಪ್ರವಚನಗೈದು ಮಾತನಾಡಿದರು.

ಆನೆಗುಡ್ಡೆ ಶ್ರೀ ವಿನಾಯಕ ದೇವಳದ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ ಸಮಾಜ ಸುಸ್ಥಿತಿಯಲ್ಲಿರಬೇಕಾದರೆ ದೇವಾಲಗಳ ಪಾತ್ರ ಪ್ರಮುಖವಾದದ್ದು,ವಿಶ್ವದ ಎಲ್ಲಾ ಸಂಸ್ಕ್ರತಿಗಳಿಗೆ ಸಂಕಷ್ಟ ಎದುರಾದರೂ ಭಾರತೀಯ ಸಂಸ್ಕೃತಿಗೆ ಯಾವುದೇ ರೀತಿಯಲ್ಲಿ ಸಮಸ್ಯೆ ಸೃಷ್ಠಿಯಾಗಿಲಿಲ್ಲ ಏಕೆಂದರೆ ಅದು ನಮ್ಮ ದೇವಾಲಗಳು ಕಾರಣ,ಧರ್ಮದ ಹಾಗೂ ಸಾಂಸ್ಕೃತಿಕ, ಕಲಾ ತಳಹದಿಗೆ ದೇವಾಲಯವೇ ಮೂಲವಾಗಿದೆ.ಆ ಮೂಲಕ ಧರ್ಮಜಾಗೃತಿ ಮೆರೆದಿದೆ.ಮಾನವ ಜನ್ಮ ಚಿಂತನೆ,ಬದುಕು ,ಸಾರ್ಥಕತೆಗೆ ಭಗವಂತನ ಪ್ರೇರಣೆ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಾಕಷ್ಟು ಕೊಡುಗೆ ನೀಡಿದ ರಾಘವೇಂದ್ರ ನಾವಡ ಇವರನ್ನು ಗೌರವಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಸರ್ವಾಧ್ಯಕ್ಷ ವೇ.ಮೂ ಚಂದ್ರಶೇಖರ ಉಪಾಧ್ಯಾ ವಹಿಸಿದ್ದರು.

ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಸ್ ಕಾರಂತ ಶುಭಾಶಂಸನೆಗೈದರು.

ಮುಖ್ಯ ಅತಿಥಿಗಳಾಗಿ ಕೋಟ ಅಮೃತೇಶ್ವರಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ್ ಸಿ ಕುಂದರ್,ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಪಟೇಲ್ ಕಾಶಪ್ಪಯ್ಯ ದೊಡ್ಮನೆ, ಡಾ.ಹೇಮಂತ್ ಕುಮಾರ್, ಕ್ಯಾಪ್ಟನ್ ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಹೊಳ್ಳ ದೊಡ್ಮನೆ ಸ್ವಾಗತಿಸಿದರು.ವೇ ಮೂ.ಅನಂತಪದ್ಮನಾಭ ಉಪಾಧ್ಯಾಯ ಬೆಂಗಳೂರು ಸ್ವಸ್ತಿ ವಾಚನಗೈದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಶ್ರೀಧರ ಶಾಸ್ತ್ರಿ ಪ್ರಾಸ್ತಾವನೆಗೈದರು. ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕ ಗಣೇಶ್ ಚೆಲ್ಲಮಕ್ಕಿ ನಿರೂಪಿಸಿದರು. ಡಾ.ನಾಗೇಶ್ ಗುಂಡ್ಮಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!