Thursday, November 21, 2024

ಏಪ್ರಿಲ್ 6ರಂದು ಬಗ್ವಾಡಿ ರಥೋತ್ಸವ

kundapura: ಬಗ್ವಾಡಿ ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನದಲ್ಲಿ ಬ್ರಹ್ಮರಥೋತ್ಸವ ಏಪ್ರಿಲ್ 6ಗುರುವಾರ ನಡೆಯಲಿದೆ. ಆ ಪ್ರಯುಕ್ತ ಏಪ್ರಿಲ್ 4 ಮಂಗಳವಾರದಿಂದ ಏಪ್ರಿಲ್ 8 ಶನಿವಾರದ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.

ಏ.4ರಂದು ಮಂಗಳವಾರ ರಾತ್ರಿ 7 ಗಂಟೆಯಿಂದ ಕುಣಿತ ಭಜನೆ ಕಾರ್ಯಕ್ರಮ ನಡೆಯಲಿದೆ. ಏಪ್ರಿಲ್ 5ರಂದು ಸಂಜೆ 4 ಗಂಟೆಯಿಂದ 14ನೇ ವರ್ಷದ ಶ್ರೀ ದೇವಿಯ ವಿಜೃಂಭಣೆಯ ಪುರ ಮೆರವಣಿಗೆ ಶ್ರೀ ಮಹಿಷಾಸುರಮರ್ದಿನಿ ಭಕ್ತವೃಂದ ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ನಡೆಯಲಿದೆ. ರಾತ್ರಿ 9 ಗಂಟೆಯಿಂದ ಬಗ್ವಾಡಿ ಹೋಬಳಿ ವ್ಯಾಪ್ತಿಯ ಮೊಗವೀರ ಯುವ ಸಂಘಟನೆಯ ಐದು ಘಟಕದ ಪ್ರಾಯೋಜಕತ್ವದಲ್ಲಿ ವಿವಿಧ ವಿನೋದಾವಳಿ ಕಾರ್ಯಕ್ರಮ, ಏಪ್ರಿಲ್ 6 ರಂದು ಗುರುವಾರ ಬೆಳಿಗ್ಗೆ 10ಗಂಟೆಯಿಂದ 11 ಗಂಟೆಯ ತನಕ ಶೀರಾಮ ಭಜನಾ ಮಂಡಳಿ ಬೀಜಾಡಿ-ಗೋಪಾಡಿ ಇವರಿಂದ ಕುಣಿತ ಭಜನೆ, 11ಗಂಟೆಯಿಂದ ಶ್ರೀ ಮಹಿಷಾಸುರಮರ್ದಿನಿ ಭಜನಾ ಮಂಡಳಿ ಬಗ್ವಾಡಿ ಇವರಿಂದ ಕುಣಿತ ಭಜನೆ, ಮಧ್ಯಾಹ್ನ ಬ್ರಹ್ಮರಥೋತ್ಸವ ಹಾಗೂ ಮಹಾ ಅನ್ನಸಂತರ್ಪಣೆ, ಧಾರ್ಮಿಕ ಸಭೆ, ಮಧ್ಯಾಹ್ನ 2 ಗಂಟೆಯಿಂದ ವಿವಿಧ ಮನೋರಂಜನಾ ಕಾರ್ಯಕ್ರಮ, ಎಕ್ಸ್-ಟ್ರೀಮ್ ಡಾನ್ಸ್ ಅಕಾಡೆಮಿ ಉಡುಪಿ ಇವರಿಂದ ನೃತ್ಯ ವೈಭವ, ಏಪ್ರಿಲ್ 7ರಂದು ರಾತ್ರಿ 7 ಗಂಟೆಯಿಂದ ಬಗ್ವಾಡಿ ಫ್ರೆಂಡ್ಸ್ ಪ್ರಾಯೋಜಕತ್ವದಲ್ಲಿ 13ನೇ ವರ್ಷದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಶ್ರೀರಾಮ ಭಜನಾ ಮಂಡಳಿ ಬೀಜಾಡಿ-ಗೋಪಾಡಿ ಇವರಿಂದ ಭಜನೆ, ಏಪ್ರಿಲ್ 8ರಂದು ಬೆಳಿಗ್ಗೆ ಬಟ್ಟೆಕುದ್ರು ಗ್ರಾಮಸ್ಥರಿಂದ ತೆಪ್ಪೋತ್ಸವ ಸೇವೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!