spot_img
Thursday, April 23, 2026
spot_img

ಕುಂದಾಪುರ ಮೊಗವೀರ ಭವನದಲ್ಲಿ ಪ್ರಥಮ ಮದುವೆ: ಮಹಾಜನ ಸಂಘದಿಂದ ನವದಂಪತಿಗಳಿಗೆ ಬಂಗಾರದ ಉಂಗುರದೊಂದಿಗೆ ಅಭಿನಂದನೆ


ಕುಂದಾಪುರ, ಮಾ.13: ಕುಂದಾಪುರದ ಚಿಕ್ಕನಸಾಲು ರಸ್ತೆಯಲ್ಲಿ ಭವ್ಯವಾಗಿ ನಿರ್ಮಾಣಗೊಂಡು ಈಗಾಗಲೇ ವಿದ್ಯುಕ್ತವಾಗಿ ಶುಭಾರಂಭಗೊಂಡಿರುವ ಮೊಗವೀರ ಭವನದಲ್ಲಿ ಮಾ.13ರಂದು ಪ್ರಥಮ ಮದುವೆ ಕಾರ್ಯಕ್ರಮ ನೆರವೇರಿತು.

ಚಿ.ಬ್ರಿಜೇಶ್ ಚಂದನ್ ಮತ್ತು ಚಿ.ಎಸ್.ಕಂಚನ್ ಕುಮಾರಿ ನೂತನ ಸಭಾ ಭವನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ಈ ಸಂದರ್ಭದಲ್ಲಿ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬೈ, ಕುಂದಾಪುರ ಶಾಖೆಯ ಪದಾಧಿಕಾರಿಗಳು, ಸಮಾಜದ ಪ್ರಮುಖರು ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವೈವಾಹಿಕ ಜೀವನಕ್ಕೆ ಪಾದರ್ಪಣೆ ಮಾಡುತ್ತಿರುವ ನವ ದಂಪತಿಗಳಿಗೆ ಶುಭ ಹಾರೈಸಿದರು. ಮಹಾಜನ ಸಂಘದ ವತಿಯಿಂದ ನವದಂಪತಿಗಳಿಗೆ ಬಂಗಾರದ ಉಂಗುರವನ್ನು ತೊಡಿಸಿ, ಉಡುಗೊರೆಗಳನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬೈ ಇದರ ಗೌರವಧ್ಯಕ್ಷರಾದ ಸುರೇಶ್ ಆರ್.ಕಾಂಚನ್, ಅಧ್ಯಕ್ಷರಾದ ರಾಜು ಮೆಂಡನ್ ವಂಡ್ಸೆ, ಕುಂದಾಪುರ ಶಾಖಾಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ, ಮಾಜಿ ಅಧ್ಯಕ್ಷ ಕೆ.ಕೆ ಕಾಂಚನ್, ಪುಂಡಲೀಕ ಬಂಗೇರ, ಸದಾನಂದ ಬಳ್ಕೂರು, ಪ್ರಭಾಕರ ಮೊಗವೀರ ಸೇನಾಪುರ, ಸುಧಾಕರ ಕಾಂಚನ್, ಜಗದೀಶ ಮಾರ್ಕೋಡು, ಸತೀಶ್ ಎಂ.ನಾಯ್ಕ್, ಸುರೇಶ ವಿಠಲವಾಡಿ, ರಮೇಶ ಟಿ.ಟಿ., ದಿವಾಕರ ಮೆಂಡನ್, ಸುರೇಶ್ ಪುತ್ರನ್, ಯೋಗೀಶ್ ಶಿರೂರು, ಸುಮತಿ ಯು.ಹಟ್ಟಿಯಂಗಡಿ, ಮಾಲತಿ ಪಿ.ಬಂಗೇರ, ಗುಲಾಬಿ ಜಿ.ಮಾರ್ಕೋಡು, ಶೋಭಾ ಪುತ್ರನ್, ಶ್ರೀನಿವಾಸ ಮೆಂಡನ್, ಶ್ಯಾಮಲ ಜಿ ಸುಳ್ಸೆ, ಆಶಾ ಡಿ ಕುಂದಾಪುರ, ಗೀತಾ ಪಿ.ನಾಡ ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!