spot_img
Thursday, April 23, 2026
spot_img

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಗುರಿಕಾರರ ಸಮಾವೇಶ


ಕುಂದಾಪುರ: ಗುರಿಕಾರರು ಸಮಾಜದ ಮುಂಚೂಣಿಯಲ್ಲಿ ನಿಂತು ಎಲ್ಲರನ್ನು ಮಾರ್ಗದರ್ಶನ ಮಾಡಿ ಸಮಾಜವನ್ನು ಒಗ್ಗೂಡಿಸಿಕೊಂಡು ಹೋಗುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಬಗ್ವಾಡಿಯ ದೇವಸ್ಥಾನ, ಸಭಾ ಭವನಗಳ ನಿರ್ಮಾಣ ಪ್ರಕ್ರಿಯೆಯಲ್ಲಿ ಗುರಿಕಾರರು ಕೂಡಾ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಗುರಿಕಾರರು ಕೇವಲ ಮೊಗವೀರ ಸಮಾಜ ಮಾತ್ರವಲ್ಲ ಇತರ ಸಮಾಜದಿಂದಲೂ ಗೌರವಿಸಿಕೊಳ್ಳುವಂತ ಸಮಾಜಮುಖಿ ಕಾರ್ಯದಲ್ಲಿ ನಿರತರಾಗಬೇಕು ಎಂದು ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬೈ ಇದರ ಗೌರವಾಧ್ಯಕ್ಷ ಸುರೇಶ್ ಆರ್.ಕಾಂಚನ್ ಹೇಳಿದರು.

ಅವರು ಬಗ್ವಾಡಿಯ ಮಹಿಷಾಮರ್ದಿನಿ ಸಭಾ ಭವನದಲ್ಲಿ ನಡೆದ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬೈ, ಕುಂದಾಪುರ ವತಿಯಿಂದ ಬಗ್ವಾಡಿ ಹೋಬಳಿ ವ್ಯಾಪ್ತಿಯ ಗುರಿಕಾರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಗುರಿಕಾರರ ಸೇವೆಗೆ ಪ್ರತಿಯಾಗಿ ಪಿಂಚಣಿಯ ಜೊತೆಯಲ್ಲಿ ಗುರಿಕಾರರು ನಿಧನರಾದರೆ ಅವರ ಕುಟುಂಬ ಅವಲಂಬಿತರಿಗೆ 10 ಸಾವಿರ ಸಾಂತ್ವಾನ ಧನ ನೀಡುವ ಬಗ್ಗೆಯೂ ಚಿಂತನೆ ನಡೆಸಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬೈ ಇದರ ಅಧ್ಯಕ್ಷರಾದ ರಾಜು ಮೆಂಡನ್ ವಂಡ್ಸೆ ಮಾತನಾಡಿ, ಮೊಗವೀರ ಸಮಾಜದ ಬೆಳವಣಿಗೆಯಲ್ಲಿ ಗುರಿಕಾರರ ಪಾತ್ರ ಮಹತ್ತರವಾಗಿದೆ. ಗುರಿಕಾರರು ಮೊಗವೀರ ಸಮಾಜ ಮಾತ್ರವಲ್ಲ ಇಡೀ ಊರಿಗೆ ಸುಖ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಬೇಕು. ಮೊಗವೀರ ಸಮಾಜದ ಮೂಲಕ ಇವತ್ತು ಬಗ್ವಾಡಿ ಮತ್ತು ಕುಂದಾಪುರದಲ್ಲಿ ಸುಸಜ್ಜಿತ ಸಭಾಭವನ ನಿರ್ಮಾಣವಾಗಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.

ಕುಂದಾಪುರ ಶಾಖಾಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ ಮಾತನಾಡಿ, ಬಗ್ವಾಡಿ ಹೋಬಳಿ ವ್ಯಾಪ್ತಿಯ ಎಲ್ಲ ಕೂಡಿಗೆಗಳ ಗುರಿಕಾರರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗುರಿಕಾರ ಪದ್ದತಿಯನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕು, ಗುರಿಕಾರರನ್ನು ಜಾಗೃತಗೊಳಿಸಬೇಕು ಎನ್ನುವ ನೆಲೆಯಲ್ಲಿ ಗುರಿಕಾರರ ಸಮಾವೇಶವನ್ನು ನೆಡೆಸಲಾಗುತ್ತದೆ. ನಾಡೋಜ ಡಾ.ಜಿ.ಶಂಕರ್ ಅವರ ಮಾರ್ಗದರ್ಶನದಲ್ಲಿ ಗುರಿಕಾರರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದ ಅವರು, ಈಗಾಗಲೇ ಬಗ್ವಾಡಿಯಲ್ಲಿ ಪುರೋಹಿತರ ಮನೆ ನಿರ್ಮಾಣವಾಗಿದೆ. ಕೋಟೆ ಜಾಗವನ್ನು ಸಮತಟ್ಟುಗೊಳಿಸಲಾಗಿದೆ. ಕೋಟೆಯಲ್ಲಿನ ಕೆರೆಯನ್ನು ದುರಸ್ತಿಗೊಳಿಸಲಾಗಿದ್ದು ಅದನ್ನು ಅಭಿವೃದ್ದಿಗೊಳಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ದೇವಸ್ಥಾನದ ಸಮೀಪದಲ್ಲಿ ನಾಗ ಸನ್ನಿಧಾನ ನಿರ್ಮಾಣ ಮಾಡಿ ಮಾ.26ರಂದು ಪ್ರತಿಷ್ಠಾಪನೆ ನಡೆಯಲಿದೆ. ಮುಂಬಯಿ ಹೈಕೋರ್ಟ್ ವಕೀಲರಾದ ಚಂದ್ರ ನಾಯ್ಕ್ ನಾಡ ಅವರು ಇದರ ವೆಚ್ಚವನ್ನು ಭರಿಸಲಿದ್ದಾರೆ. ಹಾಗೆಯೇ ಮಹಿಷಾಸುರ ಮರ್ದಿನಿ ದೇವಸ್ಥಾನದ ದ್ವಾರಬಾಗಿಲಿಗೆ ಹಿತ್ತಾಳೆಯ ಕವಚ ಸಮರ್ಪಣೆ ನಡೆಯಲಿದೆ. ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ನೇತೃತ್ವದಲ್ಲಿ ದೇವಸ್ಥಾನದ ಒಳ ದ್ವಾರಬಾಗಿಲಿಗೆ ಬೆಳ್ಳಿಯ ಕವಚ ಸಮರ್ಪಣೆ ಮಾಡುವ ಕಾರ್ಯವೂ ಪ್ರಗತಿಯಲ್ಲಿದೆ ಎಂದರು,

ಈ ಸಂದರ್ಭದಲ್ಲಿ ಸಿ.ಎ ನಾಗೇಶ್ ಅವರನ್ನು ಸನ್ಮಾನಿಸಲಾಯಿತು. ಐವರು ಗುರಿಕಾರರನ್ನು ಸನ್ಮಾನಿಸಲಾಯಿತು. ಎಲ್ಲಾ ಗುರಿಕಾರರನ್ನು ಶಾಲು ಹೊದಿಸಿ, ವೀಳ್ಯ ನೀಡಿ ಗೌರವಿಸಲಾಯಿತು. ಗುರಿಕಾರರಿಗೆ ಗೌರವಧನ ವಿತರಿಸಲಾಯಿತು. ಹೊಸ ಗುರಿಕಾರರನ್ನು ಗೌರವಿಸಲಾಯಿತು. ಮೃತಪಟ್ಟ ಗುರಿಕಾರರಾದ ಸೀತಾ ಸುರ್‍ಕುಂದ ಹಾಗೂ ಮಹಾಬಲ ಮೊಗವೀರ ಬೈಲೂರು ಅವರ ಕುಟುಂಬದವರಿಗೆ ಸಾಂತ್ವಾನ ಧನ ನೀಡಲಾಯಿತು.

ಮೊಗವೀರ ಮಹಾಜನ ಸೇವಾ ಸಂಘದ ನಿಕಟಪೂರ್ವ ಅಧ್ಯಕ್ಷ ಕೆ.ಕೆ ಕಾಂಚನ್, ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲಾ ಅಧ್ಯಕ್ಷ ರಾಜೇಂದ್ರ ಸುವರ್ಣ ಹಿರಿಯಡಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಮೊಗವೀರ ಮಹಾಜನ ಸೇವಾ ಸಂಘದ ಮಾಜಿ ಅಧ್ಯಕ್ಷರಾದ ಹೆರಿಯಣ್ಣ ಚಾತ್ರಬೆಟ್ಟು, ಎಂ.ಎಂ.ಸುವರ್ಣ, ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲಾ ಮಾಜಿ ಅಧ್ಯಕ್ಷ ಶಿವರಾಮ್ ಕೆ.ಎಮ್., ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕದ ಅಧ್ಯಕ್ಷ ಸುನೀಲ್ ಜಿ.ನಾಯ್ಕ ಚಾತ್ರಬೆಟ್ಟು, ಕುಂದಾಪುರ ಘಟಕದ ಅಧ್ಯಕ್ಷ ಚಂದ್ರಹಾಸ ಕೋಣಿ, ಬೈಂದೂರು ಘಟಕದ ಅಧ್ಯಕ್ಷ ರವಿರಾಜ ಚಂದನ್ ಕಳುವಾಡಿ, ಹಾಲಾಡಿ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ, ಸ್ತ್ರೀಶಕ್ತಿಯ ಅಧ್ಯಕ್ಷೆ ಸುಮಿತ್ರಾ ಆನಂದ ಉಪಸ್ಥಿತರಿದ್ದರು.

ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲಾ ಮಾಜಿ ಅಧ್ಯಕ್ಷ ಸದಾನಂದ ಬಳ್ಕೂರು ಸ್ವಾಗತಿಸಿದರು. ಭಾಸ್ಕರ ಬಟ್ಟೆಕುದ್ರು ಪ್ರಾರ್ಥನೆ ಹಾಡಿದರು. ಮೊಗವೀರ ಮಹಾಜನ ಸೇವಾ ಸಂಘ ಕುಂದಾಪುರ ಶಾಖೆಯ ಕಾರ್ಯದರ್ಶಿ ಪ್ರಭಾಕರ ಸೇನಾಪುರ ವರದಿ ವಾಚಿಸಿದರು. ಮೊಗವೀರ ಮಹಾಜನ ಸೇವಾ ಸಂಘ ಕುಂದಾಪುರ ಶಾಖೆಯ ಮಾಜಿ ಕಾರ್ಯದರ್ಶಿ ಸುರೇಶ ವಿಠಲವಾಡಿ ವಂದಿಸಿದರು. ಮೊಗವೀರ ಮಹಾಜನ ಸೇವಾ ಸಂಘ ಕುಂದಾಪುರ ಶಾಖೆಯ ಕೋಶಾಧಿಕಾರಿ ಸುಧಾಕರ ಕಾಂಚನ್ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!