Sunday, September 8, 2024

ಬೈಂದೂರಿನಲ್ಲಿ ರಾಜ್ಯಮಟ್ಟದ ನಾಟಕೋತ್ಸವ ರಂಗ ಸಂಚಲನ -2023 ಉದ್ಘಾಟನೆ

ಬೈಂದೂರು: ತೀರಾ ಗ್ರಾಮೀಣ ಭಾಗದಲ್ಲಿ ಸಂಪರ್ಕ ಸಾಧನೆಗಳ ಕೊರತೆ ಇದ್ದರೂ ಕಲೆ ಸಾಹಿತ್ಯ ಸಾಂಸ್ಕೃತಿಕ ಸಂವಹನಕ್ಕೆ ಕೊರತೆಯಾಗದಂತೆ ಶ್ರಮಿಸುತ್ತಿರುವ ಇಲ್ಲಿನ ಪ್ರತಿಭೆಗಳು ಹಾಗೂ ಸಂಘಟಕರ ಸಾಧನೆ ಅನನ್ಯವಾದುದು ಎಂದು ಉದ್ಯಮಿ ರವೀಂದ್ರ ಕಿಣಿ ಕಂಚಿಕಾನು ಹೇಳಿದರು.

ಅವರು ಸಂಚಲನ ರಿ. ಹೊಸೂರು ಆಶ್ರಯದಲ್ಲಿ ಆಯೋಜಿಸಲಾದ 3 ದಿನಗಳ ರಾಜ್ಯಮಟ್ಟದ ನಾಟಕೋತ್ಸವ ರಂಗ ಸಂಚಲನ -2023 ಉದ್ಘಾಟಿಸಿ ಮಾತನಾಡಿದರು.

ಸ್ಪಂದನಾ ರಿ. ನಾಗರ ನಾಟಕ ತಂಡದ ನಿರ್ದೇಶಕಿ ಎಂ.ವಿ ಪ್ರತಿಭಾ ಶುಭಾಶಂಸನೆಗೈದರು. ಸಂಚಲನ ಕಾರ್ಯಾಧ್ಯಕ್ಷ ತಿಮ್ಮ ಮರಾಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುಲ್ಲಿಬಾರು ಶಾಲೆಯ ಮುಖ್ಯ ಶಿಕ್ಷಕ ಎಸ್. ಮಹಾಬಲೇಶ್ವರ್, ಅತ್ಯಾಡಿ ಶಾಲಾ ಮುಖ್ಯ ಶಿಕ್ಷಕ ಹಾಲೇಶ್‌ಡಿ.ಆರ್., ಉದ್ಯಮಿ ಮಹಾದೇವ ಪೂಜಾರಿ ಕಿಸ್ಮತಿ, ಸಂಸ್ಥೆಯ ಅಧ್ಯಕ್ಷ ಮಹಾದೇವ ಮರಾಠಿ ಉಪಸ್ಥಿತರಿದ್ದರು.

ಸಂಚಲನ ರಿ. ಹೊಸೂರು ಇದರ ಸಂಚಾಲಯ ಸುಧಾಕರ ಪಿ.ಬೈಂದೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ರಾಜು ಮರಾಠಿ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ವಾಸು ಮರಾಠಿ ಸನ್ಮಾನ ಪತ್ರ ವಾಚಿಸಿದರು. ರೇವತಿ ಮರಾಠಿ ವಂದಿಸಿದರು. ಖಜಾಂಚಿ ನಾಗಪ್ಪ ಮರಾಠಿ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!