spot_img
Wednesday, January 22, 2025
spot_img

ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಕೋಟೇಶ್ವರ ವಲಯ ಸಮಿತಿಯ 22ನೇ ವಾರ್ಷಿಕ ಮಹಾಸಭೆ 

ಕುಂದಾಪುರ : ವ್ಯಕ್ತಿಯ ವ್ಯಕ್ತಿತ್ವಕ್ಕೆ ಹೊಸ ರೂಪ ನೀಡುವವರು ಟೈಲರ್ ಗಳು. ಇವರು ಹೊಸ ಹೊಸ ವಿನ್ಯಾಸಗಳ ಆವಿಷ್ಕಾರರು ಎಂದರೆ ತಪ್ಪಿಲ್ಲ. ಇತ್ತೀಚಿನ ದಿನಗಳಲ್ಲಿ ಟೈಲರ್ ಗಳು ಸಂಘಟನಾತ್ಮಕವಾಗಿ ಒಂದಾದರೂ ಸರ್ಕಾರದ ಗಮನ ಸೆಳೆಯುವಲ್ಲಿ ಸಫಲರಾಗದೆ, ಪಿಂಚಣಿ ಮೊದಲಾದ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ವೃದ್ಧಾಪ್ಯದಲ್ಲಿ ಆಸರೆಯಾಗಬಲ್ಲ ಭವಿಷ್ಯನಿಧಿ ಟೈಲರ್ ವೃತ್ತಿಯವರಿಗೆ ಅತೀ ಅವಶ್ಯಕವಾದುದು ಎಂದು ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣ ಗೊಲ್ಲ ಹೇಳಿದರು.

ಕೋಟೇಶ್ವರದ ಶ್ರೀ ಶಾರದಾ ಕಲ್ಯಾಣ ಮಂಟಪದಲ್ಲಿ ನಡೆದ ಕರ್ನಾಟಕ ಸ್ಟೇಟ್ ಟೈಲರ್ಸ್ ಅಶೋಸಿಯೇಷನ್ ನ ಕೋಟೇಶ್ವರ ವಲಯ ಸಮಿತಿಯ 22 ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿ, ಬೀಜಾಡಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ ಮಾತನಾಡಿ, ಬಹು ಮೌಲ್ಯದ ಬಟ್ಟೆ ಖರೀದಿಸಿದರೂ ಅದು ನಮ್ಮನ್ನು ಸಿಂಗರಿಸಲು ಟೈಲರ್ ಗಳು ಬೇಕು. ಇಂತಹ ಪ್ರಾಮುಖ್ಯವಾದ ವೃತ್ತಿ ನಡೆಸುವವರು ಆರಂಭದಲ್ಲಿ ನುರಿತವರೊಂದಿಗೆ ಕಲಿತು ಮುನ್ನಡೆಯಬೇಕು. ಸಮಯ ಪಾಲನೆ ಬಗ್ಗೆ ಗಮನವಿರಬೇಕು ಎಂದು ಸಲಹೆ ಮಾಡಿದರು.

ರಾಜ್ಯ ಸಮಿತಿಯ ಕೋಶಾಧಿಕಾರಿ ಕೆ. ರಾಮಚಂದ್ರ ಮಾತನಾಡಿ, ಟೈಲರ್ ಗಳ ಸಂಘಟನೆಗೆ 24ವರ್ಷ. ಇಷ್ಟು ಸಮಯದಿಂದಲೂ ಭವಿಷ್ಯ ನಿಧಿಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದರೂ ವ್ಯರ್ಥವಾಗಿದೆ. 2018ರಲ್ಲಿ ಸ್ಮಾರ್ಟ್ ಕಾರ್ಡ್ ನೀಡಿದೆ. ಇದರಿಂದೇನೂ ಉಪಯೋಗವಿಲ್ಲ. ಮೊನ್ನಿನ ಬಜೆಟ್ ನಲ್ಲಿ ವಿದ್ಯಾನಿಧಿ ಘೋಷಣೆಯಾಗಿದೆ. ಸಂಘಟನೆ ಬಲಗೊಳ್ಳದೆ ಸರ್ಕಾರ ಗಮನ ನೀಡದು ಎಂದರು.

ಕುಂದಾಪುರ ಕ್ಷೇತ್ರ ಸಮಿತಿ ಅಧ್ಯಕ್ಷ ರಾಜೀವ ಆರ್. ಪೂಜಾರಿ ಮಾತನಾಡಿ,  ಮಾರ್ಚಿ 7 ರಂದು ನಡೆಯುವ ‘ಟೈಲರ್ಸ್ ಡೇ’ ಆಚರಣೆಯಲ್ಲಿ ಎಲ್ಲ ವೃತ್ತಿ ಬಾಂಧವರೂ ಭಾಗವಹಿಸಬೇಕು ಎಂದು ಮನವಿ ಮಾಡಿದರು. 

 ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ, ಉಡುಪಿ ಜಿಲ್ಲಾಧ್ಯಕ್ಷ ಗುರುರಾಜ ಎಂ. ಶೆಟ್ಟಿ, ಜಿಲ್ಲಾ ಕೋಶಾಧಿಕಾರಿ ಯೋಗೀಶ್ ಕಾಮತ್, ಅಮಿತಾ ನಾಗರಾಜ್ ಶೆಟ್ಟಿ, ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಹೇಮಾ ಆರ್., ಕೋಶಾಧಿಕಾರಿ ಸುಧಾಕರ ಎಂ. ಶುಭ ಹಾರೈಸಿದರು.

ಕೋಟೇಶ್ವರ ವಲಯ ಸಮಿತಿಯ ಅಧ್ಯಕ್ಷ ದಿನೇಶ್ ಕುಲಾಲ, ಮೊಳಹಳ್ಳಿ ಸಭಾಧ್ಯಕ್ಷತೆ ವಹಿಸಿದ್ದರು. ಟೈಲರ್ ವೃತ್ತಿಬಾಂಧವರಾದ ಜಯಲಕ್ಷ್ಮೀ  ಅನಂತಯ್ಯ ಆಚಾರ್ಯ, ಕೃಷ್ಣಯ್ಯ ಆಚಾರ್ಯ, ಸೀತಾರಾಮ ಆಚಾರ್ಯ ಬೇಳೂರು, ಸಂಜೀವ ಶೆಟ್ಟಿಗಾರ್ ಮತ್ತು ಸೀತಾರಾಮ ಆಚಾರ್ಯ ಕೋಟೇಶ್ವರ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಜಯಲಕ್ಷ್ಮೀ ಸತೀಶ್, ಸವಿತಾ ಅಶೋಕ್, ಸುಜಾತಾ, ಶೀಲಾ ಸುರೇಶ್ ಆಚಾರ್ಯ ಮತ್ತು ವೀಣಾ ಆಚಾರ್ಯ ಸನ್ಮಾನಿತರನ್ನು ಪರಿಚಯಿಸಿದರು. ಸನ್ಮಾನಿತರ ಪರವಾಗಿ ಜಯಲಕ್ಷ್ಮೀ ಅನಂತಯ್ಯ ಆಚಾರ್ಯ ಮಾತನಾಡಿ ಕೃತಜ್ಞತೆ ಸಲ್ಲಿಸಿದರು. ಅರ್ಹ ವೃತ್ತಿ ಬಾಂಧವರಿಗೆ ಸಹಾಯಧನ ವಿತರಿಸಲಾಯಿತು.

ಟೈಲರ್ ಸಂಘಟನೆಗಾಗಿ ಶ್ರಮಿಸಿದ ಕೋಟೇಶ್ವರದ ಹಿರಿಯ ಟೈಲರ್ ಸೀತಾರಾಮ ಆಚಾರ್ಯರನ್ನು ಗೌರವಿಸಲಾಯಿತು. ವಿವಿಧ ವಲಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಗೀತಾ ರಮೇಶ್ ವರದಿ ವಾಚಿಸಿದರು. ರಾಘವ, ಕೆ. ಆರ್. ಟೈಲರ್ ಲೆಕ್ಕಪತ್ರ ಮಂಡಿಸಿದರು. ರೂಪಾ ಗೋಪಾಲ್ ಸ್ವಾಗತಿಸಿದರು. ನಾಗೇಶ್, ಪ್ರಕಾಶ್ ಆಚಾರ್, ರತನ್ ಟೈಲರ್, ಮಂಜುನಾಥ, ಶ್ರೀಧರ್ ಆಚಾರ್, ರೂಪಾ, ಜ್ಯೋತಿ ರಾಘವೇಂದ್ರ, ಕುಮಾರ್, ರಮೇಶ್ ಮತ್ತು ಬಾಷಾ  ಅತಿಥಿಗಳನ್ನು ಗೌರವಿದರು. ಶ್ರೀಧರ ಜೋಗಿ, ಕೋಟೇಶ್ವರ ಕಾರ್ಯಕ್ರಮ ನಿರೂಪಿಸಿ, ದಿನೇಶ್ ವಂದಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!